You are currently viewing ಅಕ್ರಮ ಮರಳುಗಾರಿಕೆಗೆ ಒಂದು ಜಿಲ್ಲೆಯಲ್ಲಿ ಕಡಿವಾಣ, ಮತ್ತೊಂದು ಜಿಲ್ಲೆಯಲ್ಲಿ ರಾಜಾರೋಷವಾಗಿ ನಡೆಯುತ್ತೆ, ಏನಿದು ಅನಾಚಾರ.

ಅಕ್ರಮ ಮರಳುಗಾರಿಕೆಗೆ ಒಂದು ಜಿಲ್ಲೆಯಲ್ಲಿ ಕಡಿವಾಣ, ಮತ್ತೊಂದು ಜಿಲ್ಲೆಯಲ್ಲಿ ರಾಜಾರೋಷವಾಗಿ ನಡೆಯುತ್ತೆ, ಏನಿದು ಅನಾಚಾರ.

ವಿಜಯನಗರ… ಹೌದು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಬಳಿಯ ತುಂಗಭದ್ರ ನದಿಯಲ್ಲಿ ನಡೆಯುತಿದ್ದ ಅಕ್ರಮ ಮರಳುಗಾರಿಕೆಯ ಅಡ್ಡೆಯ ಮೇಲೆ ಹಿರೇಹಡಗಲಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಮರಳುಗಾರಿಕೆಗೆ ಬಳಸಿದ್ದ 13 ಕಬ್ಬಿಣದ ತೆಪ್ಪಗಳನ್ನ ಹಿರೇಹಡಗಲಿ ಪೊಲೀಸರು ವಶಕ್ಕೆಪಡೆದಿದ್ದು, ಪೊಲೀಸರು ಸ್ಥಳಕ್ಕೆ ಬೇಟಿ‌ ನೀಡುತಿದ್ದಂತೆ ಅಕ್ರಮ ಮರಳು ದಂದೆ ಕೋರರು ಅಲ್ಲಿಂದ ಪರಾರಿಯಾಗಿದ್ದಾರೆ.

ಇನ್ನು ಈ ಅಕ್ರಮ ಮರಳುಗಾರಿಕೆಯಲ್ಲಿ ವಶಕ್ಕೆ ಪಡೆದಿರುವ ತೆಪ್ಪಗಳೆಲ್ಲ ಹಾವೇರಿಯ ಜಿಲ್ಲೆಯ ಕೆಲವು ಗ್ರಾಮಗಳ ಗ್ರಾಮಸ್ಥರಿಗೆ ಸೇರಿದವು ಎಂದು ಪೊಲೀಸ್ ಮೂಲಗಳು ಹೇಳುತ್ತವೆ.ಹರಪನಹಳ್ಳಿ ಡಿ.ವೈ.ಎಸ್ಪಿ. ಹಾಗೂ ಹೂವಿನ ಹಡಗಲಿ ಸಿ.ಪಿ.ಐ.ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯ ನೇತೃತ್ವವನ್ನ ಹಿರೇಹಡಗಲಿ ಪಿ.ಎಸ್.ಐ. ವಹಿಸಿಕೊಂಡಿದ್ದರು.ಠಾಣೆಯ ಸಿಬ್ಬಂದಿಗಳಾದ ಕಲ್ಲೇಶಗೌಡ. ಸುರೇಶ ಚಂದ್ರಕಾಂತ, ಮಂಜುನಾಥ ಮಜ್ಜಿಗಿ, ಕಾರ್ಯಾಚರಣೆಯ ತಂಡದಲ್ಲಿ ಬಾಗಿಯಾಗಿದ್ದರು,

ದುರಂತ ಎಂದ್ರೆ ನಮ್ಮ ವಿಜಯನಗರ ಜಿಲ್ಲೆಯಲ್ಲಿ ಮರಳುಗಾರಿಕೆ ನೀತಿ ಕಠಿಣವಾಗಿದೆ. ಹೀಗಿದ್ದರೂ ಪೊಲೀಸರ ಕಣ್ಣು ತಪ್ಪಿಸಿ ಅಲ್ಲಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದು ಸರ್ವೇ ಸಾಮಾನ್ಯ, ಆದರೆ ಪಕ್ಕದ ಹಾವೇರಿ ಜಿಲ್ಲೆಯಲ್ಲಿ ಮಾತ್ರ ಹಾಡ ಹಗಲಲ್ಲೇ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತದೆ, ತುಂಗಭದ್ರ ನದಿಯಿಂದ ಎಂಟರಿಂದ ಹತ್ತು ಕಿಲೋಮಿಟರ್ ದೂರದಲ್ಲೇ  ಗುತ್ತಲ, ಹಾಗೂ ರಾಣೆಬೆನ್ನೂರು ಪೊಲೀಸ್ ಠಾಣೆಗಳಿವೆ, ಹೀಗಿದ್ದರೂ ಯಾವೊಬ್ಬ ಮರಳು ದಂದೆ ಕೋರರು ತಮ್ಮ ಅಕ್ರಮ ಮರಳುಗಾರಿಕೆಯನ್ನ ಕೈಬಿಟ್ಟಿಲ್ಲ, ಇತ್ತ ವಿಜಯನಗರ ಜಿಲ್ಲೆಯಲ್ಲಿ ಪೊಲೀಸರು ಯಾವಾಗ ಕಾರ್ಯೋನ್ಮಖರಾಗುತ್ತಾರೊ ಆಗ ಹಾವೇರಿ ಜಿಲ್ಲೆಯ ಪೊಲೀಸರು ಮಲಗಿರುತ್ತಾರೆ.ಹೀಗಿರುವಾಗ ಅಕ್ರಮ ಮರಳುಗಾರರು ಕಳ್ಳಗಂಡಿಯ ಮೂಲಕ ತಮ್ಮ ದಂದೆಯನ್ನ ಮುಂದುವರೆಸುತ್ತಲೇ ಇದ್ದಾರೆ.

ಗುತ್ತಲ, ರಾಣೇಬೆನ್ನೂರು ಮತ್ತು ಹೂವಿನ ಹಡಗಲಿ, ಹಿರೇಹಡಗಲಿ ಪೊಲೀಸರೆಲ್ಲ ಒಂದಾಗಿ ಏಕ ಕಾಲಕ್ಕೆ ದಾಳಿ ಮಾಡಿದರೆ, ಅಕ್ರಮ ಮರಳುಗಾರರು ಹೇಳ ಹೆಸರಿಲ್ಲದಂತಾಗುತ್ತಾರೆ. ಆದರೆ ಈ ಕೆಲಸವನ್ನ ಎರಡು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಒಟ್ಟಾಗಿ ಕಾರ್ಯಾಚರಣೆಮಾಡಬೇಕಿದೆ. ಅಂದಾಗ ಮಾತ್ರ ಅಕ್ರಮಕ್ಕೆ ಕಡಿವಾಣ ಹಾಕಲು ಸಾಧ್ಯ. ಒಂದು ಬಾಗಿಲು ಮುಚ್ಚಿ ಮತ್ತೊಂದು ಬಾಗಿಲು ತೆರೆದು, ಅಕ್ರಮಕ್ಕೆ ಅಡಿವಾಣ ಹಾಕುತ್ತೇವೆ ಎಂದ್ರೆ ಅದು ಸಾಧ್ಯವೇ ಇಲ್ಲ. ಹಾವೇರಿ ಮತ್ತು ವಿಜಯನಗರ ಜಿಲ್ಲೆಯ ಪೊಲೀಸರು ಒಟ್ಟಾಗಿ ಅಚ್ಚುಕಟ್ಟಾಗಿ ಕೆಲಸಮಾಡಿದ್ದೇ ಆದ್ರೆ, ಈ ಬಾಗದಿಂದ ಒಂದು ಹಿಡಿಯಷ್ಟು  ಮರಳನ್ನ ಕೂಡ ಇಲ್ಲಿಂದ ಅಕ್ರಮವಾಗಿ ಸಾಗಿಸಲು ಸಾಧ್ಯವಿಲ್ಲ.

ವರದಿ.ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.