You are currently viewing ಸಿರಿಗೆರೆ ಮತ್ತು ಉಜ್ಜಿಯಿನಿ ಪೀಠದ ಭಕ್ತರ ನಡುವೆ ಗಲಾಟೆ ಹಿನ್ನಲೆ 5-6 ಜನರಿಗೆ ಗಾಯ.

ಸಿರಿಗೆರೆ ಮತ್ತು ಉಜ್ಜಿಯಿನಿ ಪೀಠದ ಭಕ್ತರ ನಡುವೆ ಗಲಾಟೆ ಹಿನ್ನಲೆ 5-6 ಜನರಿಗೆ ಗಾಯ.

  • Post category:Uncategorized

ವಿಜಯನಗರ( ಕೊಟ್ಟೂರು)ಸಿರಿಗೆರೆ ಮತ್ತು ಉಜ್ಜಿಯಿನಿ ಪೀಠದ ಭಕ್ತರ ನಡುವೆ ಗಲಾಟೆ ಹಿನ್ನಲೆ 5-6 ಜನರಿಗೆ ಗಾಯವಾದ ಘಟನೆ ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ನಡೆದಿದೆ. ಇಂದಿನಿಂದ ಕೊಟ್ಟೂರು ನಲ್ಲಿ ತರಳಬಾಳು ಹುಣ್ಣಿಮೆ ಕಾರ್ಯಕ್ರಮ ಹಿನ್ನಲೆಯಲ್ಲಿ ಸಿರಿಗೆರೆ ಮಠದ ಭಕ್ತರಿಂದ ಕೊಟ್ಟೂರು ವರೆಗೆ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದರು, ಬೈಕ್ ರ್ಯಾಲಿ ವೇಳೆ ಸಿರಿಗೆರೆ- ಉಜ್ಜಿಯಿನಿ ಭಕ್ತರ ನಡುವೆ ಗಲಾಟೆ ನಡೆದಿದ್ದು ಕಾಳಾಪುರ ಗ್ರಾಮದ 6 ಜನರಿಗೆ ಗಾಯಗಳಾಗಿವೆ, ಅದಲ್ಲದೆ ಕೆಲವು ಬೈಕ್ ಗಳನ್ನು ಕೂಡ ಜಖಂ ಗೊಳಿಸಿ ಕೆಲವು ಮನೆ ಬಾಗಿಲುಗಳನ್ನು ಸಹ ಒಡೆದು ಹಾಕಿದ್ದಾರೆ.

ಗಲಾಟೆ ಬಗ್ಗೆ ವಿಜಯನಗರ ಜಿಲ್ಲಾಧಿಕಾರಿ ಟಿ,ವೆಂಕಟೇಶ್ ಮಾತನಾಡಿದ್ದು,ತರಳಬಾಳು ಹುಣ್ಣಿಮೆ ಮೆರವಣಿಗೆ ವೇಳೆ ಸಣ್ಣ ಗಲಾಟೆ ಆಗಿದೆ,ಈಗ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಗಲಾಟೆ ನಡೆದ ಪ್ರದೇಶದಲ್ಲಿ  ಕಲಂ 144 ಸೆಕ್ಷನ್ ಜಾರಿಮಾಡಲಾಗಿದೆ.

ತರಳಬಾಳು ಹುಣ್ಣಿಮೆ ಮೆರವಣಿಗೆ ಹಿನ್ನೆಲೆ ಉಜ್ಜಯಿನಿ ಭಾಗದಲ್ಲಿ ಬಂದೋಬಸ್ತ್ ಹಾಕಲಾಗಿತ್ತು. ಆದರೆ ಕಾಳಾಪುರ ಗ್ರಾಮದಲ್ಲಿ ಮೆರವಣಿಗೆಯಲ್ಲಿದ್ದವರು ಹಾಗೂ ಕೆಲ ಗ್ರಾಮಸ್ಥರ ನಡುವೆ ಜಗಳವಾಗಿ ಐದಾರು ಜನ ಗಾಯಗೊಂಡಿದ್ದಾರೆ. ಅದಲ್ಲದೆ ನಾಲ್ಕು ಜನ ಪೊಲೀಸರ ಮೇಲೆಯೂ ಹಲ್ಲೆಯಾಗಿದೆ. ಎಸ್ಪಿ ಶ್ರೀಹರಿಬಾಬು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.ಪರಿಸ್ಥಿತಿ ಹತೋಟಿಗೆ ಬಂದಿದೆ. ಸಿರಿಗೆರೆ ತರಳಬಾಳುಪೀಠ ಹಾಗೂ ಉಜ್ಜಯಿನಿ ಪೀಠದ ನಡುವಿನ ವ್ಯಾಜ್ಯದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.