You are currently viewing ವಿಜಯನಗರ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿಜಯನಗರ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ


ವಿಜಯನಗರ(ಹೊಸಪೇಟೆ)ಜೂ.08 ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿವಿಧ ತಜ್ಞವೈದ್ಯರು/ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ಡಿ.ಎಮ್.ಎಫ್ ಅನುದಾನದಡಿ 06 ತಿಂಗಳ ಅವಧಿಗೆ ಮಾತ್ರ ನೇರ ಸಂದರ್ಶನದ ಮೂಲಕ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ ಎಂದು ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಹತೆ ಹಾಗೂ ವೇತನ ವಿವರ: ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆ 01 ಇದ್ದು, ಎಂ.ಬಿ.ಬಿ.ಎಸ್ ಕರ್ನಾಟಕ ವೈದ್ಯಕೀಯ ಮಂಡಳಿಯಲ್ಲಿ ನೊಂದಣಿಯಾದ ಚಾಲ್ತಿ ಪ್ರಮಾಣ ಪತ್ರ ಹೊಂದಿರಬೇಕು. ರೂ.45ಸಾವಿರ ವೇತನವಾಗಿರುತ್ತದೆ.
ಸ್ತ್ರೀರೋಗ ತಜ್ಞರು 08 ಹುದ್ದೆ, ಅರವಳಿಕೆ ತಜ್ಞರು 10 ಹುದ್ದೆ, ಮಕ್ಕಳ ತಜ್ಞರು 06ಹುದ್ದೆ, ಜನರಲ್ ಫಿಜಿಷಿಯನ್ 02ಹುದ್ದೆ, ರೇಡಿಯೊಲಾಜಿಸ್ಟ್ 01 ಹುದ್ದೆ ಇದ್ದು, ಎಲ್ಲಾ ಹುದ್ದೆಗಳಿಗೆ ತಜ್ಞತೆಗೆ ಅನುಗುಣವಾದ ಎಲ್ಲಾ ದಾಖಲಾತಿಗಳು/ಕರ್ನಾಟಕ ವೈದ್ಯಕೀಯ ಮಂಡಳಿಯಲ್ಲಿ ನೊಂದಣಿಯಾದ ಚಾಲ್ತಿ ಪ್ರಮಾಣ ಪತ್ರ ಹೊಂದಿರಬೇಕು. ವೇತನ ರೂ.1 ಲಕ್ಷ 30ಸಾವಿರ ನಿಗದಿಯಾಗಿರುತ್ತದೆ.
ಸೂಚನೆಗಳು: ವಯೋಮಿತಿ 63ವರ್ಷದೊಳಗೆ ಇರತಕ್ಕದ್ದು, ಅಭ್ಯರ್ಥಿಗಳು ಎಲ್ಲಾ ದಾಖಲಾತಿಗಳನ್ನು ಸ್ವಯಂ ದೃಢೀಕರಿಸಿ ಸಲ್ಲಿಸತಕ್ಕದ್ದು, ಸದರಿ ಹುದ್ದೆಗೆ ನೇಮಕಾತಿಗೊಳ್ಳುವ ತಜ್ಞ ವೈದ್ಯರು ಆರೋಗ್ಯವಾಗಿದ್ದು, ಶಸ್ತ್ರಚಿಕತ್ಸೆ ಮಾಡಲು ಅರ್ಹರಾಗಿರತಕ್ಕದ್ದು, ಒಂದು ದಿನಕ್ಕೆ ಆ ಹುದ್ದೆಗೆ ಒಂದಕ್ಕಿಂತ ಹೆಚ್ಚಾಗಿ ಅರ್ಜಿಗಳು ಬಂದಲ್ಲಿ ಅಂತಹ ಅರ್ಜಿಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ ಅಭ್ಯರ್ಥಿಗಳಿಗೆ 05 ಕೃಪಾಂಕ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19ನಲ್ಲಿ ಸೇವೆ ಸಲ್ಲಿಸಿದವರಿಗೆ ಒಂದು ವರ್ಷಕ್ಕೆ 10 ಕೃಪಾಂಕ ನೀಡಿ ಮೆರಿಟ್ ಅಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಇದು ಆಯಾ ದಿನಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಆಸಕ್ತಿವುಳ್ಳ ಅಭ್ಯರ್ಥಿಗಳು ತಜ್ಞತೆಯ ವಿದ್ಯಾರ್ಹತೆಯ ಅನುಗುಣವಾಗಿ ಮೂಲ ದಾಖಲಾತಿ ಸಮೇತ ಒಂದು ನಕಲು ಪ್ರತಿಯ ಜೊತೆಗೆ ಜಿಲ್ಲಾಧಿಕಾರಿಗಳ ಕಚೇರಿ ಹೊಸಪೇಟೆ ವಿಜಯನಗರ ಜಿಲ್ಲೆ ಇಲ್ಲಿಗೆ ಜೂ.09 ರಿಂದ ಈ ಹುದ್ದೆಗಳು ಭರ್ತಿಯಾಗುವವರೆಗೂ, ಮಧ್ಯಾಹ್ನ 3.30ರಿಂದ ಸಂಜೆ 5ರವರೆಗೆ (ರಜಾ ದಿನಗಳನ್ನು ಹೊರತುಪಡಿಸಿ) ಹಾಜರಾಗಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.