ಯುವಕ ನಾಪತ್ತೆ ಪ್ರಕರಣ ದಾಖಲು


ಬಳ್ಳಾರಿ.. ನಗರದ ಗ್ರಾಮಿಣ ಪೋಲಿಸ್ ಠಾಣೆ ವ್ಯಾಪ್ತಿಯ ಶಾಂತಿ ನಗರದ ನಿವಾಸಿಯಾದ ಸುಮಾರು 25 ವರ್ಷದ ಕೃಷ್ಣ ಎಂಬ ಯುವಕ ಸೆ.6 ರಂದು ಕಾಣೆಯಾಗಿರುವ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೋಲಿಸ್ ಸಬ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಾಣೆಯಾದ ಯುವಕ ಸೆ.6 ರಂದು ಬೆಳಿಗ್ಗೆ 7.30ಕ್ಕೆ ಮನೆಯನ್ನು ಬಿಟ್ಟು ಹೋದವನು ಇನ್ನು ಮನೆಗೆ ವಾಪಸ್ ಬಂದಿರುವುದಿಲ್ಲ ಎಂದು ಯುವಕನ ತಾಯಿ ರಾಮಲಕ್ಷ್ಮಿತಿಮ್ಮರೆಡ್ಡಿ ಅವರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.


ಕಾಣೆಯಾದ ಯುವಕನ ಚಹರೆಯ ಗುರುತು: ಸುಮಾರು 5.2 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ಮನೆಯಿಂದ ಹೋಗುವಾಗ ಕಪ್ಪು ಬಣ್ಣದ ಜಿನ್ಸ್ ಪ್ಯಾಂಟ್ ಕಪ್ಪು ಬಣ್ಣದ ಆಪ್ ಶರ್ಟ್ ಧರಿಸಿರುತ್ತಾನೆ. ಕನ್ನಡ ಭಾಷೆಯನ್ನು ಮಾತನಾಡುತ್ತಾನೆ.
ಈ ಮೇಲ್ಕಂಡ ಯುವಕನ ಬಗ್ಗೆ ಸುಳಿವು ಅಥವಾ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಗ್ರಾಮಿಣ ಪೋಲಿಸ್ ಠಾಣೆ ದೂ.08392276461/9480803049 ಪೋಲಿಸ್ ಕಂಟ್ರೋಲ್ ರೂಂ ದೂ. 08392-258100 ಗೆ ಸಂರ್ಪಕಿಸಬಹುದು ಎಂದು ತಿಳಿಸಿದ್ದಾರೆ.