You are currently viewing ಅವೈಜ್ಞಾನಿಕ ರಸ್ತೆ ಕಾಮಗಾರಿ ಬಲಿ ಪಡಿಯಿತಾ ಎರಡು ಅಮಾಯಕ ಜೀವಗಳನ್ನ.?

ಅವೈಜ್ಞಾನಿಕ ರಸ್ತೆ ಕಾಮಗಾರಿ ಬಲಿ ಪಡಿಯಿತಾ ಎರಡು ಅಮಾಯಕ ಜೀವಗಳನ್ನ.?

  • Post category:Uncategorized

ವಿಜಯನಗರ ( ಹೊಸಪೇಟೆ )ರಸ್ತೆ ಮಧ್ಯದಲ್ಲಿ ನಿಲ್ಲಿಸಿದ ಜೆಸಿಬಿಗೆ ಬೈಕ್ ಸವಾರ ನೊಬ್ಬ ಡಿಕ್ಕಿ ಹೊಡೆದು ಪರಿಣಾಮ ಇಬ್ಬರು ಸಾವನಪ್ಪಿದ ಭೀಕರ ಅಪಘಾತ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಕಮಲಾಪುರ ಬಳಿ ನಡೆದಿದೆ. ಹೊಸಪೇಟೆಯಿಂದ ಕಮಲಾಪುರಕ್ಕೆ ಸಂಪರ್ಕ ಕಲ್ಪಿಸುವ ಕಮಲಾಪುರ ಕೆರೆಯ ವೆಲ್ಕಮ್ ಬೋರ್ಡ್ ಬಳಿಯಲ್ಲಿ ಕಳೆದ ಒಂದು ತಿಂಗಳಿನಿಂದ ಸೇತುವೆ ಕಾಮಗಾರಿ ನಡೆಯುತ್ತಿದೆ.

ಈ ಸಂಬಂಧ ನಡು ರಸ್ತೆಯಲ್ಲಿ ಜೆ.ಸಿ ಬಿ.ನಿಲ್ಲಿಸಲಾಗಿತ್ತು, ದಿನಾಂಕ 9ನೇ ತಾರೀಖಿನಂದು ರಾತ್ರಿ 11:30 ಸುಮಾರಿಗೆ ಬೈಕಲ್ಲಿ ಬಂದ ವ್ಯಕ್ತಿ ನಡು ರಸ್ತೆಯಲ್ಲಿ ನಿಂತಿದ್ದ ಜೆಸಿಬಿಗೆ ಡಿಕ್ಕಿ ಹೊಡೆದು ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಈ ಸಂದರ್ಭದಲ್ಲಿ ಜೆಸಿಬಿ ಕೆಳಗಡೆ ಮಲಗಿದ್ದ ಜೆಸಿಬಿ ಆಪರೇಟರ್ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಬೈಕ್ ಸವಾರ ಕಮಲಾಪುರದ ಶಫಿ (26)
ಮತ್ತು ಜೆಸಿಬಿ ಆಪರೇಟರ್ ಜಾರ್ಖಂಡ್ ಮೂಲದ ದಿಲೀಪ್ ಕುಮಾರ್ ರಾಣ. (29) ಸಾವನಪ್ಪಿದ ದುರ್ದೈವಿಗಳಾಗಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲಾಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇನ್ನು ಈ ದುರ್ಘಟನೆಗೆ ಸೇತುವೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರನ ಅವೈಜ್ಞಾನಿಕ ನೀತಿ ಕಾರಣ ಎನ್ನಲಾಗಿದೆ. ಹೌದು ಸೇತುವೆ ಕಾಮಗಾರಿ ಪ್ರಾರಂಭವಾಗಿ ಹಲವು ದಿನಗಳು ಕಳೆದಿದೆ. ಹೀಗಿದ್ದರೂ ಸರಿಯಾದ ಪರ್ಯಾಯ ರಸ್ತೆಯನ್ನು ನಿರ್ಮಾಣ ಮಾಡಿಲ್ಲ.  ಅದರ ಜೊತೆ ರಾತ್ರಿ ವಾಹನ ಸವಾರರಿಗೆ ರಸ್ತೆ ಕಾಣುವಂತೆ ಮಾರ್ಗ ಸೂಚಕವನ್ನು ಸಹ ಅಳವಡಿಸಿಲ್ಲ, ಅದರ ಪರಿಣಾಮ ಈ ದುರ್ಘಟನೆ ನಡೆದಿದೆ.

ಹೊಸಪೇಟೆಯಿಂದ ವಿಶ್ವ ವಿಖ್ಯಾತ ಹಂಪಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಅದಲ್ಲದೆ ಹೈದರಾಬಾದ್, ರಾಯಚೂರು, ಗುಲ್ಬರ್ಗದಂತ ನಗರಗಳಿಗೆ ಕೂಡ ಸಂಪರ್ಕ ಕಲ್ಪಿಸುವ ರಾಜ್ಯದ ಪ್ರಮುಖ ರಸ್ತೆ ಇದಾಗಿದೆ. ಹೀಗಿದ್ದರೂ ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸಿ ಅಮಾಯಕರ ಜೀವ ಬಲಿ ಪಡೆಯಲಾಗಿದೆ ಎಂದು ಸ್ಥಳಿಯರು ಆರಪಿಸಿದ್ದಾರೆ.

ವರದಿ… ಸುಭಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.