You are currently viewing ದಾವಣಗೇರಿ, ವಿಜಯನಗರ, ಗದಗ ಜಿಲ್ಲೆಯ ಪೊಲೀಸರಿಗೆ ಬೇಕಾಗಿದ್ದ ಈ ಖದೀಮ.

ದಾವಣಗೇರಿ, ವಿಜಯನಗರ, ಗದಗ ಜಿಲ್ಲೆಯ ಪೊಲೀಸರಿಗೆ ಬೇಕಾಗಿದ್ದ ಈ ಖದೀಮ.

ವಿಜಯನಗರ… ಹರಪನಹಳ್ಳಿ ಪಟ್ಟಣದಲ್ಲಿ ಅನುಮಾನಸ್ಪದವಾಗಿ ಬೈಕಲ್ಲಿ ಸಂಚರಿಸುತಿದ್ದ ವ್ಯಕ್ತಿಯನ್ನ ವಶಕ್ಕೆ ಪಡೆದ ಇಲ್ಲಿನ  ಪಿ.ಎಸ್.ಐ.ಪ್ರಕಾಶ್ ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದೆ. ಹೌದು ಕಳೆದ ಹಲವು ದಿನಗಳಿಂದ ವಿಜಯನಗರ ಜಿಲ್ಲೆ ಹರಪನಹಳ್ಳಿ ಮತ್ತು ಅಕ್ಕ ಪಕ್ಕದ ಪಟ್ಟಣಗಳಲ್ಲಿ ಮೊಟರ್ ಬೈಕ್ ಕಳ್ಳತನಮಾಡಿ ಪರಾರಿಯಾಗುತಿದ್ದ ವ್ಯಕ್ತಿ ನಿನ್ನೆ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.

ಹರಪನಹಳ್ಳಿ ತಾಲೂಕಿನ ಕನಕನ ಬಸಾಪುರ ಗ್ರಾಮದ ಪೂಜಾರ್ ಕೊಟ್ರೇಶ್ ಬಂದಿತ ಆರೋಪಿಯಾಗಿದ್ದು, ಬಂದಿತನಿಂದ 2 ಲಕ್ಷದ 50 ಸಾವಿರ ಮೌಲ್ಯದ 9ಮೊಟರ್ ಬೈಕ್ ವಶಕ್ಕೆ ಪಡೆದಿದ್ದಾರೆ ಹರಪನಹಳ್ಳಿ ಪೊಲೀಸರು. ಹರಪನಹಳ್ಳಿ ಡಿ.ವೈ.ಎಸ್ಪಿ ಹಾಲಮೂರ್ತಿರಾವ್ ಮತ್ತು ಸಿ.ಪಿ.ಐ.ನಾಗರಾಜ್ ಎಂ.ಕಮ್ಮಾರ್ ಮಾರ್ಗದರ್ಶನದಲ್ಲಿ‌ ನಡೆದ ಈ ತನಿಖೆಯಲ್ಲಿ ವಿಚಾರಣೆ ನಡೆಸಿದಾಗ ದಾವಣಗೇರಿ,ಕೊಟ್ಟೂರು ಮತ್ತು ಗದಗ ಬಾಗದಿಂದ ಮೊಟರ್ ಬೈಕ್ ಗಳನ್ನ ಕಳ್ಳತನ ಮಾಡಿ ತಂದಿರುವುದಾಗಿ ಒಪ್ಪಿದ್ದಾನೆ.ತಮ್ಮ ಇಲಾಖೆಯ ಕಾರ್ಯವೈಖರಿಯನ್ನ ವಿಜಯನಗರ ಎಸ್ಪಿ ಡಾಕ್ಟರ್ ಅರುಣ್ ಕೆ ಕೊಂಡಾಡಿದ್ದಾರೆ.

ವರದಿ.ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.