You are currently viewing ರೈತನ ಮೇಲೆ ಭೀಕರ ದಾಳಿ ನಡೆಸಿದ ಕರಡಿ.ಕರಡಿ ಧಾಮ ಪ್ರಾರಂಬಿಸಿದರೂ ಮಾನವ ಮತ್ತು ಕರಡಿಗಳ ನಡುವಿನ ಸಂಘರ್ಷ ಮಾತ್ರ ತಪ್ಪಲಿಲ್ಲ.

ರೈತನ ಮೇಲೆ ಭೀಕರ ದಾಳಿ ನಡೆಸಿದ ಕರಡಿ.ಕರಡಿ ಧಾಮ ಪ್ರಾರಂಬಿಸಿದರೂ ಮಾನವ ಮತ್ತು ಕರಡಿಗಳ ನಡುವಿನ ಸಂಘರ್ಷ ಮಾತ್ರ ತಪ್ಪಲಿಲ್ಲ.

ವಿಜಯನಗರ…ರೈತನ ಮೇಲೆ ಕರಡಿಗಳು ಭಯಂಕರ ದಾಳಿ ನಡೆಸಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು ಭೀಮಸಮುದ್ರ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ.ದಾಳಿಯ ಪರಿಣಾಮ ರೈತ ಮಾಹಾಂತೇಶನ ಹೊಟ್ಟೆ ಭಾಗಕ್ಕೆ ಮತ್ತು ತಲೆಯ ಭಾಗಕ್ಕೆ ಗಾಯಗಳಾಗಿದ್ದು,ಗಾಯಾಳುವನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ದಾಖಲು ಮಾಡಲಾಗಿದೆ.

ನಿನ್ನೆ ರಾತ್ರಿ ಜಮೀನಿನಲ್ಲಿ ಬೆಳೆದಿದ್ದ ಶೇಂಗಾ ಬೆಳೆಗೆ ನೀ ಹಾಯಿಸಲು ಹೊಗಿದ್ದ ಸಂದರ್ಭದಲ್ಲಿ ರೈತ‌ನ ಮೇಲೆ ಎರಡು ಕರಡಿ ಮತ್ತು ಒಂದು ತಾಯಿ ಕರಡಿ ಏಕಾ ಏಕಿ ದಾಳಿ ನಡೆಸಿವೆ. ದಾಳಿ ನಡೆಸಿದ ಕರಡಿಗಳು ತಲೆ ಮತ್ತು ಹೊಟ್ಟೆಯ ಬಾಗಕ್ಕೆ ಮನಸೋ ಇಚ್ಚೆ ಕಚ್ಚಿ ಪರಚಿವೆ. ಈ ಸಂದರ್ಭದಲ್ಲಿ ರೈತ ಮಹಾಂತೇಶನ ಚೀರಾಟ ಕೂಗಾಟ ಹೆಚ್ಚಾದ ಕೂಡಲೆ ಪಕ್ಕದ ಜಮೀನಿನಲ್ಲಿದ್ದ ನಾಗರಾಜ್ ಎನ್ನುವ ರೈತ ಸ್ಥಳಕ್ಕೆ ಹೋಗಿ ದೃಷ್ವನ್ನ ಕಂಡು ಚೀರಾಟ ಕೂಗಾಟ ನಡೆಸಿ ಕೇಕೆ ಹಾಕಿದ ನಂತರ ಕರಡಿಗಳು ಮಹಾಂತೇಶನನ್ನ ಬಿಟ್ಟು ಅಲ್ಲಿಂದ ಹೋಗಿದೆ.

ಈ ಬಾಗದಲ್ಲಿ ಕರಡಿ ಮತ್ತು ಮಾನವನ ನಡುವಿನ ಸಂಘರ್ಷ ಇದೇ ಮೊದಲೇನಲ್ಲ. ವರ್ಷದಲ್ಲಿ ನಾಲ್ಕರಿಂದ ಐದು ಕರಡಿ ದಾಳಿ ಪ್ರಕರಣಗಳು ಸರ್ವೇ ಸಾಮಾನ್ಯವಾಗಿವೆ. ಇಂತಾ ಕರಡಿಗಳ ನಿಂತ್ರಣ ಮಾಡುವ ಉದ್ದೇಶದಿಂದಲೇ ಗುಡೇಕೋಟೆ ಅರಣ್ಯ ಪ್ರದೇಶದಲ್ಲಿ ಕರಡಿ ಧಾಮ ಪ್ರಾರಂಬಿಸಿದರೂ ಪ್ರಯೋಜನ ಮಾತ್ರ ಕಂಡಿಲ್ಲ. ಇನ್ನು ಈ ಹಿಂದಿನಿಂದಲೂ ಅರಣ್ಯ ಇಲಾಖೆಯ ವಿರುದ್ದ ಹರಿಹಾಯುತ್ತ ಬಂದಿರುವ ಈ ಬಾಗದ ರೈತ ಸಮುದಾಯ ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸುತ್ತಾ ಬಂದಿದ್ದಾರೆ.

ಆದರೆ ಬಕಾಸೂರನ ಹೊಟ್ಟೆಗೆ ಅರೆಕಾಸಿನ ಮಜ್ಹಿಗೆ ಎಂಬಂತೆ ಕರಡಿಯಿಂದ ದಾಳಿಗೆ ಒಳಗಾದ ರೈತರಿಗೆ ನಾಲ್ಕಾರು ಸಾವಿರ ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುತ್ತಿದೆ ಅರಣ್ಯ ಇಲಾಖೆ. ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಜನ ಸಾಮಾನ್ಯರ ಜೀವಕ್ಕೆ ಬೆಲೆ ಎಲ್ಲಿದೆ ಎನ್ನುವುದು ಈ ಬಾಗದ ರೈತರ ಆಕ್ರೋಶವಾಗಿದೆ. ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳು ಈಗಲಾದ್ರು ಎಚ್ಚೆತ್ತು ಕರಡಿ ದಾಳಿಗೆ ಒಳಗಾದ ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.