ವಿಜಯನಗರ.. ಆಸ್ಪತ್ರೆ ಆಗಿರಲಿ ಅಥವಾ ಇನ್ನಾವುದೇ ಕಡೆಗಳಲ್ಲಿ ಕೊವಿಡ್ ಲಸಿಕೆ ಹಾಕುವ ಸ್ಥಳ ಅದಕ್ಕೆ ಮಾತ್ರ ಸೀಮಿತವಾಗಿರುತ್ತೆ. ಕೋವಿಡ್ ಲಸಿಕೆ ಹಾಕುವ ಸ್ಥಳಗಲ್ಲಿ ಇನ್ನಾವುದೇ ಚಿಕಿತ್ಸೆ ಕೊಡುವುದಾಗಲಿ ಅಥವಾ ಆರೈಕೆಮಾಡುವುದಕ್ಕಾಗಲಿ ಅವಕಾಶ ಇಲ್ಲ. ಯಾಕೆಂದರೆ ಆ ಸ್ಥಳಕ್ಕೆ ಬರುವ ಜನಗಳಿಗೆ ಯಾವೆಲ್ಲ ಆರೋಗ್ಯ ಸಮಸ್ಯಗಳಿರುತ್ತವೆಯೋ ಆ ಸೋಂಕುಗಳು ಇನ್ನುಳಿದವರಿಗೆ ತಗುಲದಿರಲಿ ಎಂದು, ಆದರೆ ಈ ಆಸ್ಪತ್ರೆಯಲ್ಲಿ ಮಾತ್ರ ಆ ನಿಯಮಗಳನ್ನ ಪಾಲನೆ ಮಾಡುತ್ತಿಲ್ಲ.
ಹೌದು ವಿಜಯನಗರ ಜಿಲ್ಲೆ ಹೊಸಪೇಟೆ ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಇಂತದ್ದೊಂದು ಅಜಾಗರೂಕತೆಯ ನಡವಳಿಕೆ ಕಂಡು ಬಂದಿದೆ. ಇಲ್ಲಿನ ಮಕ್ಕಳ ಲಸಿಕಾ ಕೊಠಡಿಯಲ್ಲಿಯೇ ಕೊವಿಡ್ ಲಸಿಕೆ ಹಾಕುವುದರ ಜೊತೆಗೆ, ಮಕ್ಕಳಿಗೆ ಬಿ.ಸಿ.ಜಿ ಚುಚ್ಚುಮದ್ದು ನೀಡಿಕೆ ಹಲವು ದಿನಗಳಿಂದ ನಡೆಯುತ್ತಿದೆ.ಇದನ್ನ ಮಕ್ಕಳ ಹೆತ್ತ ತಂದೆ ತಾಯಿಗಳು ಪ್ರಶ್ನೆಮಾಡಿದರೆ ಏನ್ ಮಾಡ್ತಿರಿ ಮಾಡಿಕೊಳ್ಳಿ ಎನ್ನುವ ದುರಹಂಕಾರದ ಮಾತುಗಳನ್ನ ಆಡುತ್ತಾರೆ ಇಲ್ಲಿನ ಸಿಬ್ಬಂದಿಗಳು. ಇನ್ನು ಇವರು ಲಸಿಕೆ ಕೊಡುವ ರೂಂ ದೊಡ್ಡದೇನಿಲ್ಲ, ಕೇವಲ ಹತ್ತು ಅಡಿ ಉದ್ದಗಲದ ಈ ಕೊಠಡಿಯಲ್ಲಿ ಒಂದು ಕಡೆ ಕೊವಿಷಿಲ್ಡ್ ಮತ್ತು ಕೊವ್ಯಾಕ್ಷಿನ್ ಲಸಿಕೆ ಹಾಕಿದರೆ, ಮತ್ತೊಂದು ಟೇಬಲಲ್ಲಿ ನವಜಾತ ಶಿಸುಗಳಿಗೆ ಬಿ.ಸಿ.ಜಿ ಚುಚ್ಚುಮದ್ದು ಹಾಕುತ್ತಿದ್ದಾರೆ.
ಅದು ಕೇವಲ ಐದಡಿ ದೂರದಲ್ಲಿ ಮಾತ್ರ. ಈ ಕೆಲಸ ಆಸ್ಪತ್ರೆ ಹೊರತು ಪಡಿಸಿ ಬೇರೆ ಸ್ಥಳಗಲ್ಲಿ ನಡೆದಿದ್ದರೆ ಅಷ್ಟೊಂದು ಗಮನಕ್ಕೆ ಬರುತ್ತಿರಲಿಲ್ಲ, ಜಿಲ್ಲಾ ಕೇಂದ್ರ ಹೊಸಪೇಟೆಯ ಹೃದಯ ಬಾಗದಲ್ಲಿರುವ ನೂರು ಹಾಸಿಗೆ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಆಸ್ಪತ್ರೆಯಲ್ಲಿ ಸಾಕಷ್ಟು ಕೊಠಡಿಗಳಿದ್ದರು ಅವುಗಳನ್ನ ಬಳಕೆಮಾಡದೆ ತಾವು ಕುಳಿತಲ್ಲೇ ಎಲ್ಲಾ ಕೆಲಸ ಆಗಬೇಕೆನ್ನುವ ಮನಸ್ಥಿತಿ ಇಲ್ಲಿನ ಸಿಬ್ಬಂದಿಗಳದ್ದು, ಹಾಗಾಗಿ ಕೊವಿಡ್ ವ್ಯಾಕ್ಷಿನ್ ಮತ್ತು ಮಕ್ಕಳ ಬಿಸಿಜಿ ಚುಚ್ಚುಮದ್ದು ಹಾಕುವ ಎಲ್ಲಾ ಕೆಲಸವನ್ನ ಒಂದೇ ಕೊಠಡಿಯಲ್ಲಿ ಹಾಕುವ ಮೂಲಕ ಮಕ್ಕಳ ಆರೋಗ್ಯಕ್ಕೆ, ಆರೋಗ್ಯ ಇಲಾಖೆಯ ಸಿಬ್ಬಂದಿಗಳೇ ಮಾರಕವಾಗುತಿದ್ದಾರೆ ಇಲ್ಲಿ.
ಕೊವಿಡ್ ವ್ಯಾಕ್ಷಿನ್ ಹಾಕುವ ಸ್ಥಳ ಬಹುತೇಕ ಕಡೆಗಲ್ಲಿ ಪ್ರತ್ಯೇಕವಾಗಿರುತ್ತೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೇ ರೀತಿಯಾಗಿ ಮಕ್ಕಳಿಗೆ ಚುಚ್ಚುಮದ್ದು ಹಾಕುವ ದಾದಿಯರು ಮತ್ತು ಸ್ಥಳ ಪ್ರತ್ಯೇಕವಾಗಿರಲೇಬೇಕು ಎನ್ನುವುದನ್ನೂ ಕಂಡಿದ್ದೇವೆ, ಯಾಕೆಂದ್ರೆ ಮಕ್ಕಳ ಆರೋಗ್ಯ ತುಂಬಾ ಸೂಕ್ಷ್ಮವಾಗಿರುತ್ತೆ, ಈ ಕಾರಣಕ್ಕೆ ಸ್ವಚ್ಚತೆಯ ಜೊತೆಗೆ ಬೇರೆ ಸೋಂಕು ಮಕ್ಕಳಿಗೆ ತಗುಲದಿರಲಿ ಎಂದು ಪ್ರತ್ಯೇಕ ವಾರ್ಡ್ ಗಳನ್ನ ಮಾಡಿರುವುದನ್ನ ಎಲ್ಲಾ ಆಸ್ಪತ್ರೆಗಳಲ್ಲಿ ಕಾಣುತ್ತೇವೆ, ಅದೇರೀತಿಯಾಗಿ ಈ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಕೂಡ ಇದೆ.ಆದರೆ ಅದು ಸರಿಯಾಗಿ ಬಳಕೆ ಆಗುತ್ತಿಲ್ಲ ಇಲ್ಲಿನ ಸಿಬ್ಬಂದಿಗಳ ನಿರ್ಲಕ್ಷದಿಂದ.ಹಾಗಾಗಿ ಸಂಭಂದ ಪಟ್ಟ ಆಸ್ಪತ್ರೆಯ ವೈಧ್ಯಾದಿಕಾರಿಗಳು ಮತ್ತು ಇಲಾಖೆಯ ಮುಖ್ಯಸ್ಥರು ಈ ವ್ಯವಸ್ಥೆಯ ಬಗ್ಗೆ ಗಮನ ಹರಿಸಿ, ನಿರ್ಲಕ್ಷದ ಈ ಸಿಬ್ಬಂದಿಗಳ ವಿರುದ್ದ ಕ್ರಮ ಜರುಗಿಸಬೇಕಿದೆ. ಇಲ್ಲವಾದರೆ ರೋಗ ಮುಕ್ತಮಾಡಲು ಹಾಕುವ ಚುಚ್ಚುಮದ್ದೇ ಮಕ್ಕಳ ಆರೋಗ್ಯಕ್ಕೆ ಮಾರಕವಾದರೆ ಆಶ್ಚರ್ಯಪಡಬೇಕಾಗಿಲ್ಲ.
ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್. ವಿಜಯನಗರ.