You are currently viewing ಆಂದ್ರಪ್ರದೇಶದಲ್ಲಿ‌ ನಡೆಯುತ್ತೆ ಬಡಿಗೆ ಜಾತ್ರೆ.

ಆಂದ್ರಪ್ರದೇಶದಲ್ಲಿ‌ ನಡೆಯುತ್ತೆ ಬಡಿಗೆ ಜಾತ್ರೆ.

ವಿಜಯನಗರ.. ಜಿಲ್ಲೆಯ ಹೂವ್ವಿನ ಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ದೇಶದಲ್ಲೇ ಪ್ರಖ್ಯಾತಿ ಪಡೆದಿದೆ, ಕಾರಣ ಅಲ್ಲಿನ ವರ್ಷದ ಭವಿಷ್ಯವಾಣಿ. ಈ ಭವಿಷ್ಯವಾಣಿ ವೀಕ್ಷಣೆಮಾಡಲು ಲಕ್ಷ ಲಕ್ಷ ಜನ  ಸೇರುವುದು ಪ್ರತೀ ವರ್ಷದ ಪದ್ದತಿ, ಅದೇರೀತಿ ನಾವೀಗ ನಿಮಗೆ ತೋರಿಸಲು ಹೊರಟಿರುವ ಸುದ್ದಿ ಕೂಡ ಕಾರ್ಣಿಕೋತ್ಸವದ ವಿಷಯವೇ, ಆದರೆ ಮೈಲಾರ ಗ್ರಾಮದಲ್ಲಿ ನಡೆದ ಕಾರ್ಣಿಕೋತ್ಸವ ಅಲ್ಲ, ಬದಲಾಗಿ ನಮ್ಮ ನೆರೆಯ ರಾಜ್ಯವಾದ ಆಂದ್ರ ಪ್ರದೇಶದ ದೇವರ ಗುಡ್ಡದಲ್ಲಿ ನಡೆಯುವ ಕಾರ್ಣಿಕದ ಸುದ್ದಿ ಇದು. ಅದರಲ್ಲೂ ಈ ಸುದ್ದಿ ನೋಡಿದರೆ ನೀವು ಆಶ್ಚರ್ಯ ಪಡುತ್ತೀರಿ, ಯಾಕೆಂದ್ರೆ ಈ ಜಾತ್ರೆಗೆ ಹೋಗಬೇಕಾದ್ರೆ ಮೈಯಲ್ಲಿ ಶಕ್ತಿ ಇರಬೇಕು ಕೈಯಲ್ಲಿ ಒಂದು ಬಡಿಗೆ ಇರಬೇಕು. ಅರೆ ಏನಿದು ಅಂತೀರ ಹೌದು ಆಂದ್ರ ಪ್ರದೇಶದ ಕರ್ನೂಲು ಜಿಲ್ಲೆಯ ಆಲೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ನಡೆಯುವ ಈ ಕಾರ್ಣಿಕೋತ್ಸವದಲ್ಲಿ ಲಕ್ಷ ಲಕ್ಷ ಜನ ಸೇರುತ್ತಾರೆ, ಹೀಗೆ ಸೇರಿದ ಕೆಲವು ಭಕ್ತರ ಕೈಯಲ್ಲಿ ಬಡಿಗೆ ದೊಣ್ಣೆಗಳು ಇರುವುದು ಸರ್ವೇ ಸಾಮಾನ್ಯ, ಕೈಯಲ್ಲಿ ಹಿಡಿದ ಬಡಿಗೆಯಿಂದ ಎದುರಾಳಿಗಳ ಮೇಲೆ ದಾಳಿಮಾಡುವುದು ಕೂಡ ಸರ್ವೇ ಸಾಮಾನ್ಯವಗಿರುತ್ತೆ ಈ ಜಾತ್ರೆಯಲ್ಲಿ,

ಹಾಗಾಗಿ ಕರ್ನಾಟಕ ಮತ್ತು ಆಂದ್ರ ಗಡಿ ಬಾಗದಲ್ಲಿ ನಡೆಯುವ ಈ ಜಾತ್ರೆಗೆ ನಮ್ಮ ಆಡು ಭಾಷೆಯಲ್ಲಿ ಬಡಿಗೆ ಜಾತ್ರೆ ಎಂದು ಕರೆಯುತ್ತಾರೆ ಜನ ಸಾಮನ್ಯರು. ಹೀಗೆ ಬಡಿಗೆಯಿಂದ ಬಡಿದಾಡಿಕೊಳ್ಳಯವ ಸಂದರ್ಭದಲ್ಲಿ ನೂರಾರು ಜನರಿಗೆ ಗಾಯಗಳಾಗಿ ಕೆಲವರು ಪ್ರಾಣ ಕಳೆದುಕೊಂಡ ಉದಾಹಾರಣೆಗಳು ಕೂಡ ನಡೆದಿವೆ. ಈ ವರ್ಷ ಕೂಡ ಅರವತ್ತಕ್ಕು ಹೆಚ್ಚು ಜನರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಿದ್ದರು ವರ್ಷಕ್ಕಿಂತ ವರ್ಷ ಈ ಬಡಿಗೆ ಜಾತ್ರೆಗೆ ಹೆಚ್ಚು ಜನ ಸೇರುತ್ತಾರೆ.
ಇನ್ನು ಜಾತ್ರೆಯಲ್ಲಿ ಸೇರಿದ ಭಕ್ತರು ಬಡಿಗೆಯಿಂದ ಬಡಿದಾಡಲು ಕಾರಣ ಇಲ್ಲಿನ‌ ಆರಾಧ್ಯ ದೈವ ಮಳೆ ಮಲ್ಲೇಶ್ವರಸ್ವಾಮಿ, ಹೌದು ಮಳೆ ಮಲ್ಲೇಶ್ವರಸ್ವಾಮಿ ಮೂರ್ತಿಯನ್ನ ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗಬೇಕೆಂದು ಕೆಲವು ಗ್ರಾಮಸ್ಥರು ದೇವಸ್ಥಾನ ಪ್ರವೇಶಿಸಲು ಪ್ರಯತ್ನಿಸುತ್ತಾರೆ. ಅದನ್ನ ಕೆಲವು ಗ್ರಾಮಸ್ಥರು ತಡೆಯಲು ಮುಂದಾಗುತ್ತಾರೆ, ಈ ಸಂದರ್ಭದಲ್ಲಿ ಕೈಯಲ್ಲಿದ್ದ ಬಡಿಗೆಗಳು ಗಾಳಿಯಲ್ಲಿ ಹಾರಾಡುವುದಕ್ಕೆ ಪ್ರಾರಂಬಿಸುತ್ತವೆ. ಸಿಕ್ಕ ಸಿಕ್ಕಂತೆ ಬಡಿಗೆ ಬೀಸಾಡುವುದು ಬಡಿಯುವುದು ಸರ್ವೇ ಸಾಮಾನ್ಯವಾಗಿಬಿಟ್ಟಿರುತ್ತೆ. ಕೆಲವು ದೃಷ್ಯಗಳನ್ನ ನಾವು ನಿಮಗೆ ತೋರಿಸುವ ಹಾಗಿಲ್ಲ, ಕಾರಣ ಯೂಟೂಬ್ ಗೈಡ್ ಲೈನ್, ಹಾಗಾಗಿ ಅಂತಾ ದೃಷ್ಯಗಳನ್ನ ಕೈ ಬಿಟ್ಟು ಕೆಲವು ದೃಷ್ಯಗಳನ್ನ ಮಾತ್ರ ‌ನಿಮ್ಮ ಮುಂದೆ ಇಡಲಾಗಿದೆ. ಇನ್ನು ಈ ಆಚರಣೆ ನಡೆಯುವುದು ದಸರ ಹಬ್ಬದ ಬನ್ನಿ ಮುಡಿಯುವ ಮಾರನೆ ದಿನ ಬೆಳಗಿನ ಜಾವ ಎರಡರಿಂದ ಮೂರುಗಂಟೆ ಸುಮಾರಿಗೆ, ಈ ಜಾತ್ರೆಗೆ ಇಲ್ಲಿನ ಹತ್ತಾರು ಗ್ರಾಮದ ಜನಸಾಮಾನ್ಯರು ಬಡಿಗೆ ಹಿಡಿದು ಬಂದ್ರೆ, ಈ ದೃಷ್ಯವನ್ನ ನೋಡಲೆಂದೇ ಲಕ್ಷ ಲಕ್ಷ ಜನಸೇರುತ್ತಾರೆ, ಇತ್ತೀಚೆಗೆ ಮಾಧ್ಯಮಗಳು ಈ ಜಾತ್ರೆಯ ಮೇಲೆ ಬೆಳಕು ಚಲ್ಲುತಿದ್ದಂತೆ ಹೆಚ್ಚು ಹೆಚ್ವು ಜನ ಇಲ್ಲಿ ಸೇರುವುದು ಕಂಡು ಬರುತ್ತಿದೆ. ಇನ್ನು ಇಷ್ಟೆಲ್ಲ ಬಡಿಗೆಯಿಂದ ಇಲ್ಲಿ ಬಡಿದಾಟ ನಡೆದರೂ ಪೊಲೀಸ್ ಇಲಾಖೆ ಆಗಲಿ ಇಲ್ಲಿನ ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ, ಕಾರಣ ಈ ಬಾಗದ ಜನ ಸಾಮಾನ್ಯರ ಆಚರಣೆ ಇದಾಗಿದೆ, ಹಾಗಾಗಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೇ ಇಲ್ಲಿ ಮುಂದೆ ನಿಂತು ಜಾತ್ರೆ ಕಾರ್ಯಕ್ರಮಕ್ಕೆ ಅನುವುಮಾಡಿಕೊಡುತ್ತಾರೆ.

ಅದಲ್ಲದೆ ಬಡಿದಾಟದಲ್ಲಿ ಗಾಯಗೊಂಡವರಿಗೆ ಚಿಕಿತ್ಸ ನೀಡಲು ಆಸ್ಪತ್ರೆಯನ್ನ ಪ್ರಾರಂಬಿಸಲಾಗಿರುತ್ತೆ, ಹೇಗೆ ನಮ್ಮಲ್ಲಿ ಜಾತ್ರೆಗೆ ಬಂದಂತ ಭಕ್ತರಿಗೆ ಮೂಲ ಸೌಕರ್ಯಗಳನ್ನ ವದಗಿಸಲು ಆಗುತ್ತದೆಯಲ್ಲ ಹಾಗೆ.ಇನ್ನು ಈ ಜನಗಳು ಹೀಗೆ ಬಡಿದಾಡಲು ಕಾರಣ ಇಲ್ಲಿನ ಮಳೆ ಮಲ್ಲೇಶ್ವರ ಸ್ವಾಮಿಯ ಮೂರ್ತಿಯನ್ನ ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋದರೆ ಗ್ರಾಮಕ್ಕೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ ಈ ಭಕ್ತರದ್ದು, ತಮ್ಮ ಗ್ರಾಮಕ್ಕೆ ಒಳ್ಳೆಯದಾಗುತ್ತೆ ಎಂದ್ರೆ ಇವರಿಗೆ ಬೀಳುವ ಬಡಿಗೆ ಏಟನ್ನ ಕೂಡ ಲೆಕ್ಕಿಸದೆ ಸೆಣಸಾಡುತ್ತಾರೆ ಈ ಜನಗಳು. ಹಾಗೆಂದು ಕೂಡಲೇ ಇಲ್ಲಿನ ಜನಗಳು ಈ ಜಾತ್ರೆ ದ್ವೇಶವನ್ನ ಶಾಶ್ವತವಾಗಿಯೇನು ಮುಂದುವರೆಸಲ್ಲ,ಜಾತ್ರೆ ಮುಗಿತೆಂದರೆ ಮತ್ತೆ ಅಣ್ಣ ತಮ್ಮಂದಿರಂತೆ ಒಂದಾಗುತ್ತಾರೆ. ಮತ್ತೊಂದು ವಿಶೇಷತೆ ಎಂದ್ರೆ ಇಲ್ಲಿನ ಅರ್ಚಕರು ಕಾರ್ಣಿಕದ ಭವಿಷ್ಯವಾಣಿ ನುಡಿಯುವುದು ಕನ್ನಡ ಭಾಷಯಲ್ಲೇ. ಕರ್ನೂಲು ಜಿಲ್ಲೆಯ ದೇವರ ಗುಡ್ಡ ಆಂದ್ರ ಪ್ರದೇಶದಲ್ಲಿದ್ದರೂ ಇಲ್ಲಿ ಹೆಚ್ಚಾಗಿ ಬಳಕೆ ಆಗುವ ಬಾಷೆ ಎಂದ್ರೆ ಅದು ಕನ್ನಡ.

ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.