You are currently viewing ಬ್ಯಾನರ್ ಹಾಕುವ ವಿಚಾರದಲ್ಲಿ ಕೈ ಕಾರ್ಯಕರ್ತರ ಫೈಟ್.

ಬ್ಯಾನರ್ ಹಾಕುವ ವಿಚಾರದಲ್ಲಿ ಕೈ ಕಾರ್ಯಕರ್ತರ ಫೈಟ್.

  • Post category:Uncategorized

ವಿಜಯನಗರ ( ಹೊಸಪೇಟೆ ) ಬ್ಯಾನರ್ ಹಾಕುವ ವಿಚಾರದಲ್ಲಿ ಕೈ ಕಾರ್ಯಕರ್ತರು ಗಲಾಟೆ ಮಾಡಿಕೊಂಡಿದ್ದಾರೆ. ವಿಜಯನಗರ ವಿಧಾನ ಸಭೆ ಕ್ಷೇತ್ರದ ಕೈ ಆಕಾಂಕ್ಷಿಗಳ ಕಾರ್ಯಕರ್ತರು ಗಲಾಟೆ ಮಾಡಿಕೊಂಡಿದ್ದು,ನನ್ನ ಬ್ಯಾನರ್, ಇಲ್ಯಾಕೆ, ನಿನ್ನ ಬ್ಯಾನರ್ ಇಲ್ಯಾಕೆ ಅಂತ ಗಲಾಟೆ ಮಾಡಿದ್ದಾರೆ. ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಾಳೆ ಪ್ರಜಾಧ್ವನಿಯಾತ್ರೆ ನಡೆಯುತ್ತಿದ್ದು, ಯಾತ್ರಯಲ್ಲಿ ಡಿಕೆ ಶಿವಕುಮಾರ್ ಹಾಗೂ, ಮಾಜಿ ಸಿ ಎಂ ಸಿದ್ದರಾಮಯ ಅವರು ಭಾಗಿಯಾಗಲಿದ್ದಾರೆ.

ಕಾರಣ ರಾಜ್ಯ ನಾಯಕರನ್ನು ಮೆಚ್ಚಿಸುವ ಕಾರಣಕ್ಕೆ ಈ ಬ್ಯಾನರ್ ಫೈಟ್ ನಡೆದಿದೆ. ಕಾಂಗ್ರೆಸ್ ನಾಯಕರಾದ ರಾಜಶೇಖರ್ ಹಿಟ್ನಾಳ್, ಮಾಜಿ ಶಾಸಕ ಗವಿಯಪ್ಪ, ಸಿರಾಜ್ ಶೇಕ್, ಸೇರಿದಂತೆ ಅನೇಕ ನಾಯಕರ ಬ್ಯಾನರ್ ಹಾಕಲು ಕೈ ಕಾರ್ಯಕರ್ತರು ಮುಂದಾಗಿದ್ದು, ಕಾರ್ಯಕರ್ತರು ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ, ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ
ಯಾರ ಫೋಟೋಸ್ ಬೇಡ, ಕೇವಲ ರಾಷ್ಟ್ರೀಯ, ರಾಜ್ಯ ನಾಯಕರ ಫೋಟೋಸ್ ಹಾಕಿ ಅಂತ ತಾಕೀತು ಮಾಡಿದ್ದಾರೆ.

ಮೈದಾನದಲ್ಲಿ ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಖಾಸಗಿ ಹೊಟೇಲ್ ನಲ್ಲಿ ಕೂರಿಸಿ ಬಸವರಾಜ್ ರಾಯರೆಡ್ಡಿ ಅವರು ಸಮಾಧಾನ ಮಾಡಿದ್ದಾರ.