You are currently viewing ಕೂಡ್ಲಿಗಿ ಪೊಲೀಸರ ಯಶಸ್ವಿ ಕಾರ್ಯಾಚರಣೆ ನೆಮ್ಮದಿಯ ನಿಟ್ಟುಸಿರು ಬಿಟ್ಟ ಜನತೆ.

ಕೂಡ್ಲಿಗಿ ಪೊಲೀಸರ ಯಶಸ್ವಿ ಕಾರ್ಯಾಚರಣೆ ನೆಮ್ಮದಿಯ ನಿಟ್ಟುಸಿರು ಬಿಟ್ಟ ಜನತೆ.

ವಿಜಯನಗರ.. ಮನೆಗಳ್ಳನನ್ನ ಬಂದಿಸುವಲ್ಲಿ ವಿಜಯನಗರ ಜಿಲ್ಲೆ ಕೂಡ್ಲಿಗಿ ಪೊಲೀಸರು ಯಶ್ವಿಯಾಗಿದ್ದಾರೆ. ಹೆಚ್.ಹನುಂತ ತಂದೆ ಕೊಲ್ಲಪ್ಪ ಬಂದಿತ ಆರೋಪಿಯಾಗಿದ್ದು, ಬಂದಿತನಿಂದ 4ಲಕ್ಷ 46 ಸಾವಿರ ಮೌಲ್ಯದ 93 ಗ್ರಾಂ ಬಂಗಾರ ಹಾಗೂ 103ಗ್ರಾಂ ಬೆಳ್ಳಿಯ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ.

ಕೂಡ್ಲಿಗಿ ಪಟ್ಟಣದಲ್ಲಿ ಕಳೆದ ಒಂದು ತಿಂಗಳಿನಲ್ಲಿ ಎರಡು ಮನೆಗಳ್ಳತನ ಪ್ರಕರಣಗಳು ವರದಿಯಾಗಿದ್ದು,  ಕೂಡ್ಲಿಗಿ ಡಿ.ವೈ.ಎಸ್ಪಿ ಹಾಗೂ  ಸಿ.ಪಿ.ಐ.ವಸಂತ್ ವಿ. ಅಸೂದೆ. ಅವರ ನೇತೃತ್ವದಲ್ಲಿ ತನಿಖಾ ತಂಡ ರಚನೆಮಾಡಿದ ವಿಜಯನಗರ ಎಸ್ಪಿ ಅವರು ಮನೆಗಳ್ಳನ ಪತ್ತೆಗೆ ಆದೇಶಿಸಿದ್ದರು, ಪ್ರಕರಣದ ಜಾಡು ಹಿಡಿದ ಪಿ.ಎಸ್.ಐ.ಮಾಲಿಕ್ ಸಾಬ್ ಕಲಾರಿ ಹಾಗೂ ದನಂಜಯ್ ಮನೆಗಳ್ಳನನ್ನ ಬಂದಿಸುವಲ್ಲಿ ಯಶ್ವಿಯಾಗಿದ್ದಾರೆ.

ಇಂದು ಬೆಳಗಿನ ಜಾವ ಆರು ಗಂಟೆ ಸುಮಾರಿಗೆ ಕೂಡ್ಲಿಗಿ ಪಟ್ಟಣದಲ್ಲಿ ಅನುಮಾನಸ್ಪದವಾಗಿ ಮಚರಿಸುತಿದ್ದ ಹನುಮಂತನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಮೂರು ಮನೆಗಳ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ರಾಘವೇಂದ್ರ,ತಿಪ್ಪೇಸ್ವಾಮಿ,ಚಂದ್ರಮೌಳಿ, ವಿಜಯಕುಮಾರ್,ಲಕ್ಕಪ್ಪ ಬಿ.ಎಲ್. ಪ್ರಾಣೇಶ್ ಮಡ್ಡಿ, ಶಿವಕುಮಾರ್ ಜೆ.ಎಸ್. ಒಳಗೊಂಡ ತನಿಖಾ ತಂಡವನ್ನ ವಿಜಯನಗರ ಎಸ್ಪಿ ಡಾ.ಅರುಣ್ ಕೆ. ಪ್ರಶಂಸಿಸಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.