You are currently viewing ವಿಜಯನಗರ ಜಿಲ್ಲೆಗೆ ಶ್ರಮವಹಿಸಿದ  ಮೊದಲ ಜಿಲ್ಲಾಧಿಕಾರಿ ಮತ್ತು ಎಸ್ ಪಿ ಅವರನ್ನ ಮರೆತು ಹಂಪಿ ಉತ್ಸವ ಆಚರಣೆ ಮಾಡುವುದು ಸರಿಯೇ..?

ವಿಜಯನಗರ ಜಿಲ್ಲೆಗೆ ಶ್ರಮವಹಿಸಿದ  ಮೊದಲ ಜಿಲ್ಲಾಧಿಕಾರಿ ಮತ್ತು ಎಸ್ ಪಿ ಅವರನ್ನ ಮರೆತು ಹಂಪಿ ಉತ್ಸವ ಆಚರಣೆ ಮಾಡುವುದು ಸರಿಯೇ..?

  • Post category:Uncategorized

ವಿಜಯನಗರ( ಹೊಸಪೇಟೆ) ಹೌದು ವಿಜಯನಗರ ಜಿಲ್ಲೆಯಾದ ಮೇಲೆ ನಡೆಯುವಂತ ಮೊದಲ ಉತ್ಸವ ಈ ಹಂಪಿ ಉತ್ಸವ. ಈ ಉತ್ಸವದಲ್ಲಿ ವಿಜಯನಗರ ಜಿಲ್ಲೆಗೆ ಶ್ರಮ ವಹಿಸಿದ ಮೊದಲ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಮತ್ತು ಎಸ್ಪಿ ಡಾಕ್ಟರ್ ಅರುಣ್ ಕುಮಾರ್ ಕೆ ಅವರನ್ನು ಉತ್ಸವಕ್ಕೆ ಆಹ್ವಾನಿಸಿ ಗೌರವಿಸಬೇಕಿತ್ತು ಎನ್ನುವುದು ವಿಜಯನಗರ ಜಿಲ್ಲೆಯ ಜನಸಾಮಾನ್ಯರ ಅಭಿಪ್ರಾಯ. ಕಾರಣ ಅಖಂಡ ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಜಿಲ್ಲೆ ವಿಭಜನೆಯ ಆದ ಮೇಲೆ, ಇಲ್ಲಿನ ಜಿಲ್ಲಾ ಆಡಳಿತ ಅಚ್ಚುಕಟ್ಟಾಗಿ ಆಡಳಿತ ನಡೆಸಲು ಮಾಡಬೇಕಾದ ಎಲ್ಲ ಕೆಲಸಗಳನ್ನು ಶ್ರಮವಹಿಸಿ ಇಬ್ಬರು ಅಧಿಕಾರಿಗಳು ಮಾಡಿದ್ರು.

ಅದಲ್ಲದೆ ಈ ಅಧಿಕಾರಿಗಳು ವಿಜಯನಗರ ಜಿಲ್ಲೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿಯೇ ಹಂಪಿ ಉತ್ಸವ ನಡೆಯಬೇಕಿತ್ತು, ಆದರೆ ಕಾರಣಾಂತರಗಳಿಂದ ಹಂಪಿ ಉತ್ಸವವನ್ನು ಮುಂದೂಡಲಾಯಿತು, ಅದಾದ ಬಳಿಕ ಆಡಳಿತ ವ್ಯವಸ್ಥೆಯಂತೆ ಈ ಇಬ್ಬರು ಪ್ರಾಮಾಣಿಕ ಅಧಿಕಾರಿಗಳು ವಿಜಯನಗರ ಜಿಲ್ಲೆಯಿಂದ ಬೇರೆ ಕಡೆ ವರ್ಗಾವಣೆಯಾಗಿ ಹೋದರು. ಹೀಗಿರುವಾಗ ಹೊಸ ವಿಜಯನಗರ ಜಿಲ್ಲೆಗೆ ಶ್ರಮವಹಿಸಿದ ಈ ಇಬ್ಬರು ಅಧಿಕಾರಿಗಳನ್ನು ಹಂಪಿ ಉತ್ಸವಕ್ಕೆ ಕರೆಸಿ ಸನ್ಮಾನಿಸಿ ಗೌರವಿಸಬೇಕು ಎನ್ನುವುದು ವಿಜಯನಗರ ಜಿಲ್ಲೆ ಜನತೆಯ ಒತ್ತಾಸೆಯಾಗಿದೆ.

ವರದಿ.. ಸುಭಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ