ಕುರುಗೋಡು ಪುರಸಭೆ ವ್ಯಾಪ್ತಿಯಲ್ಲಿ ವಸತಿ ಸೌಲಭ್ಯ:ಅರ್ಜಿ ಆಹ್ವಾನ


ಬಳ್ಳಾರಿ. ಕುರುಗೋಡು ಪುರಸಭೆ ವ್ಯಾಪ್ತಿಯಲ್ಲಿ ಖಾಲಿ ನಿವೇಶನ ಹೊಂದಿದ್ದು ವಸತಿ ರಹಿತರಾಗಿರುವ ಬಡ ಜನರಿಗೆ ವಾಜಪೇಯಿ ನಗರ ವಸತಿ ಯೋಜನೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ನಗರ ವಸತಿ ಯೋಜನೆಗಳಡಿಯಲ್ಲಿ ಒಟ್ಟು 75 ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಗುರಿ ಇದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕುರುಗೋಡು ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಜೂರಾದ ಮನೆಗಳ ವಿವರ: ಡಾ.ಬಿ.ಆರ್. ಅಂಬೇಡ್ಕರ್ ನಗರ ವಸತಿ ಯೋಜನೆ. ಪ.ಜಾತಿ 13,ಪ.ಪಂಗಡ 5 ಸೇರಿದಂತೆ ಒಟ್ಟು 18. ವಾಜಪೇಯಿ ನಗರ ವಸತಿ ಯೋಜನೆ ಅಡಿ ಸಾಮಾನ್ಯ 49, ಅಲ್ಪಸಂಖ್ಯಾತರು 8 ಒಟ್ಟು 57. ಮನೆಗಳು ಮಂಜೂರಾಗಿವೆ.
ಅರ್ಜಿಯನ್ನು ಪೆ.7ರೊಳಗೆ ದೃಢಿಕೃತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು
ಅರ್ಜಿಯ ಜೊತೆಗೆ ಚಾಲ್ತಿ ವರ್ಷದ ಫಾರಂ-3 (ನಮೂನೆ-3), ಚಾಲ್ತಿ ಸಾಲಿನವರೆಗೆ ಪಾವತಿಸಿದ ಆಸ್ತಿ ತೆರಿಗೆ ರಸೀದಿ, ಚಾಲ್ತಿ ಸಾಲಿನವರೆಗೆ ಪಾವತಿಸಿದ ನೀರಿನ ತೆರಿಗೆ ರಸೀದಿ, ಚಾಲ್ತಿ ಸಾಲಿನ ಆರ್.ಡಿ. ಸಂಖ್ಯೆ ಇರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಕುಟುಂಬದ ಎಲ್ಲಾ ಸದಸ್ಯರ ಆಧಾರ ಕಾರ್ಡ್ ಮತ್ತು ಒಟರ್ ಕಾರ್ಡ್, ಬ್ಯಾಂಕ್ ಖಾತೆ ಜೆರಾಕ್ಸ್, ಪಡಿತರ ಚೀಟಿ, 3-ಫೋಟೋಗಳನ್ನು ಲಗತ್ತಿಸಬೇಕು.
ಷರತ್ತುಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಕುರುಗೋಡು ಪುರಸಭೆ ಕಚೇರಿಯನ್ನು ಸಂಪರ್ಕಿಸಬಹುದು.
-*-