You are currently viewing ಗುಡೇಕೊಟೆ ಪೊಲೀಸರ ಕಾರ್ಯಾಚರಣೆ ಕುರಿ ಕಳ್ಳರ ಬಂದನ.

ಗುಡೇಕೊಟೆ ಪೊಲೀಸರ ಕಾರ್ಯಾಚರಣೆ ಕುರಿ ಕಳ್ಳರ ಬಂದನ.

ವಿಜಯನಗರ.. ಜಮೀನಿನ ಬದುವಿನಲ್ಲಿ ಕಟ್ಟಿ ಹಾಕಿದ ಕುರಿಗಳನ್ನ ಕಳ್ಳತನ ಮಾಡಿದ್ದ ಕುರಿ ಖದೀಮರ ಬಂದಿಸುವಲ್ಲಿ ಗುಡೇಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ, ಬದ್ರಿ, ಪ್ರದೀಪ್ ಬಂದಿತ ಆರೋಪಿಗಳಾಗಿದ್ದು, ಬಂದಿತರಿಂದ ಮೂರು ಕುರಿ‌ ಮತ್ತು ಕುರಿ ಕಳ್ಳತನಕ್ಕೆ ಬಳಸಿದ್ದ ಬೈಕ್ ವಶಕ್ಕೆ ಪಡೆದಿದ್ದಾರೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ರೈತ ಓದ ಪಾಲಯ್ಯ ಎಂಬ ರೈತ ಜಮೀನಿನಲ್ಲಿ ಕೆಲಸಮಾಡುವ ಸಂದರ್ಭದಲ್ಲಿ ಬದುವಿನಲ್ಲಿ ಕರಿ ಕಟ್ಟಿ ಹಾಕಿ ಕೃಷಿ ಕೆಸದಲ್ಲಿ ತೊಡಗಿಕೊಂಡಿದ್ದ, ರೈತ ಕೃಷಿ ಚಟುವಟಿಕೆಯಲ್ಲಿ ಬಾಗಿಯಾಗಿದ್ದನ್ನ ಕಂಡ ಖದೀಮರರು, ಕರಿ ಕಳ್ಳತನಮಾಡಿ ಪರಾರಿಯಾಗಿದ್ದರು.

ಈ ಸಂಭಂದ ಓದ ಪಾಲಯ್ಯ ಇದೇ ತಿಂಗಳು 12ನೇ ತಾರೀಕಿನಂದು ಕುರಿ ಕಳ್ಳತನ ಆಗಿರುವ ಕುರಿತು ಗುಡೇಕೋಟೆ ಪೊಲೋಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು,ಪ್ರಕರಣದ ತನಿಖೆ ಕೈಗೊಂಡ ಪಿ.ಎಸ್.ಐ  ಮಾಲೀಕ್ ಸಾಹೇಬ್ ಕಲಾರಿ ಮತ್ತು ಸಿಬ್ಬಂದಿಗಳು ಈ ಇಬ್ಬರು ಕಳ್ಳರನ್ನ ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದರು, ಪೊಲೀಸರು ಬಿಸಿ ಮುಟ್ಟಿಸಿದ ಕಾರಣಕ್ಕೆ ಕಳ್ಳತನ ಬಾಯಿ ಬಿಟ್ಟ ಖದೀಮರು ತಪ್ಪೊಪ್ಪಿಕೊಂಡಿದ್ದಾರೆ, ಹಾಗಾಗಿ ಕುರಿ ಕಳ್ಳರ ವಿರುದ್ದ ದೂರು ದಾಖಲಿಸಿ ಜೈಲಿಗೆ ಅಟ್ಟಿ ರೈತರಿಗೆ ಕುರಿ ಮರಳಿ ನೀಡಿದ್ದಾರೆ.

ಕೂಡ್ಲಿಗಿ ಡಿವೈಎಸ್ಪಿ ಹಾಗೂ ಸಿಪಿಐ ಮಾರ್ಗದರ್ಶನದಲ್ಲಿ ಈ ತನಿಖಾ ತಂಡದಲ್ಲಿ ಸಿಬ್ಬಂದಿಗಳಾದ ಮಂಜುನಾಥ, ಗುರುಸ್ವಾಮಿ ರಾಘವೇಂದ್ರ, ಮಹಾಂತೇಶ್ ಬಾಗಿಯಾಗಿದ್ದರು, ಸಿಬ್ಬಂದಿಯ ಕಾರ್ಯವನ್ನ ಮೆಚ್ಚಿದ ವಿಜಯನಗರ ಎಸ್ಪಿ ಡಾಕ್ಟರ್ ಅರುಣ್ ಕುಮಾರ್ ಕೆ. ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ‌ ಮಿರರ್ ವಿಜಯನಗರ.