You are currently viewing ಕೊಲೆ ನಡೆದ ಮೂರು ದಿನಗಳಲ್ಲೇ ಆರೋಪಿಗಳನ್ನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದ ಕುಡುತಿನಿ ಪೊಲೀಸರು.

ಕೊಲೆ ನಡೆದ ಮೂರು ದಿನಗಳಲ್ಲೇ ಆರೋಪಿಗಳನ್ನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದ ಕುಡುತಿನಿ ಪೊಲೀಸರು.

ಬಳ್ಳಾರಿ..ಹೌದು ಹಳೆಯ ವೈಷಮ್ಯ ಮತ್ತು ಹಣದ ವ್ಯವಹಾರದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನ ಕೊಲೆಮಾಡಿದ್ದ ನಾಲ್ವರು ಆರೋಪಿಗಳನ್ನ ಬಂದಿಸುವಲ್ಲಿ ಕುಡುತಿನಿ ಪೊಲೀಸರು ಯಶಸ್ವಿಯಾಗಿದ್ದಾರೆ. ತೋರಣಗಲ್ಲಿನ ವಿನೋದ ಖನ್ನಾ ತಂದೆ ಶ್ರೀನಿವಾಸ ಅವರನ್ನ ದಿನಾಂಕ 11/06/2022 ರ ಬೆಳಗಿನ ಜಾವ ಹನ್ನೆರಡು ವರೆ ಸುಮಾರಿಗೆ ಮನೆಯಿಂದ ಕರೆದೊಯ್ದ ಆರೋಪಿತರು,ದೇವಲಾಪುರ ಗ್ರಾಮದ ಬಳಿಯ ಕುರೇಕೊಪ್ಪ, ನಲ್ಲಾಪುರ ಉಪ್ಪಾರಹಳ್ಳಿ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಮಾಡಿದ್ದರು, ನಂತರ ಮೃತ ದೇಹ ಯಾರಿಗು ಕಾಣದಂತೆ ತುಂಗಭದ್ರ ಹೆಚ್.ಎಲ್.ಸಿ.ಕಾಲುವೆಗೆ ಎಸೆದಿದು ಪರಾರಿಯಾಗಿದ್ರು.

ಪ್ರಕರಣವನ್ನ ಕೈಗೆತ್ತಿಕೊಂಡ ಕುಡುತಿನಿ ಪೊಲೀಸ್ ಠಾಣೆಯ ಅಮರೇಗೌಡ ಹಾಗೂ ತೋರಣಗಲ್ಲು ಪೊಲೀಸ್ ಠಾಣೆಯ ಕಾಳಿಂಗ ಕೊಲೆ ನಡೆದು ಮೂರು ದಿನಗಳಲ್ಲೇ ನಾಲ್ವರು ಆರೋಪಿಗಳನ್ನ ಬಂದಿಸಿ ಕೈಕೊಳ ತೊಡಿಸಿದ್ದಾರೆ.
1)ವಸಂತಕುಮಾರ 28ವರ್ಷ
2)ವೆಂಕಟಸ್ವಾಮಿ 23ವರ್ಷ
3)ತಿಪ್ಪಾರೆಡ್ಡಿ 22ವರ್ಷ
4)ಹುಸೇನ್ 20ವರ್ಷ
5)ಹರೀಶ್ 19ವರ್ಷ ಬಂದಿತ ಆರೋಪಿಗಳಾಗಿದ್ದಾರೆ.
ಬಂದಿತರಿಂದ ಕೆ.ಎ.02 ಎಂ.ಡಿ.0891 ನಂಬರಿನ ಸ್ಕಾರ್ಪಿಯೊ ಕಾರನ್ನ ಸಹ ವಶಕ್ಕೆ ಪಡೆದಿದ್ದಾರೆ.

ಬಳ್ಳಾರಿಯ ಅಡಿಷನಲ್ ಎಸ್ಪಿ ಗುರುನಾಥ ವತ್ತೂರ್ ಮತ್ತು  ಡಿ.ಎಸ್.ಪಿ.ಎಸ್.ಎಸ್.ಕಾಶಿ ಹಾಗೂ ಸಿ.ಪಿ.ಐ.ಚಂದನ್ ಗೋಪಾಲ್ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯನ್ನ ಮೆಚ್ಚಿರುವ ಬಳ್ಳಾರಿಯ ಎಸ್ಪಿ ಸೈದುಲ್ಲಾ ಅದಾವತ್ ತನಿಖಾ ತಂಡಕ್ಕೆ ವಿಷೇಶ ಬಹುಮಾನ ಘೊಷಣೆಮಾಡಿದ್ದಾರೆ.

ಶಿರಗುಪ್ಪ ಪೊಲೀಸರ ಭರ್ಜರಿ ಕಾರ್ಯಾಚರಣೆ ಒಂದು ಲಾರಿ ಲೊಡ್ ಪಡಿತರ ಅಕ್ಕಿ ವಶಕ್ಕೆ.

ಹೌದು ಇಂದು ಬೆಳಗಿನ ಜಾವ ಬಳ್ಳಾರಿ ಜಿಲ್ಲೆ ಶಿರಗುಪ್ಪ ಪಟ್ಟಣದಿಂದ ಸಿಂದನೂರು ಕಡೆ ಹೋಗುತಿದ್ದ ಲಾರಿಯಲ್ಲಿ ಪಡಿತರ ಅಕ್ಕಿ ಸಾಗಾಟಮಾಡುವ ಮಾಹಿತಿ ತಿಳಿದ ಶಿರಗುಪ್ಪ ಪೊಲೀಸರು ಯಶಸ್ವಿ ಕಾರ್ಯಾಚರಣೆ ಮಾಡುವ ಮೂಲಕ ಅಕ್ರಮ ಕುಳಗಳಿಗೆ ಖಡಿವಾಣ ಹಾಕಿದ್ದಾರೆ.  ಎ.ಪಿ 05 ಟಿ.ಟಿ.9121 ನಂಬರಿನ ಲಾರಿಯಲ್ಲಿ 45ರಿಂದ 50ಕೇಜಿ ತೋಗುವ 514 ಚೀಲ ಪಡಿತರ ಅಕ್ಕಿಯನ್ನ  ಲಾರಿ ಸಮೇತ ವಶಕ್ಕೆ ಪಡೆದಿದ್ದಾರೆ. ಇನ್ನು ಈ ಅಕ್ರಮದಲ್ಲಿ ಬಾಗಿಯಾಗಿದ್ದ 
ಶಿವಶರಣಪ್ಪ ಎಂಬ 22ವರ್ಷ ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದು, ತಲೆ ಮರೆಸಿಕೊಂಡಿರುವ ಮೊಹಮ್ಮದ್ ಆಲಿ, ಜಲಾಲಿ ಜಮಾರ್ಧನ,ನಾಗರಾಜ್ ಎನ್ನುವ ಮೂರು ಜನ ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ.

ಡಿ.ಎಸ್.ಪಿ. ಹಾಗೂ ಸಿಪಿಐ. ಯಶವಂತ್ ಬಿಸನಳ್ಳಿ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯನ್ನ ಶಿರಗುಪ್ಪ ಪಿ.ಎಸ್.ಐ.ನಾರಾಯಣಸ್ವಾಮಿ, ಪಿ.ಸಿ.ಕಾಶಿನಾಥ್.ಅಮರೇಶ್ ಕಾರ್ಯಾಚರಣೆಯಲ್ಲಿ ಬಾಗಿಯಾಗಿದ್ದರು. ಸಿಬ್ಬಂದಿಗಳ ಈ ಕಾರ್ಯಾಚರಣೆಯನ್ನ ಮೆಚ್ಚಿದ ಬಳ್ಳಾರಿ ಎಸ್ಪಿ ಸೈದುಲ್ಲಾ ಅದಾವತ್ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ಬಳ್ಳಾರಿ.