You are currently viewing ನಟ ದರ್ಶನ್ ಮೇಲೆ ಶೂ ಎಸೆದಿದ್ದ ಆರೋಪಿಗಳನ್ನ ಹೊಸಪೇಟೆ ಪಟ್ಟಣ ಪೊಲೀಸರು ಕೊನೆಗೂ ಬಂಧಿಸಿದರು.

ನಟ ದರ್ಶನ್ ಮೇಲೆ ಶೂ ಎಸೆದಿದ್ದ ಆರೋಪಿಗಳನ್ನ ಹೊಸಪೇಟೆ ಪಟ್ಟಣ ಪೊಲೀಸರು ಕೊನೆಗೂ ಬಂಧಿಸಿದರು.

  • Post category:Uncategorized

ವಿಜಯನಗರ ( ಹೊಸಪೇಟೆ )ಅಂತೂ ಇಂತೂ ನಟ ದರ್ಶನ್ ಮೇಲೆ ಶೂ ಎಸೆದಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ವಿಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಇಂದು ಪತ್ರಿಕಾ ಪ್ರಕಟಣೆ ಹೊರಡಿಸಿರುವ ವಿಜಯನಗರ ಎಸ್ಪಿ ಶ್ರೀಹರಿ ಬಾಬು. ಕ್ರಾಂತಿ ಸಿನಿಮಾದ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮದ ಆಯೋಜಕರು ನೀಡಿದ್ದ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಹೊಸಪೇಟೆ ಪಟ್ಟಣ ಪೊಲೀಸ್ರು, ಆರೋಪಿಗಳನ್ನು ಬಂಧಿಸಿ ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಎಸ್ಪಿ ಶ್ರೀಹರಿ ಬಾಬು ಹೊಸಪೇಟೆ ಡಿವೈಎಸ್ಪಿ ನೇತೃತ್ವದಲ್ಲಿ ತನಿಕಾ ತಂಡವನ್ನು ರಚಿಸಿದ್ದು, ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಾಳನಗೌಡ, ಪಿಎಸ್ಐ ಮುನಿರತ್ನಂ ಹಾಗೂ ಸಿಬ್ಬಂದಿಯವರಾದ ರಾಘವೇಂದ್ರ ಪ್ರಕಾಶ್, ಕಳಕರೆಡ್ಡಿ ಶ್ರೀನಿವಾಸ, ಜಾವೇದ್ ಹಾಗೂ ಪರಶುರಾಮ್ ನಾಯಕ್, ತನಿಕಾ ತಂಡದಲ್ಲಿ ಇದ್ದರು.

ಎಸ್ ಪಿ ಶ್ರೀಹರಿ ಬಾಬು ಆದೇಶದ ಮೇರೆಗೆ ತನಿಖೆ ಪ್ರಾರಂಭಿಸಿದ ಈ ತನಿಕ ತಂಡ ಕಳೆದ ಏಳು ದಿನಗಳಿಂದ ತನಿಖೆಯನ್ನು ಚುರುಕುಗಳಿಸಿದ್ದು ಇಂದು ಆರೋಪಿಗಳನ್ನ ಎಡೆ ಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಅದರ ಜೊತೆ ಇನ್ನುಳಿದ ಆರೋಪಿಗಳ ಹುಡುಕಾಟಕ್ಕೂ ಕೂಡ ಪೊಲೀಸರು ಜಾಲ ಬೀಸಿದ್ದಾರೆ. ಆದರೆ ಬಂದನವಾಗಿರುವ ಆರೋಪಿಗಳ ಹೆಸರನ್ನ ಪೊಲೀಸರು ಬೈರಂಗಪಡಿಸಿಲ್ಲ.