You are currently viewing ಇಲ್ಲೊಂದು ಝರಿ ಇದೆ, ಇದು ಮಳೆಗಾಲ ಹೋದ್ರು ಸರಿ ಬರಗಾಲ ಬಂದ್ರು ಸರಿ, ಸದಾ ಜಿನುಗುತಲೇ ಇರುತ್ತೆ.

ಇಲ್ಲೊಂದು ಝರಿ ಇದೆ, ಇದು ಮಳೆಗಾಲ ಹೋದ್ರು ಸರಿ ಬರಗಾಲ ಬಂದ್ರು ಸರಿ, ಸದಾ ಜಿನುಗುತಲೇ ಇರುತ್ತೆ.

ವಿಜಯನಗರ….ಒಂದು ವರ್ಷ ಮಳೆ ಹೋದ್ರೆ ಸಾಕು ಕೆರೆ, ಬಾವಿ, ನದಿ, ಹಳ್ಳಕೊಳ್ಳಗಳು ಬತ್ತಿ ಹೋಗಿ ಜೀವ ಜಲಕ್ಕೆ ಜನ ಜಾನುವಾರುಗಳು ಬಾಯಿ ಬಾಯಿ ಬಿಡುವಂತ ಪರಿಸ್ಥಿತಿ ನಿರ್ಮಾಣವಾಗಿಬಿಡುತ್ತೆ, ಆದ್ರೆ ಇಲ್ಲೊಂದು ಝರಿ ಇದೆ, ಇದು ಮಳೆಗಾಲ ಹೋದ್ರು ಸರಿ ಬರಗಾಲ ಬಂದ್ರು ಸರಿ, ಸದಾ ಜಿನುಗುತಲೇ ಇರುತ್ತೆ, ಹೀಗೆ ಝರಿಯಿಂದ ಬಂದ ಈ ಜೀವಜಲ ಮನುಷ್ಯನ ಹತ್ತು ಹಲವು ಕಾಯಿಲೆಗೆ ರಾಮ ಬಾಣವಂತೆ,ಹೌದು ಇಂತದ್ದೊಂದು ವಿಷೇಶವಾದ ಝರಿ ಎಲ್ಲಿದೆ ಅಂತೀರ ಈ ಸ್ಟೋರಿಯನ್ನ ನೀವೆ ನೋಡಿ.

ಹೌದು ಹೀಗೆ ಬಾವಿಯೊಂದರಿಂದ ಸೇದಿ ಬಂದಂತ ಭಕ್ತರಿಗೆ ಕೊಡುವ ಈ ಜೀವಾಮ್ರತವೇ ವಿಜಯನಗರ ಜಿಲ್ಲೆಯಲ್ಲಿ ಎಲ್ಲಾ ಕಾಲಕ್ಕೂ ಸಿಗುವ ಜೀವ ಜಲ, ಅಂದಹಾಗೆ ವಿಜಯನಗರ ಜಿಲ್ಲೆ ಹೊಸಪೇಟೆ ನಗರದ ನಾಲ್ಕಾರು ಕಿಲೋಮಿಟರ್ ದೂರದಲ್ಲಿರುವ ಇತಿಹಾಸ ಪ್ರಸಿದ್ದ ಶ್ರೀಜಂಭುನಾಥೇಶ್ವರ ದೇವಸ್ಥಾನದ ಮುಂಬಾಗದಲ್ಲಿರುವ ಈ ಝರಿಯೇ ಮಳೆಗಾಲ ಛಳಿಗಾಲದಲ್ಲಿ ಮಾತ್ರವಲ್ಲ ಎಂತಾ ಬರ ಆವರಿಸಿದ್ರೂ ಈ ನೀರು ಹೀಗೆ ಸದಾ ಜಿನುಗುತ್ತಿರುತ್ತೆ.ಇನ್ನು ಹೀಗೆ ಜಿನುಗುವ ಈ ನೀರು ಮುಂದೆ ಇರುವ ಬಾವಿಯೊಂದರಲ್ಲಿ ಶೇಖರಣೆಯಾಗಿ ಬಂದಂತ ಭಕ್ತರು ಈ ನೀರಿನಲ್ಲಿ ಸ್ನಾನ ಮಾಡುವ ಮುಖಾಂತ್ರ ಇಲ್ಲಿನ ಜಂಬುನಾಥೇಶ್ವರನಿಗೆ ಪೂಜೆ ಸಲ್ಲಿಸಿದ್ರೆ ತಮ್ಮ ಚರ್ಮರೋಗ ಸೇರಿದಂತೆ ಇತರೆ ಎಲ್ಲಾ ಕಾಯಿಲೆಗಳು ವಾಸಿಯಾಗಿ ರೋಗದಿಂದ ಗುಣ ಮುಖರಾಗುತ್ತಾರೆ ಎನ್ನುವ ನಂಬಿಕೆ ಇಲ್ಲಿಗೆ ಬರುವ ಭಕ್ತರಿಗಿದೆ,

ಇನ್ನು ಹೀಗೆ ಬೆಟ್ಟ ಗುಡ್ಡಗಳ ಮದ್ಯೆ ಇರುವ ಈ ಜಂಬುನಾಥೇಶ್ವರ ದೇವಸ್ಥಾನ ವಿಜಯನಗರ ಕಾಲಕ್ಕಿಂತಲೂ ಪೂರ್ವದಲ್ಲಿ ನಿರ್ಮಾಣಗೊಂಡಿದ್ದು, ಹಾಗಾಗಿ ತನ್ನದೇ ಆದ ಇತಿಹಾಸವನ್ನ ಕೂಡ ಹೊಂದಿದೆ, ಅಂದಿನಿಂದ ಇಂದಿನ ವರೆಗೆ ದೇವಸ್ಥಾನದ ಮುಂಬಾಗದಲ್ಲಿನ ಈ ಝರಿ ಮತ್ತು ಬಾವಿಯಲ್ಲಿನ ನೀರು ಮಾತ್ರ ಬತ್ತಿರುವ ಉದಾಹರಣೆಗಳಿಲ್ಲ, ಇನ್ನು ಈ ನೀರಿನ ಮೂಲ ಹುಡುಕ್ಕುತ್ತಾ ಹೋದ್ರು ಕೈಗೆ ಸಿಗುವುದಿರಲಿ ಕಣ್ಣಿಗೂ ಸಹ ಕಾಣುವುದಿಲ್ಲ, ಬೆಟ್ಟದಲ್ಲಿರುವ ಝರಿಯ ಸುತ್ತ ಮುತ್ತಲಿನ ಗುಡ್ಡ ಪ್ರದೇಶದಲ್ಲಿರುವ ಗಿಡ ಮರಗಳು ಎಲ್ಲವೂ ಬಿಸಿಲಿನ ತಾಪಕ್ಕೆ ಬರಡಾಗಿರುವುದು ಕಣ್ಣಿಗೆ ಕಾಣುತ್ತೆ, ಆದ್ರೆ ಕೆಳಗಡೆ ಇರುವ ಈ ಝರಿಯಲ್ಲಿ ಮಾತ್ರ ನೀರು ಸದಾ ಹೀಗೆ ಜಿನುಗುತ್ತಿರುತ್ತೆ. ಇನ್ನು ಈ ಬಾವಿ ಮತ್ತು ಝರಿಯಲ್ಲಿನ ನೀರಿನ ಸ್ನಾನ ಮತ್ತು ಪಾನ ಮಾಡಲು ದೂರದಿಂದ ಭಕ್ತರು ಇಲ್ಲಿಗೆ ಬರುವುದು ನಿರಂತರವಾಗಿ ಇಂದಿಗೂ ನಡೆಯುತ್ತಿದೆ, ಹಾಗಾಗಿ ಈ ಝರಿ ಮತ್ತು ಬಾಯಿಗೆ ತುಂಬಾನೆ ಮಹತ್ವ ವಿದೆ ಎನ್ನುತ್ತಾರೆ ಇಲ್ಲಿಗೆ ಬರುವ ಭಕ್ತರು.

ಇನ್ನು ಹೇಳಿಕೇಳಿ ಗಣಿಗಾರಿಕೆ ನಡೆಯುವ ಪ್ರದೇಶ ಇದಾಗಿರುವುದರಿಂದ ಈ ಹಿಂದೆ ಪಕ್ಕದಲ್ಲೇ ಬಾರಿ ಗಣಿಗಾರಿಕೆ ನಡೆದು ದೇವಸ್ಥಾನಕ್ಕೆ ಆಪತ್ತು ಕೂಡ ಎದುರಾಗಿತ್ತು, ಆ ಸಂದರ್ಭದಲ್ಲಿ ಈ ಬಾವಿ ಮತ್ತು ಝರಿಯಲ್ಲಿನ ನೀರಿನ ಪ್ರಮಾಣ ಕೂಡ ಕಡಿಮೆಯಾಗಿತ್ತು, ಆದ್ರೆ ಇತ್ತೀಚೆಗೆ ಅಕ್ರಮ ಗಣಿಗಾರಿಕೆಗೆ ಕಡಿವಾಣ ಬಿದ್ದಾಗಿನಿಂದ ಈ ಬಾಗದಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿದೆ, ಹಾಗಾಗಿ ಕಳೆದ ನಾಲ್ಕು ವರ್ಷಗಳಿಂದ ಮತ್ತೆ ಈ ಝರಿಯಲ್ಲಿ ನೀರು ಜಿನುಗುವುದಕ್ಕೆ ಪ್ರಾರಂಭವಾಗಿದೆ, ಒಟ್ಟಿನಲ್ಲಿ ಎಲ್ಲಾ ಜಲ ಮೂಲಗಳು ಬತ್ತಿ ಹೋದ್ರು ಈ ಝರಿ ಬತ್ತದೆ ಸದಾ ಹೀಗೆ ಜಿನುಗುವುದನ್ನ ನೋಡಿದ್ರೆ ಆಶ್ಚರ್ಯ ಉಂಟಾಗುವುದು ಮಾತ್ರ ಸತ್ಯ, ಆದ್ರೆ ಭಕ್ತರು ಹೇಳುವುದು ಮಾತ್ರ ಇಲ್ಲಿರುವ ಆರಾದ್ಯೆ ದೈವ ಜಂಬುನಾಥೇಶ್ವರನ ಕ್ರಪೆ ಎಂದು.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.