ಕೂಡ್ಲಿಗಿ ಪಟ್ಣದಲ್ಲಿರುವ ಡಾ ಬಿ.ಆರ್.ಅಂಬೇಡ್ಕರ್ ಬಾಲಕರ ಹಾಗೂ ಬಾಲಕೀಯರ ವಸತಿ ಶಾಲೆಗೆ ಇಂದು ಬೇಟಿನೀಡಿದ ನ್ಯಾಯಾದೀಶರು ಅಲ್ಲಿನ ಅವ್ಯೆವಸ್ಥೆಯ ಕಂಡು ಗರಂ ಆಗಿದ್ದಾರೆ.ನಿಮ್ಮ ಮಕ್ಕಳನ್ನ ಆದರೆ ಇಂತಾ ಸ್ಥಿತಿಯಲ್ಲಿ ಬಿಡುವಿರಾ. ನಿಮ್ಮ ಮನೆಯನ್ನ ಹೀಗೆ ನೋಡಿಕೊಳ್ಳುತ್ತೀರಾ ಎಂದು ಹಾಸ್ಟೆಲ್ ವಾರ್ಡನರನ್ನ ಹಾಗೂ ಮೇಲ್ವಿಚಾರಕರನ್ನ ನ್ಯಾಯಾದೀಶರು ತರಾಟೆ ತೆಗೆದುಕೊಂಡಿದ್ದಾರೆ.
ಹೌದು ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಬಳ್ಳಾರಿ ರಸ್ತೆಯ ತೋಟವೊಂದಲ್ಲಿರುವ,ಡಾ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ದಿಡೀರ್ ಬೇಟಿ ನೀಡಿದ ನ್ಯಾಯಾದೀಶರು ಅಲ್ಲಿನ ಅವ್ಯೆವಸ್ಥೆಯ ವಿರುದ್ದ ಬೇಸರ ವ್ಯಕ್ತಪಡಿಸಿದ್ದಾರೆ. ಕೂಡ್ಲಿಗಿಯ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಕೆ.ಎ.ನಾಗೇಶ್ ಹಾಗೂ ಕಿರಿಯ ಶ್ರೇಣಿ ನ್ಯಾಯಾಧೀಶರಾದ ಮುರುಗೇಂದ್ರ ತುಬಾಕೆ ಅವರು ಅಲ್ಲಿನ ಪರಿಸ್ಥಿತಿ ಕಂಡು ಸಿಬ್ಬಂದಿಗಳನ್ನ ತರಾಟೆಗೆ ತೆಗೆದು ಎಚ್ಚರಿಕೆ ನೀಡಿದ್ದಾರೆ.
ಇಂದು ಮದ್ಯಾಹ್ನ ವಿದ್ಯಾರ್ಥಿನಿಯರು ಹಾಗೂ ವಿಧ್ಯಾರ್ಥಿಗಳ ಹಾಸ್ಟೆಲ್ ಗೆ ಏಕಾಏಕಿ ಬೇಟಿ ನೀಡಿದ ಈ ಇಬ್ಬರು ನ್ಯಾಯಾದೀಶರು ಬಾಲಕರ ಹಾಗೂ ಬಾಲಕೀಯರ ವಸತಿ ಶಾಲೆಗಳಲ್ಲಿ ಎದುರಾದ ದುರ್ವಾಸನೆ ಹಾಗೂ ಶಾಲೆಯ ಆವರಣದ ಸುತ್ತ ಬೆಳೆದ ಮುಳ್ಳು ಕಂಟಿಗಳು, ಸೌಚಾಲಯಕ್ಕೆ ಬಹಿರ್ದೆಸೆಗೆ ತೆರಳುವ ವಿಧ್ಯಾರ್ಥಿಗಳ ಪಾಡು,ವಿಷ ಜಂತುಗಳ ಭೀತಿಯಲ್ಲಿ ವಿಧ್ಯಾರ್ಥಿಗಳು ಬದುಕುವ ರೀತಿ, ಇದನ್ನೆಲ್ಲ ಕಂಡೂ ಕಾಣದಂತೆ ನಿರ್ಲಕ್ಷ್ಯ ಧೊರಣೆಯ ಹಾಸ್ಟೆಲ್ ಮೇಲ್ವಿಚಾರಕರನ್ನ ಮತ್ತು ವಾರ್ಡನ್ ಗಳನ್ನ ನ್ಯಾಯಾದೀಶರು ತರಾಟೆಗೆ ತೆಗೆದುಕೊಂಡರು.ನಿಮಗೆ ಎಷ್ಟೇ ಪ್ರಭಾವಿ ರಾಜಕಾರಣಿಗಳ ಬೆಂಬಲವಿರಲಿ, ಮೊದಲು ಸರಿಯಾಗಿ ಕೆಲಸಮಾಡಿ, ಇಲ್ಲವಾದರೆ ನಿಮ್ಮ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕಡಕ್ಕಾಗಿ ಎಚ್ಚರಿಕೆಯನ್ನ ನೀಡಿ ಗಡುವು ನೀಡಿದ್ದಾರೆ.
ಈ ಸುದ್ದಿಯ ವೀಡಿಯೊ ವೀಕ್ಷಣೆಗೆ ಈ ಕೆಳಗಿನ ಲಿಂಕ್ ಒತ್ತಿರಿ.
ವರದಿ..ಸುಬಾನಿ ಪಿಂಜಾರ ವಿಜಯನಗರ.