You are currently viewing ಹಂಪೆಯ ಹರಕೆ ಮರಕ್ಕೆ ಕಿಡಿ ಇಟ್ಟವರು ಯಾರು.

ಹಂಪೆಯ ಹರಕೆ ಮರಕ್ಕೆ ಕಿಡಿ ಇಟ್ಟವರು ಯಾರು.

ವಿಜಯನಗರ.. ನಿನ್ನೆ ಬೆಳಗ್ಗೆ ಯಾರೊ ಕಿಡಿಗೇಡಿಗಳು ಹಂಪಿಯಲ್ಲಿರುವ ಹರಕೆ ಮರಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಮರದ ಮದ್ಯಬಾಗದಲ್ಲಿ ಕಾಣಿಸಿಕೊಂಡ ಬೆಂಕಿ ಕ್ರಮೇಣ ಇಡೀ ಮರವನ್ನ ಆವರಿಸಿ ಹೊತ್ತಿ ಉರಿಯುವುದಕ್ಕೆ ಪ್ರಾರಂಬಿಸಿದೆ, ಸ್ಥಳದಲ್ಲೇ ಇದ್ದ ಹಂಪಿಯ ಪ್ರವಾಸಿ ಮಿತ್ರರು ಮತ್ತು ಹೋಂ ಗಾರ್ಡ್ ಸಿಬ್ಬಂದಿಗಳು ಹೊಸಪೇಟೆ ನಗರದ ಅಗ್ನಿ ಶಾಮಕ ದಳ ಠಾಣೆಗೆ ಪೊನ್ ಮೂಲಕ ಮಾಹಿತಿ ನೀಡಿದ್ದಾರೆ.

ವಿಜಯ ತಿಳಿದು ಸ್ಥಳಕ್ಕೆ ಅಗ್ನಿ ಶಾಮಕ ವಾಹನವನ್ನ ಬರುತಿದ್ದಂತೆ ಅಗ್ನಿ ಶಾಮಿಕ ಸಿಬ್ಬಂದಿಗಳು ಹಾಗೂ ಹೋಂ ಗಾರ್ಡ್ ಸಿಬ್ಬಂದಿಗಳು ಜಂಟಿಯಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೊತ್ತಿಗಾಗಲೆ ಮರದ ಕೆಲವು ರೆಂಬೆ ಕೊಂಬೆಗಳು ಸುಟ್ಟು ಹೋಗಿದ್ದವು.

ಇನ್ನು ಹಂಪಿಯ ಪುರಂದರ ಮಂಟಪದ ಕೂಗಳತೆ ದೂರದಲ್ಲಿರುವ ಈ ಹರಕೆ ಮರಕ್ಕೆ ನೂರಾರು ವರ್ಷದ ಇತಿಹಾಸ ಇದೆ. ವಿರೂಪಾಕ್ಷೇಶ್ಚರ ದೇವಸ್ಥಾನದಿಂದ ವಿಜಯ ವಿಠ್ಠಲ ದೇವಸ್ಥಾನಕ್ಕೆ ನಡೆದುಕೊಂಡು ಹೋಗುವ ಪ್ರವಾಸಿಗರು ಇದೇ ಮರದ ಮುಂದೆಯೇ ಹಾದು ಹೋಗಬೇಕು, ಸೀತೆ ಸೆರಗು ದಾಟಿ‌ ಮುಂದೆ ಹೋದರೆ ಬಲ ಬಾಗದಲ್ಲಿ ಕಾಣುವ ಈ ಆಲದ ಮರಕ್ಕೆ ಇಲ್ಲಿನ ಜನ ಸಾಮಾನ್ಯರು ಹರಕೆ‌ ಮರ ಎಂಬ ಹೆಸರಿನಿಂದಲೇ ಕರೆಯುತ್ತಾರೆ.

ಕಾರಣ  ಈ ಮರ ನೂರಾರು ಅಕ್ಕಿ ಪಕ್ಷಿಗಳಿಗೆ ಆವಾಸ ಸ್ಥಾನವಾಗಿರುವುದಲ್ಲದೆ ಇಲ್ಲಿಗೆ ಬರುವ ಜನ ಸಾಮಾನ್ಯರ ನೆಮ್ಮದಿಯನ್ನ ಹೆಚ್ಚಿಸುತ್ತದೆ. ಬಿರು ಬಿಸಿಲಿನಲ್ಲಿ ನಡೆದುಕೊಂಡು ಬರುವ ಪ್ರವಾಸಿಗರ ಕಣ್ಣಿಗೆ ಈ ಮರ ಬೀಳುತಿದ್ದಂತೆ ಒಂದು ಕ್ಷಣ ಈ ಮರದ ಕೆಳಗಡೆ ಕುಳಿತು ನೆಮ್ಮದಿಯ ನಿಟ್ಟುಸಿರು ಬಿಟ್ಟು ಮುಂದಿನ ತಮ್ಮ ಪ್ರವಾಸಕ್ಕೆ ಚೈತನ್ಯ ಪಡೆಯುತ್ತಾರೆ.

ಅದಲ್ಲದೆ ಇತ್ತೀಚೆಗೆ ಸಂಕಷ್ಟದಲ್ಲಿರುವವರ ಹರಕೆಯನ್ನ ಈಡೇರಿಸುತ್ತೆ ಎನ್ನುವ ಕಲ್ಪನೆ ಕೂಡ ಹೆಚ್ಚಾಗುತ್ತಿದೆ. ಆ ಕಾರಣಕ್ಕೆ ಇಲ್ಲಿಗೆ ಬರುವ ಬಹಿತೇಕ ಪ್ರವಾಸಿಗರು ತಮ್ಮ ಮನಸಿನ ನೋವುಗಳು, ಕಷ್ಟಗಳನ್ನ ದೂರಮಾಡುವಂತೆ ಈ ಮರಕ್ಕೆ ಹರಕೆ ಸಲ್ಲಿಸುವುದು ಕೂಡ ವಾಡಿಕೆ ಆಗಿದೆ. ಮರದ ರಂಬೆ ಕೊಂಬೆಗಳಿಗೆ ಚಿಲ್ಲರೆ ಕಾಸು, ಲಿಂಬೆಹಣ್ಣು ಕಲ್ಲುಗಳು ಸೇರಿದಂತೆ ಇನ್ನಿತರ ವಸ್ತುಗಳನ್ನ ಹರಕೆ ರೂಪದಲ್ಲಿ ಕಟ್ಟುವ ಜನ ಸಾಮಾನ್ಯರು ತಮ್ಮ ಹರಕೆ ಈಡೇರುತ್ತೆ ಎನ್ನುವ ನಂಬಿಕೆ ಇಟ್ಟುಕೊಂಡಿದ್ದರು.

ಆದರೆ ಇಂತಾ ಹರಕೆ ಈಡೇರಿಸುವ ಈ ವೃಕ್ಷಕ್ಕೆ ಇಂದು ಅಗ್ನಿ ಕಂಟಕ ಎದುರಾಗಿದೆ‌. ಯಾವ ಕಿಡಿಗೇಡಿಗಳು ಈ ಮರಕ್ಕೆ ಬೆಂಕಿ ಇಟ್ಟರೊ ಗೊತ್ತಿಲ್ಲ. ಇಡೀ ಮರ ಕಮುರಿ ಹೋಗಿದೆ. ಇನ್ನು ಈ ಮರಕ್ಕೆ ಪೂಜೆ ಸಲ್ಲಿಸುವವರೇ ಈ ಮರದ ಇಂದಿನ ಪರಿಸ್ಥಿತಿಗೆ ಕಾರಣರಾದರ ಎನ್ನುವ ಅನುಮಾನ ಕೂಡ ಮೂಡುತ್ತಿದೆ.

ಹೌದು ಈ ಮರಕ್ಕೆ ಹರಕೆ ಕಟ್ಟುವ ಭಕ್ತರು ದೀಪ ಅಗರಬತ್ತಿ ಹಚ್ಚಿ ಪೂಜೆ ಸಲ್ಲಿಸುವುದು ಕೂಡ ವಾಡಿಕೆ. ಇದೇ ದೀಪಗಳು ಅಗರಬತ್ತಿಗಳು ಕ್ರಮೇಣ ಮರಕ್ಕೆ ಹೊತ್ತಿಕೊಂಡು ಬೆಂಕಿಯಾಗಿ ಪರಿವರ್ತನೆಗೊಂಡಿದೆಯಾ ಎನ್ನುವ ಅನುಮಾನವನ್ನ ಕೂಡ ಇಲ್ಲಿನ ಕೆಲವರು ವ್ಯಕ್ತಪಡಿಸುತಿದ್ದಾರೆ. ಅದೇನೆ ಆಗಿರಲಿ ಯಾವುದೇ ಅತಿಯಾದ ನಂಬಿಕೆ, ಆಚರಣೆಗಳು ಹೇಗೆ ಮಾರಕವಾಗುತ್ತೆ ಎನ್ನುವುದಕ್ಕೆ ಈ ಪ್ರಕರಣ ಒಂದು ಉದಾಹಾರಣೆಯಾಗಿದೆ. ಇನ್ನು ಮುಂದಾದರು ಈ ಮರಕ್ಕೆ ಈರೀತಿಯ ಹರಕೆ ಕಟ್ಟದೆ ಬಿಟ್ಟರೆ ಲಕ್ಷಾನುಗಟ್ಟೆಲೆ ಹಕ್ಕಿ ಪಕ್ಷಿಗಳು ನೆಮ್ಮದಿಯ ಬದುಕನ್ನ ಈ ಮರದಲ್ಲಿ ಕಂಡು ಕೊಳ್ಳುತ್ತವೆ.

ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.