You are currently viewing ಅದಿರು ಕಳ್ಳರನ್ನ ಅಂದರ್ ಮಾಡಿದ ಹೊಸಪೇಟೆ ಸೂಪರ್ ಕಾಪ್ಸ್…

ಅದಿರು ಕಳ್ಳರನ್ನ ಅಂದರ್ ಮಾಡಿದ ಹೊಸಪೇಟೆ ಸೂಪರ್ ಕಾಪ್ಸ್…

ವಿಜಯನಗರ…ಹಿಂದೊಂದು ದಿನ ಇತ್ತು ಭೂಮಿಯೊಳಗಿದ್ದ ಕಬ್ಬಿಣದ ಅಧಿರನ್ನ ಅಗೆದು ಗುಡ್ಡಿ ಹಾಕಿ ಮನೆಗೆ ಬಂದರೆ ಸಾಕು. ಬೆಳಗಾಗುವಷ್ಟರಲ್ಲಿ ಮಂಗಮಾಯ ಮಾಡಿಬಿಡುತಿದ್ದರು ಅದಿರು ಕಳ್ಳರು. ಹೀಗೆ ಕದ್ದ ಅದಿರನ್ನ ಮಾರಾಟಮಾಡಿದ ಅದೆಷ್ಟೊ ಅದಿರು ಕಳ್ಳರು ರಾತ್ರೊ ರಾತ್ರಿ ಶ್ರೀಮಂತರಾಗಿದ್ದು ಕೂಡ ಉಂಟು. ಯಾವಾಗ ಅಕ್ರಮ ಗಣಿಗಾರಿಕೆಗೆ ಕಡಿವಾಣ ಬಿತ್ತೊ ಇಂತಾ ಅದಿರು ಕಳ್ಳರು ಮನೆ ಸೇರಿ ಮೂಲೆಗುಂಪಾದರು.

ಹೀಗೆ ಮೂಲೆಗುಂಪಾಗಿದ್ದ ಅದಿರು ಕಳ್ಳರು ಮತ್ತೆ ಬಾಲ ಬಿಚ್ಚಿ ಅದೇ ಹಳೇ ಚಾಳಿ‌ ಮುಂದುವರೆಸಿದ್ದಾರೆ. ಆದರೆ ಇವರ ಆಳ ಅಗಲ ಕಂಡ ಹೊಸಪೇಟೆ ಪೊಲೀಸರು ಸುಮ್ಮನೆ ಬಿಟ್ಟಾರ, ಕದ್ದ ಮಾಲು ಸಮೇತ ಹಿಡಿದು ಜೈಲಿಗೆ ಅಟ್ಟಿದ್ದಾರೆ. ಹೌದು ಹೊಸಪೇಟೆ ಗ್ರಾಮೀಣ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಗಣಿ ಕಳ್ಳರಿಗೆ ಕೊಳತೊಡಿಸಿದ್ದಾರೆ.

ಅಂದಹಾಗೆ ನಿನ್ನೆ ರಾತ್ರಿ ಹೊಸಪೇಟೆ ತಾಲೂಕಿನ ಕಾರಿಗೂರು ಬಳಿಯ ಗಣಿಗಾರಿಕೆ ಪ್ರದೇಶದಲ್ಲಿ ಸಂಗ್ರಹವಾಗಿದ್ದ ಅದಿರನ್ನ ಕದ್ದು ಬೇರೆಡೆ ಸಾಗಾಟಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ತಿಳಿದ ಹೊಸಪೇಟೆ ಗ್ರಾಮೀಣ ಪೊಲೀಸರು ಕೂಡಲೆ ಸ್ಥಳಕ್ಕೆ ಬೇಟಿ ನೀಡಿ ಅದಿರು ಕಳ್ಳರನ್ನ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂದಿತರಿಂದ 96 ಟನ್ ಅದಿರು ಮತ್ತು ಅದಿರು ತುಂಬಲು ಬಳಕೆಮಾಡುತಿದ್ದ ಒಂದು ಜೆ.ಸಿ.ಬಿ.ಹಾಗೂ ಮೂರು ಲಾರಿ. ಮತ್ತು ಒಂದು ಶಿಪ್ಟ್ ಡಿಸೈರ್ ಕಾರು ಹಾಗೂ ಒಂದು ಸ್ಕಾರ್ಪಿಯೊ ಕಾರನ್ನ ವಶಕ್ಕೆಪಡೆದಿದ್ದಾರೆ.

ವಶಕ್ಕೆ ಪಡೆದ ಎಲ್ಲಾ ದಾಸ್ತಾನುಗಳ ಒಟ್ಟು ಮೌಲ್ಯ ಸರಿ ಸುಮಾರು 56 ಲಕ್ಷ ಎಂದು ಅಂದಾಜಿಸಲಾಗಿದೆ. ಇನ್ನು ಪ್ರಕರಣಕ್ಕೆ ಸಂಭಂದಿಸಿದಂತೆ ಒಟ್ಟು ಎಂಟು ಜನರನ್ನ ಬಂದಿಸಿರುವ ಪೊಲೀಸರು ತಲೆ ಮರೆಸಿಕೊಂಡಿರುವ ಇನ್ನೂ ಕೆಲವರ ಹುಡುಕಾಟಕ್ಕೆ ಮುಂದಾಗಿದ್ದಾರೆ.

1)ಸಂಗಮ ಟ್ರೇಡರ್ಸ್ ಮಾಲೀಕ ಹನುಮಂತಪ್ಪ ಕುರಟ್ಟಿ.

2)ಎಂ. ಮಂಜುನಾಥ.
3)ಅಬ್ದುಲ್ ಸಲೀಂ
4ಬಿ.ಹನುಮಂತ.
5) ಸಿ.ರಂಜಿತ್.
6) ಅಜ್ಮತುಲ್ಲಾ.
7) ಕೃಷ್ಣ.
8)ಸಿದ್ದಪ್ಪ ಬಂದಿತ ಆರೋಪಿಗಳಾಗಿದ್ದಾರೆ.

ಇನ್ನು ವಾರಸುದಾರರಿಲ್ಲದ ಈ ಅದಿರಿನ ಮೇಲೆ ಕಣ್ಣು ಹಾಕಿದ ಕಳ್ಳರು ಅದನ್ನ ರಾತ್ರೊ ರಾತ್ರಿ ಕಳ್ಳಸಾಗಾಟಮಾಡಿ ಹಣ ಮಾಡಲು ನೋಡಿದ್ದರು. ಆದರೆ ಪೊಲೀಸರ ಹದ್ದಿನ ಕಣ್ಣಿನಿಂದ ಕಳ್ಳತನ ನಿಂತಿದೆ. ಅಂದಹಾಗೆ ಈಗ ಕಳ್ಳತನಮಾಡಿದ್ದ ಅದಿರು ಕಳೆದ 2010ರಲ್ಲಿ ನಡೆದ ಅಕ್ರಮ ಗಣಿಗಾರಿಕೆ ಸಂದರ್ಭದಲ್ಲಿ ಗಣಿಗಾರಿಕೆ ನಡೆಸಿ ಸಂಗ್ರಹಮಾಡಿದ್ದ ಅದಿರು.

ಕೆಲವು ಅಕ್ರಮ ಕುಳಗಳು ಅಕ್ರಮ ಗಣಿಗಾರಿಕೆ ನಡೆಸಿ ಅಧಿರನ್ನ ಸಾಗಾಟಮಾಡಲು ಮುಂದಾಗಿದ್ದರು, ಆ ಸಂದರ್ಭದಲ್ಲಿ ಕೂಡ ಈ ಅದಿರು ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರಿ ಇದು ಸರ್ಕಾರದ ಸ್ವತ್ತು ಎಂದು ನ್ಯಾಯಾಲಯ ಆದೇಶಮಾಡಿತ್ತು. ಅಂದಿನಿಂದ ಇಂದಿನ ವರೆಗೆ ಇದ್ದ ಜಾಗದಲ್ಲೇ ಅದಿರು ಇದ್ದದ್ದನ್ನ ಅರಿತ ಕಳ್ಳರು ಇದನ್ನ ಹೇಗಾದರು ಕಳ್ಳತನ ಮಾಡಿ ಹಣ ಮಾಡಬೇಕೆಂದು ಸಂಚುರೂಪಿಸಿ ಕಳ್ಳತನಕ್ಕೆ ಇಳಿದಿದ್ದರು.

ಆದರೆ ಹೊಸಪೇಟೆ ಡಿ.ವೈ.ಎಸ್ಪಿ.ವಿಶ್ವನಾಥರಾವ್ ಕುಲಕರ್ಣಿ ಹಾಗೂ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಶ್ರೀನಿವಾಸ್ ಮೇಟಿ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇನ್ನು ಈ ಕಾರ್ಯಾಚರಣೆಯಲ್ಲಿ ವೆಂಕಟೇಶ್. ರಾಘವೇಂದ್ರ. ಪಣಿರಾಜ್. ಸುಭಾಷ್. ಆನಂದ್ ಗೌಡ. ಬಿ.ನಾಗರಾಜ್. ಕೆ.ಪ್ರಕಾಸ್. ಕೊಟ್ರೇಶ್ ಏಳಬೆಂಚಿ. ಸೇರಿದಂತೆ ನಾಗರಾಜ್. ವಿ ಕೂಡ ಬಾಗಿಯಾಗಿದ್ದರು. 

ಇನ್ನು ವಿಜಯನಗರ ಎಸ್ಪಿ ಅರುಣ್ ಕೆ. ಅವರು ತಮ್ಮ ಸಿಬ್ಬಂದಿಗಳ ಕಾರ್ಯಾಚರಣೆನ್ನ ಮೆಚ್ಚಿ ಶ್ಲಾಗಿಸಿದ್ದಾರೆ. ಒಟ್ಟಿನಲ್ಲಿ 2010ರಿಂದ ಅಕ್ರಮ ಗಣಿಗಾರಿಕೆಗೆ ಕಡಿವಾಣ ಬಿದ್ದಾಗಿನಿಂದ ಕೆಲವು ಅಕ್ರಮ ಕುಳಗಳಿಗೆ ಕೈಯಲ್ಲಿ ಕಾಸಿಲ್ಲದೆ ಅಡ್ಡದಾರಿ ಹಿಡಿದಿರುವುದು ಮೇಲ್ಬೋಟಕ್ಕೆ ಕಂಡುಬರುತ್ತಿದ್ದರೆ, ಅಕ್ರಮ ಅದಿರು ಮಾರಾಟ ಈಗಲೂ ನಡೆಯುತ್ತಿದೆ ಎನ್ನುವ ಸತ್ಯವನ್ನ ಈ ಕಳ್ಳತನ ಪ್ರಕರಣ ಬೆಳಕಿಗೆ ತಂದಿದೆ.

ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.

ವರದಿ.ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.