ಹೊಸಪೇಟೆ ( ವಿಜಯನಗರ )ನೀರಿನ ರಭಸಕ್ಕೆ ಮುರಿದು ಹೋಗಿದ್ದ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊನೆಗೂ ಪ್ರತ್ಯಕ್ಷ.
ಹೌದು ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ನೀರಿನ ರಭಸಕ್ಕೆ ಮುರಿದು ಸುಮಾರು ಎಂಟು ದಿನಗಳು ಕಳೆದಿದ್ದವು, ಕಳೆದ 8 ದಿನಗಳಿಂದ ಅಪಾರ ಪ್ರಮಾಣದ ನೀರು ನದಿ ಮೂಲಕ ಹರಿದು ಸಮುದ್ರ ಸೇರಿತ್ತು.
ಇದರಿಂದ ಈ ಭಾಗದ ಜನಸಾಮಾನ್ಯರು ಆತಂಕ ಮನೆ ಮಾಡಿತ್ತು , ಜನಸಾಮಾನ್ಯರಲ್ಲಿ ಮನೆ ಮಾಡಿದ್ದ ಈ ಆತಂಕ ಇದೀಗ ದೂರಾಗಿದೆ. ಕಾರಣ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರಂತರ ಪರಿಶ್ರಮದಿಂದ ಮುರಿದು ಹೋಗಿದ್ದ 19ನೇ ಕ್ರಸ್ಟ್ ಗೇಟ್ಗೆ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿಯಾಗಿದೆ. ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯ ಫಲವಾಗಿ ಮೂರು ಸ್ಟಾಫ್ಲಗ್ ಗೇಟ್ ಗಳನ್ನು ಅಳವಡಿಕೆ ಮಾಡಲಾಗಿದೆ.
ಹಾಗಾಗಿ ಜಲಾಶಯದಿಂದ ಹರಿದು ಹೋಗುತ್ತಿದ್ದ ಬಾರಿ ಪ್ರಮಾಣದ ನೀರನ್ನ ತಡೆಯುವಲ್ಲಿ ತಗ್ನರ ತಂಡ ಯಶಸ್ವಿಯಾಗಿದೆ. ನಿನ್ನೆ ಬೆಳಗಿನಿಂದ ಸಂಜೆವರೆಗೆ ಒಂದು ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಪೂರ್ಣಗೊಂಡಿತ್ತು, ಇಂದು ಬೆಳಗಿನಿಂದ ಮತ್ತೆ ಎರಡು ಸ್ಟಾಫ್ಲಗ್ ಗೇಟ್ ಗಳನ್ನ ಅಳವಡಿಕೆ ಮಾಡಲಾಗಿದ್ದು, ಇನ್ನುಳಿದ ಎರಡು ಸ್ಟಾಫ್ಲಾಗ್ ಗೇಟ್ ಗಳನ್ನ ನಾಳೆ ಅಳವಡಿಕೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಿನಲ್ಲಿ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ತುಂಡಾದ ಪರಿಣಾಮ ಜಲಾಶಯದಲ್ಲಿ ಸಂಗ್ರಹವಾಗಿದ್ದ ಬಾರಿ ಪ್ರಮಾಣದ ನೀರು, ನದಿಗೆ ಹರಿದು ಹೋಗಿತ್ತು. ಜಲಾಶಯದಿಂದ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರನ್ನು ತಡೆಯುವಲ್ಲಿ ಅಧಿಕಾರಿಗಳು ಇಂದು ಯಶಸ್ವಿಯಾಗಿದ್ದಾರೆ. ಇನ್ನುಮುಂದೆ ಜಲಾಶಯಕ್ಕೆ ಹರಿದು ಬರುವ ನೀರನ್ನು ಸಂಗ್ರಹಣೆ ಮಾಡಿಕೊಳ್ಳುವುದೇ ಟಿಬಿ ಬೋರ್ಡ್ ನ ಮುಖ್ಯ ಕಾರ್ಯ ಆಗಿದೆ. ಜಲಾಶಯದ ಎಲ್ಲಾ ಕ್ರಸ್ಟ್ ಗೇಟ್ಗಳನ್ನು ಬಂದು ಮಾಡುತ್ತಿದ್ದಂತೆ ನೀರಿನ ರಬಸಕ್ಕೆ ತುಂಡಾಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದ 19ನೇ ಹಳೆಯ ಕ್ರಸ್ಟ್ ಗೇಟ್ ಇಂದು ಪ್ರತ್ಯಕ್ಷವಾಗಿದೆ.