You are currently viewing ಕಳೆದ ಹನ್ನೆರಡು ವರ್ಷಗಳಿಂದ ನಡೆಯುತ್ತಿದೆ 24×7 ಭಜನೆ.

ಕಳೆದ ಹನ್ನೆರಡು ವರ್ಷಗಳಿಂದ ನಡೆಯುತ್ತಿದೆ 24×7 ಭಜನೆ.

  • Post category:Top news

ಈಗಿನ ವಿಶ್ವ ವಿಖ್ಯಾತ ಹಂಪಿ ಈ ಮೊದಲು ವಿಜಯನಗರ ಸಾಮ್ರಾಜ್ಯವಾಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಆದ್ರೆ ಅದಕ್ಕಿಂತ ಪೂರ್ವದಲ್ಲಿ ಈ ಸ್ಥಳಕ್ಕೆ ಕಿಸ್ಕಿಂದ ಎನ್ನುವ ಹೆಸರಿತ್ತು, ಶ್ರೀ ರಾಮನು ಈ ಸ್ಥಳದಲ್ಲಿ ತಪ್ಪಸ್ಸನ್ನ ಆಚರಿಸಿದ್ದ ಎಂದು ರಾಮಾಯಣದಲ್ಲಿ ಉಲ್ಲೇಖವಿದೆ, ಆ ಸ್ಥಳ ಇಂದು ಮಾಲ್ಯವಂತ ಪರ್ವತ ಎಂಭ ಹೆಸರಿನಿಂದ ಪ್ರಖ್ಯಾತಿ ಪಡೆದಿದೆ, ಇಂತಾ ಪವಿತ್ರ ಸ್ಥಳದಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಶ್ರೀರಾಮನ ಹೆಸರಿನಲ್ಲಿ  ನಿರಂತರ ಭಜನೆ ನಡೆಯುತ್ತಿದೆ,

ಇಂತದ್ದೊಂದು ಅಖಂಡ ಬಜನೆ ನಡೆಯುತ್ತಿರುವುದು ವಿಜಯನಗರ ಜಿಲ್ಲೆಯ ವಿಶ್ವ ವಿಖ್ಯಾತ ಹಂಪಿಯ ಬೆಟ್ಟದ ಮೇಲಿರುವ ಮಾಲ್ಯವಂತ ದೇವಸ್ಥಾನದಲ್ಲಿ, ಗುಜರಾತ್ ಮೂಲದಿಂದ ಬಂದಂತ ಹತ್ತಕ್ಕೂ ಹೆಚ್ಚು ಶ್ರೀರಾಮನ ಭಕ್ತರು ಕಳೆದ ಹನ್ನೆರಡು ವರ್ಷಗಳಿಂದ ಹಗಲು ರಾತ್ರಿ ಎನ್ನದೆ ನಿರಂತರವಾಗಿ ಭಜನೆಮಾಡುತ್ತಾ ಶ್ರೀರಾಮನ ಧ್ಯಾನವನ್ನ ಮಾಡುತ್ತಾ ಕಾಲಕಳೆಯುತ್ತಿದ್ದಾರೆ, ಅಂದಹಾಗೆ ಈ ಅಖಂಡ ಭಜನಾ ಕಾರ್ಯಕ್ರಮವನ್ನ ಹಮ್ಮಿಕೊಂಡಿರುವುದು ಯಾವುದೋ ಸ್ವಹಿತಾಸಕ್ತಿಗಲ್ಲ, ಬದಲಾಗಿ ಲೋಕ ಕಲ್ಯಾಣಾರ್ಥಕ್ಕೆ.

ಇನ್ನು ಪುರಾಣಗಳ ಕಾಲದಿಂದಲೂ ಪ್ರಖ್ಯಾತಿ ಪಡೆದಿರುವ ಈ ಮಾಲ್ಯವಂತ ಅರ್ವತದಲ್ಲಿ ಕೆಲವು ವಿಷೇಶತೆಗಳಿವೆ, ಷ್ಪಟಿಕ ಏಕ ಶಿಲೆಯಲ್ಲಿ ಶ್ರೀರಾಮನ ಲಕ್ಷ್ಮಣ ಹಾಗೂ ಸೀತಾ ದೇವಿಯರ ಮೂರ್ತಿ ನಿರ್ಮಾಣವಾಗಿದೆ, ಭಾರತದಲ್ಲಿ ಇಂತಾ ಶಿಲೆ ಮತ್ತೆಲ್ಲೂ ಕಾಣ ಸಿಗುವುದಿಲ್ಲ ಎನ್ನುವ ಮಾತಿದೆ, ಅಲ್ಲದೆ ಇಲ್ಲಿ ನಿರ್ಮಾಣವಾಗಿರುವ ದೇವಸ್ಥಾನದಲ್ಲಿ ರಾಮಾಯಣದ ಇತಿಹಾಸ ಸಾರುವಂತ ಅದೆಷ್ಟೋ ಶಿಲ್ಪಗಳನ್ನ ಕೆತ್ತನೆಮಾಡಲಾಗಿದೆ.ಹಾಗಾಗಿ ರಾಮಾಯಣದಲ್ಲಿ ಬರುವಂತ ಪ್ರಮುಖ ದ್ಯಾನ ಮಂದಿರವಾಗಿ ಈ ಮಾಲ್ಯವಂತ ಪರ್ವತ ಇತ್ತೀಚೆಗೆ ಹೊರ ಹೊಮ್ಮುತ್ತಿದೆ.

ಇನ್ನು ಈ ಸ್ಥಳದ ವಿಷೇಶತೆಯನ್ನ ಅರ್ಥಮಾಡಿಕೊಂಡ ಕೆಲವು ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಹೊರ ರಾಜ್ಯದ ಭಕ್ತ ಸಮೂಹ ಇಲ್ಲಿ ನಡೆಯುವ ಭಜನಾ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿರುವುದರ ಜೊತೆಗೆ ಈ ಸ್ಥಳಕ್ಕೆ ಬಂದು ಶ್ರೀರಾಮನ ಧ್ಯಾನಮಾಡಿ ಮರಳುವುದು ಸರ್ವೇ ಸಾಮಾನ್ಯವಾಗಿದೆ. ಇನ್ನು ತಮ್ಮ ಜೀವನದಲ್ಲಿ ಈ ಸ್ಥಳಕ್ಕೆ ಒಮ್ಮೆ ಬೇಟಿಕೊಟ್ಟು ಶ್ರೀರಾಮನ ಧ್ಯಾನಮಾಡಿ ಮರಳಿದ್ರೆ ಮುಕ್ತಿ ಸಿಗುತ್ತೆ ಎನ್ನುವ ನಂಬಿಕೆ ಇದೆ.

ಕಳೆದ ಅದೆಷ್ಟೋ ವರ್ಷಗಳಿಂದ ಈಗಿನ ವಿಶ್ವ ವಿಖ್ಯಾತ ಹಂಪಿ ಹಾಳು ಹಂಪೆಯಾಗಿತ್ತು, ಆದ್ರೆ ಇತ್ತೀಚಿಗೆ ವಿದೇಶಗಳಿಂದ ಪ್ರವಾಸಿಗರು ಮಾತ್ರ ಅಲ್ಲ, ನಮ್ಮ ದೇಶದ ಮೂಲೆ ಮೂಲೆಯಿಂದ ಭಕ್ತರು ಈ ಪವಿತ್ರ ಸ್ಥಳಕ್ಕೆ ಹರಿದು ಬರುತ್ತಿದ್ದು ನಮ್ಮ ದೇಶದ ಧಾರ್ಮಿಕ ಸ್ಥಳಗಳಲ್ಲಿ ಹಂಪಿ ಕೂಡ ಒಂದು ಪ್ರಮುಖ ಸ್ಥಳವಾಗಿ ಮರು ಹುಟ್ಟುಪಡೆಯುತ್ತಿದೆ.

ವರದಿ…ಸುಬಾನಿ ಪಿಂಜಾರ ವಿಜಯನಗರ.