ವಿಜಯನಗರ..ವಿಶ್ವ ಪರಂಪರ ಪಟ್ಟಿಯಲ್ಲಿ ಹಂಪಿಯ ಹೆಸರು ಹಣೆ ಪಟ್ಟಿಗಿದೆ, ಹಾಗಾಗಿ ಹಂಪಿಗೆ ದೇಶ ವಿದೇಶದಿಂದ ಸಾವಿರಾರು ಪ್ರವಾಸಿಗರು ಪ್ರತಿ ದಿನ ಹರಿದು ಬರುತ್ತಾರೆ, ಹೀಗೆ ಬಂದಂತ ಪ್ರವಾಸಿಗರು ಹಂಪಿಯ ಸ್ಮಾರಕ ವೀಕ್ಷಣೆಮಾಡುವ ಮುಖಾಂತ್ರ ಖುಷಿಪಡುವುದು ಸರ್ವೇ ಸಾಮಾನ್ಯ, ಇತ್ತೀಚೆಗೆ ಹಂಪಿಯಲ್ಲಿ ಮತ್ತೊಂದು ಅಪರೂಪದ ಸ್ಥಳ ಬೆಳಕಿಗೆ ಬಂದಿದೆ,ಈ ಸ್ಥಳದ ಕಡೆಗೆ ದೇಶ ವಿದೇಶಿ ಪ್ರವಾಸಿಗರು ಮುಖಮಾಡಿದ್ದು ಹಂಪಿಯ ಪ್ರಖ್ಯಾತಿಗೆ ಈ ಸ್ಥಳ ಮತ್ತೊಂದು ಗರಿಯಾಗಿದೆ,
ಹೌದು ಹೀಗೆ ಕಣ್ಣು ಹಾಯಿಸಿದಲ್ಲೆಲ್ಲ ಕಾಣುವ ಕಲ್ಲು ಬೆಟ್ಟಗಳ ರಾಶಿ, ಇನ್ನೊಂದೆಡೆ ಈ ಕಲ್ಲು ರಾಶಿಯ ಮಧ್ಯೆ ರಭಸದಿಂದ ಹರಿಯುವ ತುಂಗಭದ್ರ ನದಿ,ಹಾಗೆ ಪ್ರತಿಯೊಂದು ಕಲ್ಲುಗಳೂ ತನ್ನದೇ ರೀತಿಯ ಚಿತ್ರ ವಿಚಿತ್ರ ಆಕಾರ ಹೊಂದಿರುವ ಬಂಡಿಗಳು. ಅಂದಹಾಗೆ ನೀವೀಗ ನೋಡುತ್ತಿರುವ ಈ ಸ್ಥಳ ವಿಶ್ವ ವಿಖ್ಯಾತ ಹಂಪಿಯ ಕೂಗಳತೆಯ ದೂರದಲ್ಲಿರುವ ವಾಟರ್ ಪಾಲ್ಸ್,ಹಂಪಿಯಿಂದ ಸುಮಾರು ಎರಡು ಕಿಲೋಮಿಟರ್ ದೂರದಲ್ಲಿರುವ ಈ ಸ್ಥಳದಲ್ಲಿ ತುಂಗಭದ್ರ ನದಿ ಹರಿದಿದ್ದು ಇತ್ತೀಚೆಗೆ ಈ ಸ್ಥಳಕ್ಕೆ ವಾಟರ್ ಪಾಲ್ಸ್ ಎಂದು ಹೆಸರು ಕೂಡ ಬಂದಿದೆ,
ಕಾರಣ ಹೀಗೆ ಕಲ್ಲು ಬಂಡೆಯ ಮಧ್ಯೆ ಹರಿಯುವ ರಭಸದ ನೀರು, ಇನ್ನು ನೋಡುವುದಕ್ಕೆ ಈ ಜಲ ದಾರೆ ಚಿಕ್ಕದಾಗಿದ್ರು ಈ ಸ್ಥಳಕ್ಕೆ ಬೇಟಿ ಕೊಟ್ಟು ವೀಕ್ಷಣೆಮಾಡುವ ಪ್ರವಾಸಿಗರಿಗೆ ಒಂದು ರೀತಿಯ ರೋಮಾಂಚನವನ್ನುಂಟುಮಾಡುತ್ತೆ, ಸುಮಾರು ಒಂದು ಕಿಲೋಮಿಟರ್ ಗೂ ಹೆಚ್ಚು ವಿಸ್ತೀರ್ಣದಲ್ಲಿ ಹಬ್ಬಿಕೊಂಡಿರುವ ಈ ಕಲ್ಲು ಬಂಡೆಗಳ ಮಧ್ಯೆದಲ್ಲೇ ತುಂಗಭದ್ರ ನೀರು ಹರಿಯುತ್ತದೆ, ಆದ್ರೆ ನೋಡುವುದಕ್ಕೆ ಕಣ್ಣಿಗೆ ಮಾತ್ರ ಕಾಣುವುದಿಲ್ಲ, ಇದೀಗ ತುಂಗಭದ್ರ ನದಿಯಿಂದ ನೀರು ಹರಿಯುತ್ತಿರುವುದರಿಂದ ಈ ಜಲಪಾತಕ್ಕೆ ಮೂಲ ಕಳೆ ಬಂದಿದೆ,ಹಾಗಾಗಿ ಇಲ್ಲಿಗೆ ಬರುವ ಪ್ರವಾಸಿಗರು ದಿನವಿಡೀ ಸಮಯ ಕಳೆದು ಮರುಳುವುದು ಸರ್ವೇ ಸಾಮಾನ್ಯ.
ಅಂದಹಾಗೆ ಈ ಸ್ಥಳಕ್ಕೆ ಹೋಗಬೇಕಾದ್ರೆ ಪ್ರವಾಸಿಗರು ಸ್ವಲ್ಪ ಕಸರತ್ತು ಮಾಡಲೇಬೇಕು ಇಲ್ಲಿಗೆ ಯಾವುದೇ ಸಾರಿಗೆ ಸಂಪರ್ಕವಾಗಲಿ ರಸ್ತೆಯಾಗಲಿ ಇಲ್ಲ, ಹಂಪಿಯ ವಿರೂಪಾಕ್ಷದೇವಸ್ಥಾನದ ಹಿಂಬಾಗದ ರಸ್ತೆಯಲ್ಲಿ ಹಾದು ಹೋದ್ರೆ ಸುಮಾರು ಎರಡು ಕಿಲೋಮಿಟರ್ ವರೆಗೆ ಆಟೋದಲ್ಲಿ ಪ್ರಯಾಣಿಸಿ ಮತ್ತೆ ಕಾಲ್ನಡೆಗೆಯಲ್ಲಿ ಅರ್ಧ ಕಿಲೋಮಿಟರ್ ನಡೆಯಬೇಕು, ಹೀಗೆ ನಡೆಯಬೇಕಾದ್ರೆ ಸ್ವಲ್ಪ ಎಚ್ಚರ ತಪ್ಪಿದ್ರು ಅಪಾಯ ಕಟ್ಟಿಟ್ಟಬುತ್ತಿ, ಹೀಗೆ ಈ ಸ್ಥಳಕ್ಕೆ ಬೇಟಿಕೊಟ್ಟ ಪ್ರವಾಸಿಗರಿಗೆ ಎಂಜಾಯ್ ಮಾಡಲು ನಾಲ್ಕಾರು ಕಡೆಗಳಲ್ಲಿ ಪ್ರಕ್ರತಿ ದತ್ತವಾಗಿ ನಿರ್ಮಾಣ ಗೊಂಡು ಸ್ವಿಮ್ಮಿಂಗ್ ಪೂಲ್ ಗಳು ಇವೆ, ಇವುಗಳಲ್ಲಿ ಮನಸೋ ಇಚ್ಚೆ ಈಜುವುದು ಡೈ ಮಾಡುವುದಕ್ಕೆ ಮುಂದಾಗುತ್ತಾರೆ,ಇನ್ನು ಕೆಲವರು ಇಲ್ಲಿರುವ ಕಲ್ಲು ಬಂಡೆಯ ಆಕಾರಗಳ ಮದ್ಯೆ ಕುಳಿತು ಪೋಟೋ ಕ್ಲಿಕ್ಕಿಸಿಕೊಳ್ಳುತ್ತ ಖುಷಿ ಪಡುತ್ತಾರೆ,
ಇನ್ನು ಪ್ರಕ್ರತಿ ದತ್ತವಾಗಿ ನಿರ್ಮಾಣಗೊಂಡಿರುವ ಈ ಸ್ಥಳದ ಬಗ್ಗೆ ಇಲ್ಲಿನ ಯಾವ ಇಲಾಖೆಯ ಅಧಿಕಾರಿಗಳೂ ಗಮನ ಹರಿಸುತ್ತಿಲ್ಲ, ದೇಶ ವಿದೇಶಿ ಪ್ರವಾಸಿಗರು ಇಲ್ಲಿಗೆ ಹರಿದು ಬಂದ್ರು ಪ್ರವಾಸೋಧ್ಯೆಮ ಇಲಾಖೆ ಈ ಸ್ಥಳದ ಬಗ್ಗೆ ಗಮನ ಹರಿಸದೆ ಕಣ್ಮುಚ್ಚಿ ಕುಳಿತಿದೆ, ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಮಾಡುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.
ವಿಶ್ವವಿಖ್ಯಾತ ಹಂಪಿಯಲ್ಲಿನ ಸ್ಮಾರಕಗಳ ನಿರ್ಮಾಣದ ಹಿಂದೆ ಒಂದು ಇತಿಹಾಸ ಅಡಕವಾಗಿದೆ, ಆದರೆ ಈ ಸ್ಥಳದ ಹಿಂದೆ ಯಾವ ಇತಿಹಾಸವೂ ಇಲ್ಲ, ಇದೇನಿದ್ರು ಪ್ರಕ್ರತಿ ತನ್ನ ಕೈ ಚಳಕದಿಂದ ನಿರ್ಮಾಣ ಮಾಡಿರುವ ಅಪರೂಪದ ಸ್ಥಳ ಎಂದ್ರೆ ತಪಾಗಲಾರದು, ಒಂದು ವೇಳೆ ಹಂಪಿಗೆ ಬೇಟಿ ಕೊಟ್ರೆ ಈ ಕಿರು ಜಲಪಾತಕ್ಕೆ ಬೇಟಿಕೊಡುವುದನ್ನ ಮಾತ್ರ ಮರೆಯ ಬೇಡಿ.
ಜಲಪಾತದ ವೀಡಿಯೊ ನೋಡುವ ಇಷ್ಟವಿದ್ದರೆ ಈ ಕೆಳಗಿನ ಲಿಂಕನ್ನ ಒತ್ತಿರಿ.
ವರದಿ…ಸುಬಾನಿ.ಪಿಂಜಾರ ವಿಜಯನಗರ.