You are currently viewing ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಮೊದಲಿಗೆ ಧ್ವಜಾರೋಹಣ ನೆರವೇರಿಸಿ ಜಿಲ್ಲಾಧಿಕಾರಿ ಅನಿರುದ್ದ ಶ್ರವಣ್.

ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಮೊದಲಿಗೆ ಧ್ವಜಾರೋಹಣ ನೆರವೇರಿಸಿ ಜಿಲ್ಲಾಧಿಕಾರಿ ಅನಿರುದ್ದ ಶ್ರವಣ್.

ವಿಜಯನಗರ…ವಿಜಯನಗರ ಜಿಲ್ಲಾಡಳಿತದಿಂದ ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ದಿಮಾಚರಣೆಯನ್ನ ಸಡಗರ ಸಂಭ್ರಮದಿಂದ ಆಚರಿಸಲಾಯಿತು,ಜಿಲ್ಲಾಧಿಕಾರಿ ಅನಿರುದ್ದ ಶ್ರವಣ್ ದ್ವಜಾರೋಹಣ ನೆರವೇರಿಸಿ ದೇಶ ಒಗ್ಗೂಡಲು ಶ್ರಮಿಸಿದ ಮಹಾನ್ ನಾಯಕರನ್ನ ಸ್ಮರಿಸಿದರಿ.ಇನ್ನು ಇತ್ತೀಚೆಗೆ‌ ನಡೆದ ರಾಜಕೀಯ ಬೆಳವಣಿಗೆಯಿಂದ ಹೊಸದಾಗಿ ನೇಮಕಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು‌ ದ್ವಜಾರೋಹಣ ನೆರವೇರಿಸುತ್ತಾರೆ ಎಂದು ವಿಜಯನಗರ ಜಿಲ್ಲೆಯ ಜನತೆ ಎಂದುಕೊಂಡಿದ್ದರು.

ಆದರೆ ನೂತನ ಸಚಿವರ ಗೈರು ಹಾಜರಿಯಲ್ಲಿ ಜಿಲ್ಲಾಧಿಕಾರಿ ಅನಿರುದ್ದ ಶ್ರವಣ್ ದ್ವಜಾರೋಹಣ ನೆರವೇರಿಸುವ ಮೂಲಕ ವಿಜಯನಗರ ಜಿಲ್ಲೆಯಲ್ಲಿ‌ ದ್ವಜಾರೋಹಣ ನೆರವೇರಿಸಿದ ಮೊದಲ ಜಿಲ್ಲಾಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.ಇದೇ ಆಶೆಯವನ್ನ ಆನಂದ್ ಸಿಂಗ್ ಅಭಿಮಾನಿಗಳು ಈ ಹಿಂದೆ ವ್ಯಕ್ತಪಡಿಸಿ ಹೋರಾಟ ಮಾಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರ ವರ್ಗಾವಣೆಯನ್ನ ವಿರೋಧಿಸಿದ್ದರು.ವಿಜಯನಗರ ಜಿಲ್ಲೆಗೆ ಶ್ರಮಿಸಿದ ಸಚಿವ ಆನಂದ್ ಸಿಂಗ್ ಅವರು ಜಿಲ್ಲಾ ಕೇಂದ್ರದಲ್ಲಿ ನಡೆಯುವ ಮೊದಲ ಗಣರಾಜ್ಯೋತ್ಸವದಲ್ಲಿ ದ್ವಜಾರೋಹಣ ನೆರವೇರಿಸಿದ ಮೊದಲ ಸಚಿವರು ಆನಂದ್ ಸಿಂಗ್ ಆಗಬೇಕೆನ್ನುವುದು ಅವರ ಬೆಂಬಲಿಗರ ಒಕ್ಕೂರಿಲಿನ ಒತ್ತಾಸೆಯಾಗಿತ್ತು.ಆದರೆ ಅದ್ಯಾವುದು ನೆರವೇರಲಿಲ್ಲ,

ಇನ್ನೇನು ಮೊದಲ ದ್ವಜಾರೋಹಣ ನೆರವೇರಿಸಿದ ಕೀರ್ತಿ ಶಶಿಕಲಾ ಜೊಲ್ಲೆ ಅವರಿಗೆ ಸಲ್ಲುತ್ತದೆ ಎನ್ನುವುದು ಪಕ್ಕಾಗಿತ್ತು, ಆದರೆ ಅದು ಕೂಡ ಬದಲಾಗಿ ಜಿಲ್ಲಾಧಿಕಾರಿ ಅನಿರುದ್ದ ಶ್ರವಣ್ ಅವರು ದ್ವಜಾರೋಹಣ ನೆರವೇರಿಸಿದ ಮೊದಲ ಜಿಲ್ಲಾಧಿಕಾರಿಯಾಗಿ ಹೊರ ಹೊಮ್ಮಿದರು. ದ್ವಜಾರೋಹಣದ ಬಳಿಕ ಗೌರವ ವಂದನೆ ಸ್ವೀಕರಿಸದ ಜಿಲ್ಲಾಧಿಕಾರಿಗಳು, ದೇಶವನ್ನ ಒಗ್ಗೂಡಿಸಲು ಶ್ರಮಿಸಿದ ಮಹಾನೀರನ್ನ ನೆನೆದರು. ಮತ್ತೊಂದು ವಿಷಯ ಎಂದರೆ ವಿಜಯನಗರ ನೂತನ ಜಿಲ್ಲೆ ಘೋಷಣೆ ಆದಮೇಲೆ ಜನಪ್ರತಿನಿದಿಗಳಿಲ್ಲದ ಮೊದಲ ಗಣರಾಜ್ಯೂತ್ಸ ದ್ವಜಾರೋಹಣದ ವೇದಿಕೆ ಕೂಡ ಇದಾಗಿತ್ತು. ಹೌದು ಸಚಿವ ಆನಂದ್ ಸಿಂಗ್ ಅವರ ಜಿಲ್ಲಾ ಉಸ್ತುವಾರಿ ಕೊಪ್ಪಳ ಜಿಲ್ಲೆಗೆ ವರ್ಗಾವಣೆ ಆಗುತಿದ್ದಂತೆ ಯಾವೊಬ್ಬ ಸ್ಥಳೀಯ ಜನಪ್ರತಿನಿಧಿಗಳು ಕೂಡ ಜಿಲ್ಲಾ ಕ್ರೀಡಾಂಗಣದಲ್ಲಿ ನೆರವೇರಿದ ದ್ವಜಾರೋಹಣದಲ್ಲಿ ಬಾಗಿಯಾಗದೆ ಇರುವುದು ದುರಂತ.

ಇನ್ನು ಪ್ರತಿವರ್ಷದ ಪದ್ದತಿಯಂತೆ ಇನ್ನಿತರ ಕಾರ್ಯಕ್ರಮಗಳು ಕೊವಿಡ್ ನಿಯಮ ಪಾಲನೆ ಹಿತದೃಷ್ಠಿಯಿಂದ ಸರಳವಾಗಿ‌ ನಡೆದವು. ಈ ಬಾರಿ ಪಥ ಸಂಚಲನದಲ್ಲಿ ಶಾಲಾ ಮಕ್ಕಳು ಬಾಗಿಯಾಗಲಿಲ್ಲ, ಪೊಲೀಸರು ಗೃಹರಕ್ಷಕ ಸಿಬ್ಬಂದಿಗಳು, ಎನ್.ಸಿ.ಸಿ. ಹಾಗೂ ಪೌರಕಾರ್ಮಿಕರು ಮತ್ತು ಆಶಾ ಕಾರ್ಯಕರ್ತರು ಬಾಗಿಯಾಗಿದ್ದರು.ಅದಲ್ಲದೆ ವಿವಿದ ಕ್ಷೇತ್ರದಲ್ಲಿ ಸಾಧನೆಮಾಡಿದ ಸಾಧಕರಿಗೆ ಮತ್ತು ಕೊವಿಡ್ ವಾರಿಯರ್ಸಗೆ ಸನ್ಮಾನಿಸಿ ಗೌರವಿಸಲಾಯಿತಿ.

ವರದಿ..ಸುಬಾನಿ ಪಿಂಜಾರ.ವಿಜಯನಗರ.