You are currently viewing ಉಸ್ತುವಾರಿ ಬದಲಾವಣೆಗೆ ಕಾರಣ….ಬುಗಿಲೆದ್ದ ಸಿಂಗ್ ಬೆಂಬಲಿಗರ ಆಕ್ರೋಶ.

ಉಸ್ತುವಾರಿ ಬದಲಾವಣೆಗೆ ಕಾರಣ….ಬುಗಿಲೆದ್ದ ಸಿಂಗ್ ಬೆಂಬಲಿಗರ ಆಕ್ರೋಶ.

ವಿಜಯನಗರ..ಸಚಿವ ಆನಂದ್ ಸಿಂಗ್ ಅವರ ಜಿಲ್ಲಾ ಉಸ್ತುವಾರಿ ಬದಲಾವಣೆಮಾಡಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರ ಆಕ್ರೋಶ ಬುಗಿಲೆದ್ದಿದೆ. ಈ ಸಂಭಂದ ಇಂದು ಹೊಸಪೇಟೆ ನಗರದ ಪುನೀತ್ ರಾಜಕುಮಾರ್ ಸರ್ಕಲ್ ನಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಸಿಂಗ್ ಅಭಿಮಾನಿಗಳು ದಿಢೀರ್ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿಯುತಿದ್ದಂತೆ  ಪ್ರತಿಭಟನಾ ಸ್ಥಳಕ್ಕೆ ದಾವಿಸಿದ ಸಚಿವ ಆನಂದ್ ಸಿಂಗ್ ಟೈರ್ ಗೆ ಬೆಂಕಿ ಹಚ್ಚಿದ್ದು ಕಂಡು ಬೆಂಬಲಿಗರ ವಿರುದ್ದ ಹರಿಹಾಯ್ದರು.

ಅಭಿಮಾನಿಗಳು ಅಮಾಯಕರು,ಉಸ್ತುವಾರಿ ಬದಲಾವಣೆ ವಿಚಾರ ನನ್ನ ಗಮನಕ್ಕೆ ಇತ್ತು.
ಸಿಎಂ ಬಸವರಾಜ್ ಬೊಮ್ಮಾಯಿಯವರು ನಮ್ಮ ಬಳಿ ಚರ್ಚೆ ಮಾಡಿ ತೀರ್ಮಾನಮಾಡಿ ಈ ನಿರ್ಧಾರಕ್ಕೆ ಬಂದಿದ್ದಾರೆ, ,ಸಿ.ಎಂ.ನಮ್ಮ ಕ್ಯಾಪ್ಟನ್,ಅವರು ಹೇಳಿದ ಹಾಗೆ ನಾವು ಕೇಳಬೇಕಾಗುತ್ತದೆ,ಬೇರೆಯವರನ್ನ ಮಾಡಿದ ರೀತಿಯಲ್ಲಿ ಏಕಾ- ಏಕಿ ನನ್ನನ್ನ ಬದಲಾವಣೆ ಮಾಡಿಲ್ಲ, ತಾಂತ್ರಿಕ ಸಮಸ್ಯೆಗಳು ಇರ್ತವೆ, ನಮ್ಮ ಕ್ಯಾಪ್ಟನ್ ಹೇಳೋದನ್ನು ಪಾಲನೆ ಮಾಡೋದು ನಮ್ಮ ಧರ್ಮ, ಎಂದು ಅವರ ಬೆಂಬಲಿಗರನ್ನ ನಿಯಂತ್ರಿಸಿಸಿದರು, ನಂತರ ಮಾದ್ಯಮಗಳ ಜೊತೆ ಮಾತನಾಡಿದ ಸಚಿವರು ನಾನು ನಮ್ಮ ಬೆಂಬಲಿಗರಿಗೆ ಪ್ರತಿಭಟನೆ ಮಾಡದಂತೆ ಮನವಿ ಮಾಡಿಕೊಂಡಿದ್ದೇನೆ, ಪ್ರತಿಭಟನೆ ಮಾಡೋದು ಸರಿ ಅಲ್ಲಾ ಅಂತ ಅಭಿಮಾನಿಗಳಿಗೆ ಹೇಳಿದ್ದೇನೆ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದರು.

ಇನ್ನು ವಿಜಯನಗರ ಜಿಲ್ಲೆ ಅಸ್ಥಿತ್ವಕ್ಕೆ ಬಂದ ನಂತರ ಗಣರಾಜ್ಯೂತ್ಸವದ ಮೊದಲ ದ್ವಜಾರೋಹಣ ಆನಂದ್ ಸಿಂಗ್ ಅವರೇ ನೆರವೇರಿಸುತ್ತಾರೆ ಎಂದು ಜಿಲ್ಲೆಯ ಜನಗಳ ಮನದಲ್ಲಿತ್ತು, ಆದರೆ ಏಕಾ ಏಕಿಯಾಗಿ ಉಸ್ತುವಾರಿಯನ್ನ ಬದಲಾಯಿಸಿ ಕೊಪ್ಪಳ ಜಿಲ್ಲೆಗೆ ನಿಯೋಜನೆಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ, ಅದಲ್ಲದೆ ದೂರದ ಶಶಿಕಲಾ ಜೊಲ್ಲೆ ಅವರಿಗೆ ವಿಜಯನಗರ ಜಿಲ್ಲಾ ಉಸ್ತುವಾರಿ ವಹಿಸಲು ಬಲವಾದ ಕಾರಣ ಏನೆಂದು ಜಿಲ್ಲೆಯ ಜನ ಸಾಮಾನ್ಯರ ಮನದಲ್ಲಿ‌ ಪ್ರಶ್ನೆಗಳು ಕಾಡತೊಡಗಿವೆ.

ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.

https://youtu.be/Pn3C8P-Ucy4

ವರದಿ..ಸುಬಾನಿ ಪಿಂಜಾರ.ವಿಜಯನಗರ.