You are currently viewing ದೀಪಾವಳಿ ಪೂಜೆಗೆ ಇಟ್ಟಿದ್ದ ಬೆಳ್ಳಿಯ ವಸ್ತುಗಳನ್ನ ಕದ್ದಿದ್ದವರ ಕೈಗೆ ಕೊಳ.

ದೀಪಾವಳಿ ಪೂಜೆಗೆ ಇಟ್ಟಿದ್ದ ಬೆಳ್ಳಿಯ ವಸ್ತುಗಳನ್ನ ಕದ್ದಿದ್ದವರ ಕೈಗೆ ಕೊಳ.

ವಿಜಯನಗರ (ಹೊಸಪೇಟೆ). ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇವರ ಮನೆಯಲ್ಲಿ ಇಟ್ಟಿದ್ದ ಬೆಳ್ಳಿ ಸಾಮಾನುಗಳನ್ನ ಕದ್ದಿದ್ದ ಆರೋಪಿಗಳನ್ನ ಬಂದಿಸುವಲ್ಲಿ ಹೊಸಪೇಟೆ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. 

ಬಂದಿತರಿಂದ 2ಲಕ್ಷ 74ಸಾವಿರ ಮೌಲ್ಯದ 5.48ಕೆ.ಜಿ.ತೂಕದ ಬೆಳ್ಳಿಯ ಪೂಜಾ ಸಾಮಗ್ರಿಗಳನ್ನ ವಶಕ್ಕೆ ಪಡೆದಿರುವ ಪೊಲೀಸರು. ಬಂಟ್ರು ಪವಾಡೆಪ್ಪ, ಹನುಮೇಶ, ಕೆ.ಮಣಿಕಂಟ ಬಂದಿತ ಆರೋಪಿಗಳಾಗಿದ್ದಾರೆ.

 25/10/2022ರ ಮದ್ಯರಾತ್ರಿ ಹೊಸಪೇಟೆ ನಗರದ ಅನಂತಶಯನಗುಡಿಯಲ್ಲಿರುವ ಬಿಜೆಪಿ ಮುಖಂಡ ಅಯ್ಯಾಳಿ ತಿಮ್ಮಪ್ಪ ಇವರ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಆರೋಪಿತರು, ದೇವರ ಮನೆಯಲ್ಲಿದ್ದ ಬೆಳ್ಳಿಯ ವಸ್ತುಗಳನ್ನ ಕದ್ದು ಪರಾರಿಯಾಗಿದ್ದರು.

ಈ ಸಂಭಂದ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ದೂರು ದಾಖಲಾಗಿದ್ದು, ದೂರು ಪಡೆದ ಪೊಲೀಸರು ತನಿಖೆ ಕೈಗೊಂಡು ಖದೀಮರ ಕೈಗೆ ಕೊಳತೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸಪೇಟೆ ಡಿವೈಎಸ್ಪಿ ವಿಶ್ವನಾಥ ರಾವ್ ಕುಲಕರ್ಣಿ ಮಾರ್ಗದರ್ಶನದಲ್ಲಿ ನಡೆದ ಈ ತನಿಖೆಯ ಜವಾಬ್ದಾರಿಯನ್ನ ಇನ್ಸಪೆಕ್ಟರ್ ಶ್ರೀನಿವಾಸ್ ಮೇಟಿ ವಹಿಸಿಕೊಂಡಿದ್ದರು. ಸಿಬ್ಬಂದಿಗಳಾದ ಮಂಜುನಾಥ ಮೇಟಿ.ಕೊಟ್ರೇಶ್ ಏಳಂಜಿ, ಕೊಟ್ರೇಶ್.ಜೆ.ಅಡಿವೆಪ್ಪ, ಚಂದ್ರಪ್ಪ.ಬಿ. ನಾಗರಾಜ್ ಬಿ. ಸಂತೋಷ್, ನಜೀರ್, ಬಾಗಿಯಾಗಿದ್ದರು. ತಮ್ಮ ಸಿಬ್ಬಂದಿಗಳ ಕಾರ್ಯವೈಖರಿ ಮೆಚ್ಚಿದ ವಿಜಯನಗರ ಎಸ್ಪಿ ಡಾಕ್ಟರ್ ಅರುಣ್ ಕೆ. ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.