You are currently viewing ಹಿಜಾಬ್ ಕೇಸರಿ ಶಾಲಿನ ಗಾಳಿಯ ದೋಷ ಇದೀಗ ಹೊಸಪೇಟೆಯಲ್ಲಿ

ಹಿಜಾಬ್ ಕೇಸರಿ ಶಾಲಿನ ಗಾಳಿಯ ದೋಷ ಇದೀಗ ಹೊಸಪೇಟೆಯಲ್ಲಿ

ವಿಜಯನಗರ…ಹಿಜಾಬ್ V/S ಕೇಸರಿ ವಿವಾದ ಪ್ರಕರಣ ತಣ್ಣಗಾಗುತ್ತೆ ಎನ್ನುವಷ್ಟರಲ್ಲಿ ಇದೀಗ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ನಗರದಲ್ಲೂ ಕಾಣಿಸಿಕೊಂಡಿದೆ. ಸದ್ಯಕ್ಕೆ ಹೊಸಪೇಟೆಯ ಥಿಯೊಸಾಫಿಕಲ್‌ ಕಾಲೇಜ್ ನಲ್ಲಿ ಇಂತದ್ದೊಂದು ಗದ್ದಲು ಪ್ರಾರಂಭವಾಗಿದೆ.
ಇಂದು ಕಾಲೇಜಿಗೆ ಹೋದ ಕೆಲವು ವಿಧ್ಯಾರ್ಥಿನೀಯರ ಹಿಜಾಬ್ ತೆಗೆಯಲು ಕಾಲೇಜಿನ ಪ್ರಾಂಶುಪಾಲರು ಸೂಚಿಸಿದ್ದಾರೆ.

ಆದರೆ ವಿಧ್ಯಾರ್ಥಿನೀಯರು ಇದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ತರಗತಿಯಿಂದ ಹೊರಗುಳಿಯಲು ಸೂಚಿಸಿದ್ದಾರೆ, ಈ ವಿಷಯ ವಿಧ್ಯಾರ್ಥಿನೀಯರ ಪೊಷಕರಿಗೆ ತಿಳಿದ ಹಿನ್ನೆಲೆಯಲ್ಲಿ ಕಾಲೇಜಿಗೆ ಪೊಷಕರು ಬಂದು ಪರ ವಿರೋಧ ಚರ್ಚೆಗಳು ಉಂಟಾಗಿದೆ. ವಿಷಯ ತಿಳಿಯುತಿದ್ದಂತೆ ಕಾಲೇಜಿಗೆ ಹೊಸಪೇಟೆಯ ಎಸಿ ಸಿದ್ಧರಾಮೇಶ್ವರ, ಪ್ರಭಾರ ತಹಶಿಲ್ದಾರ್ ಮೇಘ, ಬಿಇಒ ಸುನಂದಮ್ಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತಿದ್ದಾರೆ.

ಸದ್ಯಕ್ಕೆ ಹಂಪಿ ರಸ್ತೆಯಲ್ಲಿರುವ ಕಾಲೇಜಿನ ಸುತ್ತಮುತ್ತ ಬಿಗಿ ಪೊಲೀಸ್ ಬಂದೊಬಸ್ತ ಹಾಕಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ವಿಜಯನಗರ ಎಸ್ಪಿ.ಆರುಣ್. ಮುನ್ನೆಚ್ಚರಿಕೆ ಕ್ರಮ ವಹಿಸಿದ್ದಾರೆ.

ಇನ್ನು ಕಾಲೇಜಿಗೆ ಬೇಟಿ ನೀಡಿದ ಎ.ಸಿ.ಸಿದ್ದರಾಮೇಶ್ಚರ ವಿಧ್ಯಾರ್ಥಿನೀಯರು ಮತ್ತು ಅವರ ಪೊಷಕರು ಹಾಗೂ ಕಾಲೇಜಿನ ಪ್ರಾಂಶುಪಾಲರ ಜೊತೆ ಸಂದಾನದ ಮಾತುಕತೆ ನಡೆಸಿ ಮನವಲಿಸುವಲ್ಲಿ ಯಶಸ್ವಿಯಾಗಿದ್ದಾರೆ, ನ್ಯಾಯಾಲಯದ ಆದೇಶ ಬರುವವರೆಗೆ ಸಮವಸ್ತ್ರ ಹೊರತುಪಡಿಸಿ ಬೇರೆ ಯಾವುದೇ ರೀತಿಯ ವಸ್ತ್ರ ಧರಿಸದಂತೆ ಸೂಚಿಸಲಾಗಿದ್ದು ಅದಕ್ಕೆ ಎಲ್ಲರ ಒಪ್ಪಿಗೆ ಸಿಕ್ಕಿದೆ, ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ.

ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.

https://youtu.be/24L0j55tDZo

ವರದಿ..ಸುವಾನಿ ಪಿಂಜಾರ ಹಂಪಿ‌ ಮಿರರ್ ವಿಜಯನಗರ.