You are currently viewing ಓದೊ ಗಂಗಪ್ಪ ಮನೆ ಮುಂದಿನ ಹಲ್ಲೆ ಪ್ರಕರಣದ ಅಸಲಿಯತ್ತೇನು, ಮೂರು ಜನರ ಬಂದನ.

ಓದೊ ಗಂಗಪ್ಪ ಮನೆ ಮುಂದಿನ ಹಲ್ಲೆ ಪ್ರಕರಣದ ಅಸಲಿಯತ್ತೇನು, ಮೂರು ಜನರ ಬಂದನ.

ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ಮುಖಂಡ ಓದೊಗಂಗಪ್ಪ ಮನೆ ಮುಂದೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಭಂದಿಸಿದಂತೆ ಹೂವಿನಹಡಗಲಿ ಪೊಲೀಸರು ಮೂರು ಜನರನ್ನ ಬಂದಿಸಿದ್ದಾರೆ, ತಾವರೆನಾಯ್ಕ್. ಟಿ.ಎಂ.ರುದ್ರೇಶ, ಮಂಜುನಾಥನಾಯ್ಕ್. ಬಂದಿತ ಮೂರು ಜನ ಆರೋಪಿಗಳು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಲಿಂಗನಾಯಕನ ಹಳ್ಳಿಯವರಾಗಿದ್ದು ಬಂದಿತರನ್ನ ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ

ದಿನಾಂಕ 21/01/2022ರಂದು ರಾತ್ರಿ 9:30ರ ಸುಮಾರಿಗೆ ಬಿಜೆಪಿಯ ಮುಖಂಡ ಓದೊ ಗಂಗಪ್ಪ ಅವರ ಮನೆಗೆ ನುಗ್ಗಿದ ಎಂಟರಿಂದ ಹತ್ತು ಜನ ಓದೊ ಗಂಗಪ್ಪ ಅವರ ಕಾರು ಚಾಲಕ ಗೋಣಿಸ್ವಾಮಿ ಮೇಲೆ ಹಲ್ಲೆಮಾಡಿದ್ದರು, ಘಟನೆಯ ವೀಡಿಯೊ ಓದೊಗಂಗಪ್ಪ ಅವರ ಮನೆಯ ಬಾಗಿಲಲ್ಲಿದ್ದ ಸಿ.ಸಿ.ಟಿ.ವಿ.ಕ್ಯಾಮರದಲ್ಲಿ ಸೆರೆಯಾಗಿತ್ತು. ಘಟನೆಗೆ ಸಂಭಂದಿಸಿದಂತೆ ಕಾರು ಚಾಲಕ ಗೋಣಿಸ್ವಾಮಿ ಹೂವಿನ ಹಡಗಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ದೂರ ದಾಖಲಿಸಿದ್ದರು, ಪ್ರಕರಣಕ್ಕೆ ಸಂಭಂದಿಸಿದಂತೆ ಒಟ್ಟು ಎಂಟು ಜನರ ವಿರುದ್ದ ದೂರು ಪಡೆದಿದ್ದ ಪೊಲೀಸರು, ಇದೀಗ ಮೂರು ಜನರ ಬಂದನಮಾಡಿದ್ದಾರೆ.

ಅದರ ಜೊತೆ ಓದೊಗಂಗಪ್ಪ ಕಾರು ಚಾಲಕ ಗೋಣಿಸ್ವಾಮಿ ವಿರುದ್ದ ಕೂಡ ದೂರು ದಾಖಲಾಗಿದೆ. ತಾವರೆನಾಯ್ಕ್ ಗೋಣಿಸ್ವಾಮಿ ವಿರುದ್ದ ಪ್ರತಿ ದೂರು ದಾಖಲುಮಾಡಿದ್ದಾರೆ. ಇನ್ನು ಘಟನೆಯ ವೀಡಿಯೊ ವೈರಲ್ ಆಗುತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಬಾರಿ ವಿರೋಧಗಳು ವ್ಯಕ್ತವಾಗಿದ್ದವು, ರಾಜಕೀಯ ದುರುದ್ದೇಶದಿಂದ ನನ್ನ ಬೆಂಬಲಿಗನ ಮೇಲೆ ಮಾಜಿ ಶಾಸಕ ಚಂದ್ರನಾಯ್ಕ್ ಮತ್ತು ಅವರ ಇಬ್ಬರು ಮಕ್ಕಳು  ಹಲ್ಲೆಮಾಡಿಸಿದ್ದಾರೆ ಎಂದು ಗಂಗಪ್ಪ ಆರೋಪಮಾಡಿದ್ದರು. ಇನ್ನು ಈ ಘಟನೆಯ ಸತ್ಯಾಸತ್ಯೆತೆಯನ್ನ ಕೆದಕುತ್ತಾ ಹೋದರೆ ಕ್ಷುಲ್ಲಕ ಕಾರಣ ಈ ಬಡಿದಾಟಕ್ಕೆ ಕಾರಣ ಎನ್ನಲಾಗಿದೆ. ಓದೊ ಗಂಗಪ್ಪ ಕಾರು ಚಾಲಕ ಗೋಣಿಸ್ವಾಮಿ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದನ್ನ ಪೊಸ್ಟ್ ಮಾಡಿದ್ದರು, ಇದೇ ವಿಚಾರಕ್ಕೆ ಸಂಭಂದಿಸಿದಂತೆ ಕೆಲವು ಬಿಜೆಪಿ ಕಾರ್ಯಕರ್ತರು ಮತ್ತು ಗೋಣಿಸ್ವಾಮಿ ನಡುವೆ ಮಾತಿನ ಚಕಮಕಿ ನಡೆದಿತ್ತು

ಹೀಗೆ ವಿವಾದದಲ್ಲಿರುವ ಪರ ವಿರೋಧ ವ್ಯಕ್ತಿಗಳಿಬ್ಬರು, ತಾಲೂಕಿನ ಬೇರೆ ಬೇರೆ ಊರಿನ ಕಾರ್ಯಕರ್ತರಲ್ಲ, ಎರಡೂ ಕಡೆ ಆರೋಪಿಗಳು ಲಿಂಗನಾಯಕನಹಳ್ಳಿಯವರು, ತಮ್ಮ ಈ ವೈಯಕ್ತಿಕ ಜಗಳವನ್ನ ರಾಜಕೀಯಕ್ಕೆ ಬಳಕೆಮಾಡಿ ಕೊಂಡು ಚಂದ್ರಾನಾಯ್ಕ್ ಮತ್ತು ಓದೊಗಂಗಪ್ಪ ಅವರನ್ನ ಸುತ್ತುವರೆದುಕೊಂಡಿದ್ದಾರೆ ಎನ್ನುತ್ತಾರೆ ಹಡಗಲಿ ವಿಧಾನಸಭ ಕ್ಷೇತ್ರದ ಜನ. ಇನ್ನು ನಮ್ಮ ರಾಜಕೀಯ ಬೆಳವಣಿಗೆ ಸಹಿಸದ ಚಂದ್ರನಾಯ್ಕ್ ಮತ್ತು ಮಕ್ಕಳು ಈ ರೀತಿ ನಮ್ಮ ಬೆಂಬಲಿಗರ ಮೇಲೆ ಹಲ್ಲೆಮಾಡಿದ್ದಾರೆ ಎಂದು ಓದೊ ಗಂಗಪ್ಪ ಆರೋಪಿಸಿದ್ದರು, ಇದರ ಪ್ರತಿಯಾಗಿ ಹಲ್ಲೆಯ ಆರೋಪ ತಳ್ಳಿಹಾಕಿದ ಮಾಜಿ ಶಾಸಕ ಚಂದ್ರನಾಯ್ಕ್ ಮತ್ತು ಮಕ್ಕಳು ನಮ್ಮ ರಾಜಕೀಯ ಬೆಳವಣಿಗೆ ಸಹಿಸದ ಓದೊಗಂಗಪ್ಪ ನಮ್ಮ ಮೇಲೆ ಸುಳ್ಳು ಆರೋಪಗಳನ್ನ ಮಾಡಿ ನಮ್ಮ ವರ್ಚಸನ್ನ ತಗ್ಗಿಸುವ ಕೆಲಸಮಾಡುತಿದ್ದಾರೆ ಎಂದು ಪರಸ್ಪರ ಆರೋಪಿಸಿದ್ದರು. ಒಂದು ವೇಳೆ ರಾಜಕೀಯ ದ್ವೇಷದಿಂದ ಹಲ್ಲೆ ನಡೆದಿದ್ದೇ ಆದರೆ ಸ್ಥಳದಲ್ಲಿ ಇದ್ದ ಓದೊ ಗಂಗಪ್ಪನ ಮೇಲೆಯೂ ಹಲ್ಲೆಮಾಡಬಹುದಿತ್ತು, ಆದರೆ ಅವರವರ ವೈಯಕ್ತಿಕ ಕಾರಣಗಳಿಂದ ಉಂಟಾಗಿರುವ ಜಗಳ ಈರೀತಿಯ ಹಲ್ಲೆಯ ಮಟ್ಟಕ್ಕೆ ಬಂದು ನಿಂತು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಇದನ್ನೆಲ್ಲ ನೋಡಿದರೆ ಇಲ್ಲಿನ ನಾಯಕರು ಕಾರ್ಯಕರ್ತರನ್ನ ದಾರಿತಪ್ಪಿಸಿದರಾ ಅಥವಾ ಕಾರ್ಯಕರ್ತರೇ ನಾಯಕರನ್ನ ಹಾದಿ ತಪ್ಪಿಸಿದ್ರಾ ಎನ್ನುವ ಅನುಮಾನಗಳು ಇದೀಗ ಹಡಗಲಿ ಜನಸಾಮಾನ್ಯರನ್ನ ಕಾಡುತ್ತಿರುವುದಂತೂ ಸತ್ಯ.

ವರದಿ..ಸುಬಾನಿ ಪಿಂಜಾರ ವಿಜಯನಗರ.