You are currently viewing ಆಂಧ್ರಪ್ರದೇಶದಲ್ಲಿ ನಡೆದ ಭಾರ ಎತ್ತುವ ಸ್ಪರ್ಧೆಯಲ್ಲಿ  ವಿಜಯನಗರ ಕಲಿಗಳ ಅಬ್ಬರ.

ಆಂಧ್ರಪ್ರದೇಶದಲ್ಲಿ ನಡೆದ ಭಾರ ಎತ್ತುವ ಸ್ಪರ್ಧೆಯಲ್ಲಿ ವಿಜಯನಗರ ಕಲಿಗಳ ಅಬ್ಬರ.

  • Post category:Uncategorized

ವಿಜಯನಗರ ( ಹೊಸಪೇಟೆ )ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಿಜಯನಗರದ ಸ್ಪರ್ಧಾಳುಗಳ ಅಬ್ಬರ. ಹೌದು ಆಂಧ್ರಪ್ರದೇಶದ ವಿಶಾಖಪಟ್ಟಣದ ಅಂದ್ರ ಕೇಸರಿ ಭವನದಲ್ಲಿ ನ್ಯಾಷನಲ್ ಪವರ್ ಲಿಫ್ಟರ್ಸ್ ಫೆಡರೇಷನ್ (ರಾ)ವತಿಯಿಂದ ನಡೆದ  ನಡೆದ ರಾಷ್ಟ್ರಮಟ್ಟದ  ಫುಲ್ ಪವರ್ ಲಿಫ್ಟಿಂಗ್, ಬೆಂಚ್ ಪ್ರೆಸ್ ಹಾಗೂ ಡೆಡ್ಲಿಫ್ಟ್ ಸ್ಪರ್ಧೆಗಳಲ್ಲಿ ಕರ್ನಾಟಕದ ವಿಜಯನಗರ ಜಿಲ್ಲೆಯ ಹುರಿಯಾಳುಗಳು ಅಬ್ಬರಿಸಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳು ಜಿಲ್ಲೆಗೆ ಒಟ್ಟು 04-ಚಿನ್ನ, 04-ಬೆಳ್ಳಿ ಹಾಗೂ 05-ಕಂಚಿನ ಪದಕಗಳನ್ನು ಪಡೆವ ಮೂಲಕ 2023ರ ಹೊಸ ವರ್ಷದ  ವಿಜಯ ಪತಾಕೆಯನ್ನು ಹಾರಿಸಿದ್ದಾರೆ. ಸದರಿ ಸ್ಪರ್ದೆಯಲ್ಲಿ ಕರ್ನಾಟಕದಿಂದ ಪ್ರಭಾಕರ್ ಪಿ. ಕೋಚ್ ನೇತೃತ್ವದಲ್ಲಿ ಸಬ್-ಜೂನಿಯರ್ ವಿಭಾಗದಲ್ಲಿ ಮೊಹಮ್ಮದ್ ಏಜಾಜ್ ಪ್ರಥಮ ಸ್ಥಾನ, ರಾಜಭಕ್ಷಿ ತೃತಿಯ ಸ್ಥಾನ, ಜೂನಿಯರ್ ವಿಭಾಗದಲ್ಲಿ ಸಮೀರ್ ದ್ವಿತೀಯ ಸ್ಥಾನ, ಸೀನಿಯರ್ ವಿಭಾಗದಲ್ಲಿ ಸುನೀಲ್ ಜಡಿ ಪ್ರಥಮ ಸ್ಥಾನ, ಸುಲೇಮಾನ್ ಖಾನ್ ದ್ವಿತೀಯ ಸ್ಥಾನ, ಮಹಿಳೆಯರ ಸೀನಿಯರ್ ವಿಭಾಗದಲ್ಲಿ ಮುಕ್ತಾ ಬಿ. ದ್ವಿತಿಯ ಸ್ಥಾನ, ಮಾಸ್ಟರ್ ವಿಭಾಗದಲ್ಲಿ ಹುಲಿಗೇಶ್ ಪ್ರಥಮ ಸ್ಥಾನ, ತಿಪ್ಪಯ್ಯ ಜಿ. ಮತ್ತು ರಾಜೇಶ್ ಜಿ ಸುತ್ರಾವೆ  ದ್ವಿತೀಯ ಸ್ಥಾನ ಹಾಗೂ ಸುರೇಂದ್ರ ಬಸುಪಟ್ಟದ ಮತ್ತು ಜಿ.ರವಿಕುಮಾರ್ ತೃತೀಯ ಸ್ಥಾನ ಪಡೆದಿದ್ದು, ಜಯಗಳಿಸಿದ್ದಾರೆ.

ಎಲ್ಲ ಕ್ರೀಡಾಪಟುಗಳಿಗೆ,  ಶ್ರೀಮತಿ ಲಕ್ಷ್ಮೀ ದಯಾನಂದ, ಹೊನ್ನೂರ್ ಸಾಬ್, ಲಕ್ಷ್ಮಿ ನಾರಾಯಣ, ರಾಮು ಕಿಚಿಡಿ, ಉಮೇಶ್ ಎಂ.ಟಿ, ಪುನೀತ್, ಡಾ. ವೀರೇಶ್ ಬಡಿಗೇರ್, ಡಾ.ಚಂದ್ರಶೇಖರ ಕಾಳನ್ನವರ, ಅರುಣ್ ಸುಲಾಕೆ, ಶಕ್ತಿ ಹೆಲ್ತ್ ಲೈನ್ ಜಿಮ್, ಪ್ಲಾನೆಟ್ ಜಿಮ್, ದಯಾನಂದ ಸ್ಪೋರ್ಟ್ಸ್ ಪೌಂಡೇಶನ್ ಹಾಗೂ ರಾಯಲ್ ಫಿಟ್ನೆಸ್ ಜಿಮ್ ಮಾಲೀಕರು ಹಾಗೂ ವಿದ್ಯಾರ್ಥಿಗಳು ವಿಜಯನಗರ ಜಿಲ್ಲೆಯ ಎಲ್ಲಾ ಕ್ರೀಡಾಸಕ್ತರು ಅಭಿನಂದನೆ ಸಲ್ಲಿಸಿದ್ದಾರೆ.