You are currently viewing ಉತ್ತರ ಪ್ರದೇಶ ಮೂಲದ ಕೂಲಿ ಕಾರ್ಮಿಕ ಗಬ್ಬಿನ ಗಾಣದಲ್ಲಿ ಸಿಕ್ಕು ಹೆಣವಾದ.

ಉತ್ತರ ಪ್ರದೇಶ ಮೂಲದ ಕೂಲಿ ಕಾರ್ಮಿಕ ಗಬ್ಬಿನ ಗಾಣದಲ್ಲಿ ಸಿಕ್ಕು ಹೆಣವಾದ.

ವಿಜಯನಗರ..ಕಬ್ಬು ನುರಿಯುವ ಗಾಣಕ್ಕೆ ಸಿಲುಕಿದ ಕೂಲಿ ಕಾರ್ಮಿಕನೊಬ್ಬ ಧಾರುಣವಾಗಿ ಸಾವನ್ನಪ್ಪಿದ ಘಟನೆಯೊಂದು ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಗ್ರಾಮದ  ಬಳಿಯ ಗಾಣದಲ್ಲಿ ಇಂದು ಬೆಳಗ್ಗೆ ನಡೆದಿದೆ.

ಕಬ್ಬು ನುರಿಯುವ ಯಂತ್ರಕ್ಕೆ ಗ್ರೀಸ್ ಹಚ್ಚುವ ವೇಳೆಯಲ್ಲಿ ಈ ದುರಂತ ನಡೆದಿದ್ದು,ವ್ಯಕ್ತಿಯ ರುಂಡ- ಮುಂಡ ಎರಡು ಬೇರ್ಪಟ್ಟಿವೆ, ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿ ಉತ್ತರ ಪ್ರದೇಶ ಮೂಲದ ಸುಶೀಲ್( 40) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಹೊಸಪೇಟೆಯ ಗ್ರಾಮೀಣ ಪೊಲೀಸರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸುತಿದ್ದಾರೆ.

ಇನ್ನು ಇತ್ತೀಚೆಗೆ ಉತ್ತರ ಪ್ರದೇಶದಿಂದ ಬಂದ ಬಹುತೇಕ ಕೂಲಿ ಕಾರ್ಮಿಕರು ಹೊಸಪೇಟೆ ಸುತ್ತ ಮುತ್ತ ಇರುವ ಗಾಣಗಳಲ್ಲಿ ಕೂಲಿ ಕೆಲಸಮಾಡುತಿದ್ದಾರೆ. ಅದರಲ್ಲೂ ಕಬ್ಬಿನ ಗಾಣದಲ್ಲಿ ಕೆಲಸಮಾಡುವುದರಲ್ಲಿ ನಿಪುಣತೆಯನ್ನ ಹೊಂದಿರುವ ಯುಪಿ ಕಾರ್ಮಿಕರು ನಮ್ಮ ರೈತರಿಂದ ಗುತ್ತಿಗೆ ಪಡೆದು ಕೆಲಸಮಾಡುತ್ತಾರೆ. ವಾರದಲ್ಲಿ ಒಂದು ದಿನ ರಜೆಮಾಡುವ ಕಾರ್ಮಿಕರು ಕಬ್ಬು ನುರಿಯುವ ಯಂತ್ರವನ್ನ ಸ್ವಚ್ಚಗೊಳಿಸುವುದಲ್ಲದೆ ಯಂತ್ರಕ್ಕೆ ಗ್ರೀಸ್ ಹಚ್ಚಿ ಮುಂದಿನ ವಾರಕ್ಕೆ ಯಂತ್ರವನ್ನ ರೆಡಿಮಾಡಿಕೊಳ್ಳುತ್ತಾರೆ, ಇಂತದ್ದೇ ಕೆಲಸಮಾಡುವ ಸಂದರ್ಭದಲ್ಲಿ ಇಂದು ದುರಂತ ಸಂಭವಿಸಿದೆ. ನಾಗೇನಹಳ್ಳಿಯ ನಾಗನಗೌಡ ಎಂಬುವವರ ಗಾಣವನ್ನ ಗುತ್ತಿಗೆ ಪಡೆದಿದ್ದ ಉತ್ತರ ಪ್ರದೇಶದ ಈ ಮೃತ ಕಾರ್ಮಿಕ ಒಂದು ಟನ್ ಕಬ್ಬನ್ನ ನುರಿಸಲು ಎಪ್ಪತ್ತು ರೂಪಾಯಿಯಂತೆ ಗುತ್ತಿಗೆ ಪಡೆದಿದ್ದ, ನಾಲ್ಕಾರು ಜನ ಕಾರ್ಮಿಕರನ್ನ ಜೊತೆಗೆ ಇಟ್ಟುಕೊಂಡಿದ್ದ ಈ ಮೃತ ವ್ಯಕ್ತಿ ನಾಳಿನ ಕೆಲಸಕ್ಕೆ ಯಂತ್ರ ರೆಡಿಮಾಡಲು ಮುಂದಾಗಿದ್ದಾಗ ಈ ಘಟನೆ ನಡೆದಿದೆ.

ಅದರಲ್ಲೂ ಇತ್ತೀಚೆಗೆ ಹೊಸಪೇಟೆ ಸುತ್ತ ಮುತ್ತ ಇರುವ ಗಾಣಗಳು ಕಬ್ಬು ನುರಿಯುವ ಕೆಲಸವನ್ನ ಹೆಚ್ಚು ಹೆಚ್ಚಾಗಿ ಮಾಡುತ್ತಿವೆ. ಕಾರಣ ಹೊಸಪೇಟೆ ನಗರದ ಚಿತವಾಡಿಗೆಯಲ್ಲಿದ್ದ ಐ.ಎಸ್.ಆರ್.ಸಕ್ಕರೆ ಕಾರ್ಖಾನೆ ಬಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ತಾವು ಬೆಳೆದ ಕಬ್ಬನ್ನ ಕಟಾವು ಮಾಡಿ ಬೇರೆಡೆ ಸಾಗಾಟಮಾಡಲು ಹೆಚ್ಚು ವೆಚ್ಚ ಬರಿಸಲಾಗದೆ ಈ ರೀತಿಯ ಗಾಣಗಳ ಮೊರೆ ಹೋಗಿದ್ದು, ಬೆಲ್ಲ ತಯಾರಿಸಿ ಮಾರಾಟಮಾಡುವ ಕಾಯಕ ಹೆಚ್ಚಾಗಿದೆ. ಹಾಗಾಗಿ ಯು.ಪಿ.ಯಿಂದ ಬಂದ ಕೂಲಿ ಕಾರ್ಮಿಕರ ಕುಟುಂಭಗಳು ಇಲ್ಲಿನ ಗಾಣಗಳಲ್ಲಿ ಕೂಲಿ‌ ಕೆಲಸಮಾಡಿಕೊಂಡು ಬದುಕು ಕಟ್ಟಿಕೊಂಡಿವೆ.

ವರದಿ..ಸುಬಾನಿ ಪಿಂಜಾರ ಹಂಪಿ‌ ಮಿರರ್ ವಿಜಯನಗರ.