You are currently viewing ವಿಜಯನಗರ ಜಿಲ್ಲೆಯ ವಕ್ಫ್ ಕಛೇರಿಯನ್ನ ಕೇಂದ್ರ ಸ್ಥಾನದಲ್ಲಿಯೇ ಪ್ರಾರಂಭಿಸುವಂತೆ ಒತ್ತಾಯ.

ವಿಜಯನಗರ ಜಿಲ್ಲೆಯ ವಕ್ಫ್ ಕಛೇರಿಯನ್ನ ಕೇಂದ್ರ ಸ್ಥಾನದಲ್ಲಿಯೇ ಪ್ರಾರಂಭಿಸುವಂತೆ ಒತ್ತಾಯ.

  • Post category:Uncategorized

ವಿಜಯನಗರ (ಹೊಸಪೇಟೆ ): ವಿಜಯನಗರ ಜಿಲ್ಲೆಯ ನೂತನ ಜಿಲ್ಲಾ ವಕ್ಫ್ ಕಛೇರಿಯನ್ನು ಜಿಲ್ಲಾ ಕೇಂದ್ರವಾದ ಹೊಸಪೇಟೆ ನಗರದಲ್ಲಿಯೇ ಆರಂಭಿಸಬೇಕೆಂದು ಸ್ಥಳೀಯ ಅಂಜುಮನ್ ಖಿದ್ಮತೆ ಇಸ್ಲಾಮ್ ಕಮಿಟಿಯ ಆಧ್ಯಕ್ಷರಾದ ಹೆಚ್.ಎನ್. ಮಹಮ್ಮದ ಇಮಾಮ್ ನಿಯಾಜಿ ರವರ ನೇತೃತ್ವದಲ್ಲಿ ವಿಜಯನಗರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನಂತರ ಮಾತನಾಡಿದ ಇಮಾಮ್ ನಿಯಾಜಿ ವಿಜಯನಗರ ಜಿಲ್ಲೆಯ ನೂತನ ಜಿಲ್ಲಾ ವಕ್ಫ್ ಕಛೇರಿಯನ್ನು ಹೊಸಪೇಟೆ ಕೇಂದ್ರ ಸ್ಥಾನವನ್ನು ಹೊರತು ಪಡಿಸಿ ಕಮಲಾಪುರ ಪಟ್ಟಣದಲ್ಲಿ ಕಚೇರಿಯನ್ನು ಆರಂಭಿಸಲಾಗುವುದು ಎಂಬ ಮಾಹಿತಿ ಸಮುದಾಯಕ್ಕೆ ತಿಳಿದುಬಂದಿದ್ದು, ಕಮಲಾಪುರದಲ್ಲಿ ಕಛೇರಿಯನ್ನು ಪ್ರಾರಂಭಿಸುವುದರಿಂದ ಜಿಲ್ಲೆಯ ವ್ಯಾಪ್ತಿಗೆ ಬರುವ ಹರಪನಹಳ್ಳಿ, ಹೂವಿನಹಡಗಲಿ, ಹ.ಬೊಮ್ಮನಹಳ್ಳಿ ಮತ್ತು ಕೂಡ್ಲಿಗಿ ತಾಲೂಕಿನ ಸಮುದಾಯದ ಸಾರ್ವಜನಿಕರಿಗೆ ಕಛೇರಿ ಕೆಲಸಗಳಿಗೆ ಹೋಗಲು ತುಂಬಾ ಅನಾನೂಕೂಲವಾಗುತ್ತದೆ. ಹೊಸಪೇಟೆ ನಗರದಲ್ಲಿಯೇ ಜಿಲ್ಲಾ ಮಟ್ಟದ ಎಲ್ಲಾ ಕಛೇರಿಗಳು ಇರುವುದರಿಂದ ಜಿಲ್ಲಾ ವಕ್ಫ್ ಕಛೆರಿಯು ಸಹ ನಗರದಲ್ಲಿಯೇ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಈ ಸಂಧರ್ಭದಲ್ಲಿ ಅಂಜುಮನ್ ಖಿದ್ಮತೆ ಇಸ್ಲಾಮ್ ಕಮಿಟಿಯ ಉಪಾಧ್ಯಕ್ಷರಾದ ಎಂ.ಫಿರೋಜ್ ಖಾನ್, ಕಾರ್ಯದರ್ಶಿ ಮೊಹಮ್ಮದ ಅಬೂಬಕರ್, ಖಜಾಂಚಿ ಬಿ.ಅನ್ಸರ್ ಭಾಷಾ, ಸಹ ಕಾರ್ಯದರ್ಶಿ ಡಾ. ಮಹಮ್ಮದ ದರ್ವೇಶ್ ಮೊಹಿದ್ದೀನ್, ಆಡಳಿತ ಮಂಡಳಿಯ ಸದಸ್ಯರಾದ ಬಿ. ಸದ್ದಾಂ ಹುಸೇನ ದರ್ವೇಶ್, ಗುಲಾಮ್ ರಸೂಲ್ ಹಾಜರಿದ್ದರು.