You are currently viewing ಆಯಿಲ್ ಗ್ಯಾಂಗಿಗೆ ತಣ್ಣೀರು ಕುಡಿಸಿದ ಹೊಸಪೇಟೆ ಗ್ರಾಮೀಣ ಪೊಲೀಸರು.

ಆಯಿಲ್ ಗ್ಯಾಂಗಿಗೆ ತಣ್ಣೀರು ಕುಡಿಸಿದ ಹೊಸಪೇಟೆ ಗ್ರಾಮೀಣ ಪೊಲೀಸರು.

ವಿಜಯನಗರ(ಹೊಸಪೇಟೆ)..ಹಲವು ದಿನಗಳಿಂದ ಗ್ರೀಸ್ ಮತ್ತು ಆಯಿಲ್ ಕಳ್ಳತನ ದಂದೆಯಲ್ಲಿ ತೊಡಗಿಕೊಂಡಿದ್ದ ಮೂರು ಜನ ಕಳ್ಳತನ ಆರೋಪಿಗಳನ್ನ ಬಂದಿಸುವಲ್ಲಿ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂದಿತರಿಂದ 16 ಲಕ್ಷಕ್ಕೂ ಅಧಿಕ ಮೌಲ್ಯದ 70 ಬ್ಯಾರಲ್ ಆಯಿಲ್, 8 ಲಕ್ಷದ 50 ಸಾವಿರ ಮೌಲ್ಯದ 17 ಬ್ಯಾರಲ್ ಗ್ರೀಸ್ ಮತ್ತು ಕಳ್ಳತನಕ್ಕೆ ಬಳಕೆಮಾಡಿದ್ದ 7 ಲಕ್ಷ ಮೌಲ್ಯದ ಒಂದು ಬುಲೇರೊ ವಾಹನವನ್ನ ವಶಕ್ಕೆ ಪಡೆದಿದ್ದಾರೆ.

1)ಮಂಜುನಾಥ ತಂದೆ ಕೃಷ್ಣಪ್ಪ, ಜಯನಗರ ಬೆಂಗಳೂರು.

2)ಮುಸ್ತಾಕ್ ಕೈಯಿಯ ತಂದೆ ಇಬ್ರಹೀಂ. ಹರಳೀಪುರ. ಚನ್ನಗಿರಿ ತಾಲೂಕು. ದಾವಣಗೆರೆ ಜಿಲ್ಲೆ.

3) ಗಜೇಂದ್ರ ತಂದೆ ಚನ್ನಪ್ಪ ದೇವನಹಳ್ಳಿ ಬೆಂಗಳೂರು.

ಈ ಮೂರು ಜನ ಬಂದಿತ ಆರೋಪಿಗಳಾಗಿದ್ದಾರೆ.

ಹೊಸಪೇಟೆ ನಗರದ ಸುಲೇಖ ತಂದೆ ನರಸಿಂಗಯ್ಯ ಎಂಬುವವರು ತಮಗೆ ಸಂಭಂದಿಸಿದ ಯಾರ್ಡಲ್ಲಿ ಸಂಗ್ರಹಿಸಿದ್ದ ಟ್ರಾನ್ಸ್ ಪಾರ್ಮರ್ ಆಯಿಲ್ ಮತ್ತು ಗ್ರೀಸ್ ಕಳ್ಳತನ ಆಗಿರುವ ಕುರಿತು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ದೂರಿನ ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಶ್ರೀನಿವಾಸ್ ಮೇಟಿ ನೇತೃತ್ವದ ತಂಡ ಹೊಸಪೇಟೆ ಸೇರಿದಂತೆ ಬೆಂಗಳೂರಿನ ಕೆಲವೆಡೆ ಜಾಲಾಡಿ ಆಯಿಲ್ ಕಳ್ಳರನ್ನ ಹಿಡಿದು ತಣ್ಣೀರು ಕುಡಿಸಿದ್ದಾರೆ.

ಹೊಸಪೇಟೆ ಡಿ.ವೈ.ಎಸ್ಪಿ. ವಿಶ್ವನಾಥ ಕುಲಕರ್ಣಿ ಮಾರ್ಗದರ್ಶನದಲ್ಲಿ ರಚನೆಯಾದ ಈ ತನಿಖಾ ತಂಡದಲ್ಲಿ, ಮಂಜುನಾಥ ಮೇಟಿ, ಜಿ.ಕೊಟ್ರೇಶ. ಅಡಿವೆಪ್ಪ ಕಬ್ಬಳಿ, ಸಣ್ಣಗಾಳೆಪ್ಪ, ಕೊಟ್ರೇಶ ಎ. ಚಂದ್ರಪ್ಪ ಬಿ. ನಾಗರಾಜ್ ಬಿ. ಸಂತೋಷ್ ಕುಮಾರ್, ಅಬ್ದುಲ್ ನಜೀರ್, ಕಾರ್ಯಾಚರಣೆ ತಂಡದಲ್ಲಿ ಬಾಗಿಯಾಗಿದ್ದರು. ಪ್ರಕರಣವನ್ನ ಅಚ್ಚುಕಟ್ಟಾಗಿ ಕಾರ್ಯಾಚರಣೆ ಮಾಡಿ ಮುಗಿಸಿದ ತಮ್ಮ ತಂಡಕ್ಕೆ ವಿಜಯನಗರ ಎಸ್ಪಿ. ಡಾಕ್ಟರ್ ಅರುಣ್ ಕುಮಾರ್ ಕೆ ಅಭಿನಂದನೆ ಸಲ್ಲಿಸಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.