You are currently viewing ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಮೂರು ಜನ ಸಾವು ಇಬ್ಬರಿಗೆ ಗಾಯ.

ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಮೂರು ಜನ ಸಾವು ಇಬ್ಬರಿಗೆ ಗಾಯ.

ವಿಜಯನಗರ….ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿಯ ರಾಷ್ಷ್ರೀಯ ಹೆದ್ದಾರಿ 50ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಂದು ಮದ್ಯಾಹ್ನ 1:30ರ ಸುಮಾರಿಗೆ ನಡೆದ ಈ ಘಟನೆಯಲ್ಲಿ ಮೂರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಾವನ್ನಪ್ಪಿದ ಮೂರು ಜನ ರಾಜಸ್ಥಾನ ಮೂಲದವರಾಗಿದ್ದಾರೆ.

ಮೃತರ ಹೆಸರುಗಳಿಂತಿವೆ.

1)ಶ್ರೀ ಮತಿ ಸಲ್ಮಾ ಗಂಡ ಮುಬಾರಕ್ 31ವರ್ಷ ಮನೆ ಕೆಲಸ ರಾಜಸ್ತಾನ್.

2)ಅಜಮಲ್ ತಂದೆ ಗಾಬರು 35ವರ್ಷ ಮಾರ್ಬಲ್ ಕೆಲಸ, ಮುಸ್ಲಿಂ ಸಾ -ಪಾಲ್ವಡ್ ಗ್ರಾಮ, ಗಂಗಾಪುರ್ -ತಾಲೂಕ್  ರಾಜಸ್ತಾನ್.

3)ರಹಿಜ್ ತಂದೆ ಬಾಬುಸಾಬ್ 30 ವರ್ಷ ಮುಸ್ಲಿಂ, ಮಾರ್ಬಲ್ ಕೆಲಸ,ರಾಜಸ್ತಾನ್

ಘಟನೆಯಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗಾಯಾಳುಗಳ ಹೆಸರು ಇಂತಿದೆ.

1)ಶಾಹಿದ್ ಖಾನ್ ತಂದೆ ಗಬುರ್ ಖಾನ್ ವಯಸ್ಸು-27, ಮುಸ್ಲಿಂ, ಮಾರ್ಬಲ್ ಕೆಲಸ, ಸಾ -ರಾಜಸ್ತಾನ್(ಮೋಣ ಕೈ ಗಾಯ )

2)ಮಹಮ್ಮದ್ ತಂದೆ ಮುಬಾರಕ್ ವಯಸ್ಸು 10 ವರ್ಷ (ಮಗು -ಹಣೆಗೆ ಸಾದಾ ಗಾಯ )

ಒಟ್ಟು -7 ಜನ ಕೇರಳದಿಂದ ಮಾರ್ಬಲ್ ಕೆಲಸ ಮುಗಿಸಿ ರಾಜಸ್ತಾನ್ ಗೆ ಡಿ.ಎಲ್.4 ಸಿ.ಎನ್.ಬಿ.4386 ಮಹಿಂದ್ರಾ ಕ್ಸೊಲೊ ಕಾರಿನಲ್ಲಿ ಪ್ರಯಾಣ ಮಾಡುತಿದ್ದರು ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಗತಿ ಕಂಪನಿಯ ಮುಂದಿನ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಚಾಲಕನ ಅತೀ ವೇಗದ ಚಾಲನೆಯಿಂದ ಈ ಅಪಘಾತ ಸಂಭವಿಸಿದ್ದು, ಚಾಲಕ ಮುಬಾರಕ್ ನಿರ್ಲಕ್ಷದ ವಿರುದ್ದ ಮರಿಯಮ್ಮನಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಹೊಟ್ಟೆ ಪಾಡಿಗೆ ಹುಟ್ಟಿದ ನಾಡು ಬಿಟ್ಟು‌ ಮತ್ತೊಂದು ನಾಡಿಗೆ ದುಡಿಯಲು ಬಂದ ಕುಟುಂಭ ಇದೀಗ ಹೇಳ ಹೆಸರಿಲ್ಲದೆ ನಾಶವಾಗಿದ್ದು ಬದುಕುಳಿದ ಒಂಟಿ ಬಾಲಕನ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.