You are currently viewing ಬಿಹಾರಿ ಹಂತಕನ ಬಂದಿಸಿದ ಹೊಸಪೇಟೆ ಸೂಪರ್ ಕಾಪ್ಸ್.

ಬಿಹಾರಿ ಹಂತಕನ ಬಂದಿಸಿದ ಹೊಸಪೇಟೆ ಸೂಪರ್ ಕಾಪ್ಸ್.

ವಿಜಯನಗರ.ಶಂಕರ್ ಆನಂದ್ ಸಿಂಗ್ ಕಾಲೇಜು ಕಾವಲುಗಾರನ ಕೊಲೆಮಾಡಿದ ಹಂತಕನನ್ನ ಕೊನೆಗೂ ಹೊಸಪೇಟೆ ಗ್ರಾಮೀಣ ಪೊಲೀಸರು ಬಂದಿಸಿದ್ದಾರೆ. ಕಾಲೇಜಿನಲ್ಲಿ ಕಟ್ಟಡ ಗುತ್ತಿಗೆದಾರನಾಗಿ ಕೆಲಸಮಾಡುತಿದ್ದ ಬಿಹಾರ ರಾಜ್ಯದ ಭಾಗಲ್ಪುರ್ ಜಿಲ್ಲೆಯ ಬಾಹತ್ರ ಗ್ರಾಮದ ಸುನಿಲ್ ಕುಮಾರ್ ಬಂದಿತ ಆರೋಪಿಯಾಗಿದ್ದಾನೆ.

ಇದೇ ತಿಂಗಳು ಹತ್ತನೆ ತಾರೀಕಿನ ರಾತ್ರಿ ಕಾವಲುಗಾರ ಗೌಸುಸಾಬನ  ತಲೆಗೆ ಕಲ್ಲು ಎತ್ತಿಹಾಕಿ ಕೊಲೆಮಾಡಲಾಗಿತ್ತು. ಈ ಸಂಭಂದ ಗೌಸುಸಾಬನ ಸಂಭಂದಿಗಳು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕೊಲೆ ಆರೋಪಿಯನ್ನ ಪತ್ತೆಹಚ್ಚಿ ಶಿಕ್ಷೆಗೆ ಒಳಪಡಿಸುವಂತೆ ಮನವಿ ಮಾಡಿಕೊಂಡಿದ್ದರು. ಈ ಸಂಭಂದ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಘಟನೆ ನಡೆದು ಎರಡು ವಾರದ ಒಳಗಡೆ ಪ್ರಕರಣ ಬೇದಿಸಿದ್ದಾರೆ.

ಕಾಲೇಜಿನಲ್ಲಿ ಟೈಲ್ಸ್ ಕೆಲಸಮಾಡುತಿದ್ದ ವಿಚಾರಕ್ಕೆ ಸಂಭಂದಿಸಿದಂತೆ ಗೌಸುಸಾಬು ಮತ್ತು ಸುನಿಲ್ ನಡುವೆ ಹಾಗಾಗ ಮಾತಿನ ಚಕಮಕಿ ನಡೆಯುತಿತ್ತು,ಕೆಲಸ ಸರಿಯಾಗಿ ಮಾಡದಿದ್ದರೆ ಕಾಲೇಜಿನ ಮುಖ್ಯಸ್ಥರಿಗೆ ಹೇಳುವುದಾಗಿ ಸುನಿಲ್ ಕುಮಾರನನ್ನ ಎಚ್ಚರಿಸುತಿದ್ದ ಗೌಸುಸಾಬು, ಇದೇ ದ್ವೇಷವನ್ನ ಮನಸಿನಲ್ಲಿ ಇಟ್ಟುಕೊಂಡು ಒಂದು ದಿನ ರಾತ್ರಿ ಕಾಲೇಜಿನ ಆವರಣದಲ್ಲಿ ಗೌಸುಸಾಬು ಮಲಗಿದ್ದ ಸಂದರ್ಭದಲ್ಲಿ ತಲೆಯ ಮೇಲೆ ಕಲ್ಲು ಹಾಕಿ ಕೊಲೆಮಾಡಿ ಪರಾರಿಯಾಗಿದ್ದ. ವಿಜಯನಗರ ಎಸ್ಪಿ ಡಾಕ್ಟರ್ ಕೆ.ಅರುಣ್ ಕುಮಾರ್ ಮಾರ್ಗದರ್ಶನದಲ್ಲಿ‌ ನಡೆದ ತನಿಖೆಯಲ್ಲಿ ಈ ಸತ್ಯಾಂಶ ಬಯಲಾಗಿದೆ.

ಹೊಸಪೇಟೆ ಡಿ.ವೈ.ಎಸ್ಪಿ.ವಿಶ್ವನಾಥ ಕುಲಕರ್ಣಿ. ಮತ್ತು ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಶ್ರೀನಿವಾಸ್ ಮೇಟಿ ಒಳಗೊಂಡ ತನಿಖಾ ತಂಡದಲ್ಲಿ, ರಾಘವೇಂದ್ರ, ಕೆ.ಸುಭಾಷ್,  ಕೊಟ್ರೇಶ್, ಪ್ರಕಾಶ,ರಮೇಶ. ನಾಗರಾಜ ಬಿ. ಬಾಗಿಯಾಗಿದ್ದರು.ಘಟನೆ ನಡೆದು ಎರಡು ವಾರಗಳಲ್ಲೇ ಆರೋಪಿಯನ್ನ ಬಂದಿಸಿದ ತಮ್ಮ ತಂಡಕ್ಕೆ ಎಸ್ಪಿ ಕೆ.ಅರುಣ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವರದಿ.ಸುಬಾನಿ ಪಿಂಜಾರ ವಿಜಯನಗರ.