You are currently viewing ತುಂಗಭದ್ರೆಗೆ ಖನ್ನ ಹಾಕಿದರು. ಪೊಲೀಸರ ನೋಡಿ ಪರಾರಿ ಆದ್ರು.

ತುಂಗಭದ್ರೆಗೆ ಖನ್ನ ಹಾಕಿದರು. ಪೊಲೀಸರ ನೋಡಿ ಪರಾರಿ ಆದ್ರು.

ವಿಜಯನಗರ…ಹಗಲು ರಾತ್ರಿ ಎನ್ನದೆ ತುಂಗಭದ್ರೆಯ ವಡಲನ್ನ ಅಗೆದು ಕಳ್ಳಗಂಡಿಯಲ್ಲಿ ಮರಳು ಸಾಗಿಸುತಿದ್ದ ದಂದೆಕೋರರಿಗೆ ಹಿರೇಹಡಗಲಿ ಪೊಲೀಸರು ಕಡಿವಾಣ ಹಾಕಲು ಮುಂದಾಗಿದ್ದಾರೆ. ಸರಿಯಾದ ಸಮಯಕ್ಕೆ ಕಾದು ಕುಳಿತಿದ್ದ  ಪೊಲೀಸರು ಇಂದು ಹರಪನಹಳ್ಳಿ ಡಿ.ವೈ.ಎಸ್ಪಿ. ಮಾರ್ಗದರ್ಶನದಲ್ಲಿ ಏಕಾ ಎಕಿ ದಾಳಿ ನಡೆಸಿ ಅಕ್ರಮಕ್ಕೆ ಕಡಿವಾಣ ಹಾಕಿದ್ದಾರೆ.

ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದ ಬಳಿಯ ತುಂಗಭದ್ರ ನದಿ ದಡದಲ್ಲಿ ಅಕ್ರಮ ಮರಳುಗಾರಿಕೆ ನಡೆಯುವ ಖಚಿತ ಮಾಹಿತಿ ಸಿಕ್ಕ ಹಿರೇಹಡಗಲಿ ಪಿ.ಎಸ್.ಐ.ದಾದವಲಿ ನೇತೃತ್ವದ ತನಿಖಾ ತಂಡದ ಸಿಬ್ಬಂದಿಗಳು, ಅಕ್ರಮ ಮರಳು ಅಡ್ಡೆಯ ಮೇಲೆ ಏಕಾ ಏಕಿ ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಮರಳು ತುಂಬುವ ಆರು ಕಬ್ಬಿಣದ ತೆಪ್ಪಳನ್ನ ವಶಕ್ಕೆ ಪಡೆದಿದ್ದಾರೆ, ಇನ್ನು ಪೊಲೀಸರು ಸ್ಥಳಕ್ಕೆ ಬೇಟಿ ನೀಡುತಿದ್ದಂತೆ ಅಕ್ರಮ ಕುಳಗಳು ಅಲ್ಲಿಂದ ಪರಾರಿಯಾಗಿದ್ದು ಅಕ್ರಮ ಕುಳಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಇತ್ತೀಚೆಗೆ ವಿಜಯನಗರ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಗೆ ಕಡಿವಾಣ ಬಿದ್ದಿದೆ ಆದ್ರು, ಪಕ್ಕದ ಹಾವೇರಿ ಜಿಲ್ಲೆ ಮತ್ತು ಗದಗ ಜಿಲ್ಲೆಯ ಬಾಗದಿಂದ ನದಿ ಪ್ರವೇಶಿಸುವ ಅಕ್ರಮ ಕುಳಗಳು ಮರಳನ್ನ ಅಗೆದು ಕಳ್ಳಗಂಡಿಯಲ್ಲಿ ಸಾಗಾಟಮಾಡುತಿದ್ರು.

ಇದನ್ನ ಮನಗಂಡ ಹಿರೇಹಡಗಲಿ ಪೊಲೀಸರು ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಪೊಲೀಸರು ಚಾಪೆ ಕೆಳಗೆ ತೂರಿದರೆ ಅಕ್ರಮ ಕುಳಗಳು ರಂಗೋಲೆ ಕೆಳಗೆ ನುಸುಳುವ ಪ್ರಯತ್ನವನ್ನ ಮಾಡುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ.

ಹೂವಿನ ಹಡಗಲಿ ತಾಲೂಕಿನ ತುಂಗಭದ್ರ ನದಿ ಅಂಚಿನ ಕೆಲವು ಗ್ರಾಮಗಳಲ್ಲಿ ಎತ್ತಿನ ಬಂಡಿ ಮೂಲಕ ಮರಳು ತುಂಬಿ ಸಾಗಿಸುವ ಅಕ್ರಮ ಕುಳಗಳು ನಾಲ್ಕು ಚಕ್ಕಡಿಯ ಮರಳನ್ನ ಒಟ್ಟುಗೂಡಿಸಿ ಲಾರಿ ಮೂಲಕ  ಮಾರಾಟ ಮಾಡುವ ದಂದೆ ಜೋರಾಗಿ ನಡೆಯುತಿದ್ದು ಅಂತಾ ಖದೀಮರಿಗೂ ಕೂಡ ಕಡಿವಾಣ ಹಾಕಬೇಕಿದೆ ಹಿರೇಹಡಗಲಿ ಪೊಲೀಸರು.

ಈ ಹಿಂದೆ ಎತ್ತಿನ ಬಂಡಿಯಲ್ಲಿ ಮರಳು ಸಾಗಾಟಮಾಡುವವರಿಗೆ ಯಾವುದೇ ವಿರೋಧ ವಿಲ್ಲದೆ ಅವಕಾಶ ಕಲ್ಪಿಸಲಾಗಿತ್ತು. ಕಾರಣ ನದಿ ಅಕ್ಕ ಪಕ್ಕದ ಗ್ರಾಮಗಳ ಜನ ಸಾಮಾನ್ಯರು ತಮ್ಮ ಮನೆ ನಿರ್ಮಾಣಕ್ಕೆ ಅನುಕೂಲವಾಗಲೆಂದು, ಆದರೆ ಇದೇ ಅವಕಾಶವನ್ನ ಬಳಸಿಕೊಂಡಿರುವ ಕೆಲವು ಅಕ್ರಮ ದಂದೆ ಕೋರರು, ಜನ ಸಾಮಾನ್ಯರಿಗೆ ಕೊಟ್ಟಿರುವ ಅವಕಾಶವನ್ನೇ ದುರ್ಬಳಕೆಮಾಡಿಕೊಂಡು ಎತ್ತಿನ ಬಂಡಿ ಮೂಲಕ ಮರಳನ್ನ ಒಂದೆಡೆ ಸೇರಿಸಿ ಲಾರಿ ಮೂಲಕ ಮಾರಾಟಮಾಡುವ ಜಾಲ ಹೆಚ್ಚಾಗಿದೆ.
ಈ ಜಾಲಕ್ಕೆ ಕೂಡ ಕಡಿವಾಣ ಬಿದ್ದರೆ ಅಕ್ರಮಕ್ಕೆ ಈ ಬಾಗದಲ್ಲಿ ಕಡಿವಾಣ ಬಿದ್ದಂತಾಗುತ್ತದೆ.

ವರದಿ…ಸುಬಾನಿ ಪಿಂಜಾರ. ಹಂಪಿ ಮಿರರ್ ವಿಜಯನಗರ.