You are currently viewing ಓದೊ ಗಂಗಪ್ಪನ ಬೆಂಬಲಿಗನ ಮೇಲೆ ಹಲ್ಲೆ. ಆರೋಪ ತಳ್ಳಿಹಾಕಿದ ಮಾಜಿ ಶಾಸಕ ಚಂದ್ರನಾಯ್ಕ್.

ಓದೊ ಗಂಗಪ್ಪನ ಬೆಂಬಲಿಗನ ಮೇಲೆ ಹಲ್ಲೆ. ಆರೋಪ ತಳ್ಳಿಹಾಕಿದ ಮಾಜಿ ಶಾಸಕ ಚಂದ್ರನಾಯ್ಕ್.

ವಿಜಯನಗರ ಜಿಲ್ಲೆಯ ಹಡಗಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಚಂದ್ರನಾಯ್ಕ್ ಮತ್ತು ಅವರ ಮಕ್ಕಳಾದ ಮಂಜುನಾಥ್ ನಾಯ್ಕ್, ಸೇತುರಾಮ್ ನಾಯಕ್ ಹಾಗೂ ಅವರ ಬೆಂಬಲಿಗರ ವಿರುದ್ದ ಅಲ್ಲೆ ಆರೋಪ ಕೇಳಿ ಬಂದಿದೆ. ರಾಜಕೀಯ ದುರುದ್ದೇಶ ಮತ್ತು ದ್ವೇಷದಿಂದ,  ಓದೋ ಗಂಗಪ್ಪ ಅವರ ಬೆಂಬಲಿಗ ಗೋಣಿಸ್ವಾಮಿ ಎನ್ನುವ ವ್ಯಕ್ತಿಯ ಮೇಲೆ ಹಲ್ಲೆಮಾಡಿರುವ ಆರೋಪ ಕೇಳಿ ಬಂದಿದ್ದು, ಓದೊ ಗಂಗಪ್ಪನವರ ಮನೆಯ ಬಾಗಿಲಲ್ಲಿರುವ ಸಿ.ಸಿ.ಟಿ.ವಿ.ಕ್ಯಾಮರದಲ್ಲಿ  ಹಲ್ಲೆಯ ವೀಡಿಯೊ ರೆಕಾರ್ಡ್ ಆಗಿದೆ, ಎಂಟರಿಂದ ಹತ್ತು ಜನ ಮನೆಯ ಗೇಟ್ ತೆರೆದು ಒಳ ನುಗ್ಗಿ ಓದೊಗಂಗಪ್ಪ ಅವರ ಜೊತೆಗಿದ್ದ ವ್ಯಕ್ತಿಯ ಮೇಲೆ ಹಿಗ್ಗಾಮುಗ್ಗ ತಳಿಸಿದ್ದಾರೆ, 

ನೆನ್ನೆ ರಾತ್ರಿ 9:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಅವರ ವಾಹನವನ್ನು ಹಿಂಬಾಲಿಸಿಕೊಂಡು ಅವರ ನಿವಾಸಕ್ಕೆ ಏಕಾಏಕಿ ನುಗ್ಗಿ ಅವರ ಬೆಂಬಲಿಗರ ಮೇಲೆ ತೀವ್ರತರನಾದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ಗೋಣಿಸ್ವಾಮಿ ಹೂವಿನ ಹಡಗಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾನೆ, ಇನ್ನು ಪ್ರಕರಣಕ್ಕೆ ಸಂಭಂದಿಸಿದಂತೆ ಹೂವಿನ ಹಡಗಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲುಮಾಡಲು ಓದೊ ಗಂಗಪ್ಪ ಮತ್ತು ಅವರ ಬೆಂಬಲಿಗರು ಮುಂದಾಗಿದ್ದಾರೆ.

ಇನ್ನು ಮೇಲ್ನೋಟಕ್ಕೆ ಈ ಘಟನೆಗೆ ಕಾರಣ ಎಂದರೆ ಇತ್ತೀಚೆಗೆ ಲಂಕೇಶ್ ಪತ್ರಿಕೆಯಲ್ಲಿ ವರದಿಯೊಂದು ಪ್ರಕಟಗೊಂಡಿತ್ತು, ಪ್ರಕಟಗೊಂಡ ವರದಿಯನ್ನ ಓದೊಗಂಗಪ್ಪ ಬೆಂಬಲಿಗ ಗೋಣಿಸ್ವಾಮಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಎನ್ನಲಾಗಿದೆ, ಇದರಿಂದ ಕೆಂಡಾಮಂಡಲರಾದ ಚಂದ್ರನಾಯ್ಕ್ ಬೆಂಬಲಿಗರು ಓದೊ ಗಂಗಪ್ಪ ಬೆಂಬಲಿಗನ ಮೇಲೆ ಹಲ್ಲೆಮಾಡಿದ್ದಾರೆ ಎಂದು ಓದೊಗಂಗಪ್ಪ ಆರೋಪಿಸಿದ್ದಾರೆ, ಆದರೆ ಗಂಗಪ್ಪ ಮಾಡಿರುವ ಆರೋಪವನ್ನ ಮಾಜಿ ಶಾಸಕ ಚಂದ್ರನಾಯ್ಕ್ ಮಗ ಮಂಜುನಾಥ ನಾಯ್ಕ್ ತಳ್ಳಿ ಹಾಕಿದ್ದಾರೆ, ಆ ಘಟನೆಗೂ ನಮಗೂ ಯಾವುದೇ ಸಂಭಂದ ಇಲ್ಲ, ಆ ವಿಡಿಯೊದಲ್ಲಿರುವ ಯಾರೊಬ್ಬರೂ ನಮ್ಮವರಲ್ಲ ಓದೊ ಗಂಗಪ್ಪನವರು ಅನಾವಶಕವಾಗಿ ನಮ್ಮ ವಿರುದ್ದ ಆರೋಪಮಾಡಿದ್ದಾರೆ, ರಾಜಕಾರಣದಲ್ಲಿ ನಮ್ಮ ಏಳಿಗೆ ಸಹಿಸದ ಓದೊಗಂಗಪ್ಪ ನಮ್ಮ ವಿರುದ್ದ ಈರೀತಿಯಾಗಿ ಸುಳ್ಳು ಆರೋಗಳನ್ನಮಾಡಿದ್ದಾರೆ ಎಂದಿದ್ದಾರೆ.

ಇನ್ನು  ಕಳೆದ ಬಾರಿ ನಡೆದ ವಿಧಾನಸಭ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಓದೊಗಂಗಪ್ಪ ಕಣಕ್ಕೆ ಇಳಿದಿದ್ದರು, ಬಿಜೆಪಿ ಪಕ್ಷದ ಕಾರ್ಯಕರ್ತರಾಗಿದ್ದ ಓದೊ ಗಂಗಪ್ಪ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿ ಮಾಜಿ ಶಾಸಕ ಚಂದ್ರನಾಯ್ಕ್ ಅವರ ಪಾಲಾಗಿತ್ತು. ಹಾಗಾಗಿ ಹೂವಿನಹಡಗಲಿಯ ಬಿಜೆಪಿಯಲ್ಲಿ ಬಿನ್ನಮತ ಸ್ಪೋಟಗೊಂಡು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪಿ.ಟಿ.ಪರಮೇಶ್ವರ ನಾಯ್ಕ್ ಗೆಲುವು ಸಲೀಸಾಗಿತು. ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಚಂದ್ರನಾಯ್ಕ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿದ್ದ ಓದೊಗಂಗಪ್ಪ ಇಬ್ಬರೂ ಸೋಲಬೇಕಾಯಿತು, ಈ ಸ್ವ ಪಕ್ಷದ ರಾಜಕೀಯ ವೈಮನಸ್ಸು ಹೀಗೆ ಮುಂದುವರೆದು ಇದೀಗ ಹಾದಿರಂಪ ಬೀದಿರಂಪಾ ಆಗಿದೆ ಎನ್ನುತಿದ್ದಾರೆ ಹಡಗಲಿ ಜನ. ಹಡಗಲಿಯಲ್ಲಿ ಬಿಜೆಪಿಯ ಒಂದು ಗುಂಪು ಓದೊ ಗಂಗಪ್ಪ ಅವರ ಬೆಂಬಲಿಕ್ಕೆ ಇದ್ದರೆ, ಮತ್ತೊಂದು ಗುಂಪು ಚಂದ್ರನಾಯ್ಕ್ ಬೆಂಬಲಕ್ಕೆ ನಿಂತಿದೆ.

ಸಿ.ಸಿ.ಟಿ.ವಿ.ರೆಕಾರ್ಡ್ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.

ವರದಿ..ಸುಬಾನಿ ಪಿಂಜಾರ ವಿಜಯನಗರ.