You are currently viewing ಹೊಸಪೇಟೆ ನಗರವನ್ನ ಪ್ಲಾಸ್ಟಿಕ್ ಮುಕ್ತ ಮಾಡಲು ಹೊರಟಿರುವ ಅಧಿಕಾರಿಗಳಿಗೆ ಇಲ್ಲಿನ ಜನ ಪ್ರತಿನಿಧಿಗಳ ಕೊಕ್ಕೆ.

ಹೊಸಪೇಟೆ ನಗರವನ್ನ ಪ್ಲಾಸ್ಟಿಕ್ ಮುಕ್ತ ಮಾಡಲು ಹೊರಟಿರುವ ಅಧಿಕಾರಿಗಳಿಗೆ ಇಲ್ಲಿನ ಜನ ಪ್ರತಿನಿಧಿಗಳ ಕೊಕ್ಕೆ.

ವಿಜಯನಗರ.. ಇತ್ತೀಚೆಗೆ ಹೊಸಪೇಟೆ ನಗರಸಭೆಯ ಅಧಿಕಾರಿಗಳು ನಗರದ ಸಣ್ಣ ಪುಟ್ಟ ಅಂಗಡಿಯಲ್ಲಿ ಬಳಕೆ ಆಗುವ ಪ್ಲಾಸ್ಟಿಕ್ ಮೇಲೆ ನಿಷೇದ ಹೇರಲು ಹಗಲಿರುಳು ಶ್ರಮಿಸುತಿದ್ದಾರೆ. ತಿಂಗಳಲ್ಲಿ ಒಂದೆರಡು ಬಾರಿ ಅಂಗಡಿಗಳ ಮೇಲೆ ದಾಳಿ ನಡೆಸುವ ಇಲ್ಲಿನ ಪರಿಸರ ಇಂಜಿನಿಯರ್ ಮತ್ತು ತಂಡ, ಪ್ರತಿ ಬಾರಿ ಹತ್ತಾರು ಕೇಜಿಯಷ್ಟು ಪ್ಲಾಸ್ಟಿಕ್ ವಶಕ್ಕೆ ಪಡೆದು ವ್ಯಾಪಾರಸ್ತರಿಗೆ ದಂಡ ವಿಧಿಸುವ ಮೂಲಕ ಮತ್ತೊಮ್ಮೆ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ಮಾಡದಂತೆ ಎಚ್ಚರಿಕೆ ನೀಡುತಿದ್ದಾರೆ.

ಅಧಿಕಾರಿಗಳ ಈ ಕ್ರಮ ಮೆಚ್ಚುವಂತದ್ದೇ ಸರಿ. ಆದರೆ ಅಧಿಕಾರಿಗಳ ಈ ನಡೆ ಹೊಸಪೇಟೆ ನಗರದಲ್ಲಿ ಇತ್ತೀಚೆಗೆ ಚೆರ್ಚೆಗೆ ಗ್ರಾಸವಾಗುತ್ತಿದೆ. ಜನ ಸಾಮಾನ್ಯರಿಗೆ ಒಂದು ನ್ಯಾಯ, ಇಲ್ಲಿನ ಜನ ಪ್ರತಿನಿಧಿಗಳಿಗೆ ಒಂದು ನ್ಯಾಯನಾ ಎಂದು ಹೊಸಪೇಟೆ ನಾಗರೀಕ ಇಲ್ಲಿನ ಅಧಿಕಾರಿಗಳನ್ನ ಪ್ರಶ್ನಿಸುವುದುಕ್ಕೆ ಪ್ರಾರಂಬಿಸಿದ್ದಾನೆ. ಹೌದು  ಜನಗಳು ಹೀಗೆ ಪ್ರಶ್ನೆಮಾಡಲು ಕಾರಣ ಇತ್ತೀಚೆಗೆ ಹೊಸಪೇಟೆ ನಗರದಲ್ಲಿ ಅಲ್ಲಲ್ಲಿ ಕಂಡು ಬರುವ ಪ್ಲಾಸ್ಟಿಕ್ ಪ್ಲಕ್ಸ್ ಮತ್ತು ಬ್ಯಾನರ್ ಗಳು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ನಾಶವಾಗುತ್ತೆ ಎಂದು ಬೆಳಗ್ಗೆಯಿಂದ ಸಂಜೆಯ ವರೆಗೆ ಹೊಸಪೇಟೆ ನಗರಸಭೆಯ ಕಸ ಸಂಗ್ರಹಣೆಯ ವಾಹನದಲ್ಲಿ ಜನ ಸಾಮಾನ್ಯರಿಗೆ ಅರಿವು ಮೂಡಿಸುವ ಸಂದೇಶವನ್ನ ಸಾರುತ್ತಲೇ ಇರುವ ಅಧಿಕಾರಿಗಳು ಜನ ಪ್ರತಿನಿಧಿಗಳಿಗೆ ಯಾಕೆ ಅರಿವು ಮೂಡಿಸುವ ಕೆಲಸವನ್ನ ಮಾಡಬಾರದು ಎನ್ನುತಿದ್ದಾರೆ.

ಹೌದು ಇತ್ತೀಚೆಗೆ ಹೊಸಪೇಟೆ ನಗರಸಭೆಯ ಚುನಾಯಿತ ಪ್ರತಿನಿಧಿಗಳು ತಮ್ಮ ಜಯದ ವಿಜೃಂಭಣೆಯನ್ನ ಪ್ರದರ್ಶಿಸಲು ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಪ್ಲಕ್ಸ್ ಬ್ಯಾನರ್ ಗಳನ್ನ ಅಳವಡಿಕೆ ಮಾಡಿದ್ದಾರೆ. ಇನ್ನು ನಗರದಲ್ಲಿ ಹೀಗೆ ಅಳವಡಿಕೆ ಮಾಡಿರುವ ಪ್ರತಿಯೊಂದು ಪ್ಲಕ್ಸ್ ಮತ್ತು ಬ್ಯಾನರ್ ಗಳೆಲ್ಲವೂ ಪ್ಲಾಸ್ಟಿಕ್ ನಿಂದಲೇ ನಿರ್ಮಾಣವಾಗಿವೆ. ಹೀಗೆ ಅಳವಡಿಕೆ ಆಗಿರುವ ಪ್ಲಾಸ್ಟಿಕ್ ಪ್ಲಕ್ಸ್ ಬ್ಯಾನರ್ ನಿಂದಲೂ ಪರಿಸರ ಹಾನಿಯಾಗುವುದು ಎಂದು ಸಣ್ಣ ಮಕ್ಕಳಿಗೆ ಕೂಡ ಅರಿವಿದೆ. ಹೀಗಿದ್ದರೂ ಈ ಜನ ಪ್ರತಿನಿಧಿಗಳಿಗೆ ಯಾಕೆ ಅವಕಾಶ ಕೊಟ್ಟರು ಇಲ್ಲಿನ ಅಧಿಕಾರಿಗಳು, ಒಂದು ವೇಳೆ ಜನ ಸಾಮಾನ್ಯರು ಇದೇ ತಪ್ಪನ್ನ ಮಾಡಿದರೆ ದಂಡ ವಿಧಿಸುವ ಇಲ್ಲಿನ ನಗರಸಭೆ ಅಧಿಕಾರಿಗಳು, ಈ ಪ್ಲಕ್ಸ್ ಬ್ಯಾನರ್ ಗಳನ್ನ ಹಾಕಲು ಹೇಗೆ ಪರವಾನಿಗೆ ನೀಡುತ್ತಾರೆ ಎಂದು ಜನ ಸಾಮಾನ್ಯರು ಆಕ್ರೋಶ ಹೊರಹಾಕುತಿದ್ದಾರೆ.

ಇ‌ನ್ನು ನಗರವನ್ನ ಸ್ವಚ್ಚವಾಗಿ ಇಡುವ ಹಾಗೂ ಅಭಿವೃದ್ಧಿ ಪಡಿಸುವ ಪಣ ತೊಟ್ಟು ಅಧಿಕಾರಕ್ಲೆ ಬರುವ ಇಲ್ಲಿನ ಜನ ಪ್ರತಿನಿಧಿಗಳು, ಮೊದಲಿಗೆ ನಿಯಮಗಳನ್ನ ಉಲ್ಲಂಘನೆ ಮಾಡುವವರು ಕೂಡ ಅವರೆ ಆಗುತಿದ್ದಾರೆ. ಹೀಗಾದರೆ ಜನ ಸಾಮಾನ್ಯರು ಅಧಿಕಾರಿಗಳ ಮಾತಿಗೆ ಬೆಲೆ ಕೊಡುವುದಾದರು ಹೇಗೆ ಹೇಳಿ. ಪರಿಸರದ ಜಾಗೃತಿ ಇರುವ ಬಹುತೇಕ ನಗರ ಪ್ರದೇಶಗಳಲ್ಲಿ ಈ ಪ್ಲಾಸ್ಟಿಕ್ ಪ್ಲಕ್ಸ್ ಬ್ಯಾನರ್ ಗಳ ಬಳಕೆಯನ್ನು ಸಂಪೂರ್ಣ ನಿಷೇಧಮಾಡಲಾಗಿದೆ. ಹೀಗಿರುವಾಗ ಹೊಸಪೇಟೆ ನಗರದಲ್ಲಿ ಜನ ಪ್ರತಿನಿಧಿಗಳ ಗೆಲುವಿನ ವಿಜೃಂಭಣೆಯಿಂದ ಪರಿಸರ ಅದೋಗತಿಗೆ ತಲುಪುತ್ತಿರುವುದು ದುರಂತದ ವಿಚಾರ. ಇನ್ನು ಮುಂದಾದರ ಇಲ್ಲಿನ ಅಧಿಕಾರಿಗಳು ಇಂತಾ ಪ್ಲಾಸ್ಟಿಕ್ ಪ್ಲಕ್ಸ್ ಬ್ಯಾನರ್ ಗಳ ಅಳವಡಿಕೆಯನ್ನ ನಗರದಲ್ಲಿ ನಿಷೇಧ ಮಾಡಬೇಕಿದೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.