You are currently viewing ಬಳ್ಳಾರಿ BITM ಕಾಲೇಜಲ್ಲಿ ಕಳ್ಳರ ಕೈಚಳಕ, ಸೆರೆ ಆಯ್ತು ಸಿ.ಸಿ.ಟಿ.ವಿ.ಕ್ಯಾಮರದಲ್ಲಿ ಕಳ್ಳತನದ ಅಸಲಿ ಕರಾಮತ್ತು.

ಬಳ್ಳಾರಿ BITM ಕಾಲೇಜಲ್ಲಿ ಕಳ್ಳರ ಕೈಚಳಕ, ಸೆರೆ ಆಯ್ತು ಸಿ.ಸಿ.ಟಿ.ವಿ.ಕ್ಯಾಮರದಲ್ಲಿ ಕಳ್ಳತನದ ಅಸಲಿ ಕರಾಮತ್ತು.


ಬಳ್ಳಾರಿಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ  ಬಿ.ಐ.ಟಿ.ಎಂ ಕಾಲೇಜ್ ನ ಕಂಪ್ಯೂಟರ್ ಲ್ಯಾಬಿನಲ್ಲಿ ಕಳ್ಳತನ ನಡೆದಿದೆ. 13 ಲಕ್ಷಕ್ಕೂ ಅಧಿಕ ಮೌಲ್ಯದ ಕಂಪ್ಯೂಟರನ ಬಿಡಿ ಭಾಗಗಳನ್ನ ಕದ್ದಿರುವ ಇಬ್ನರು ಖದೀಮರ ದೃಷ್ಯ ಸಿ.ಸಿ.ಟಿ.ವಿ ಕ್ಯಾಮರದಲ್ಲಿ ಸೆರೆಯಾಗಿದೆ.

ಮದರ್ ಬೋರ್ಡ್, ಹಾರ್ಡ್ ಡಿಸ್ಕ್, ಸೇರಿದಂತೆ 135 ಕಂಪ್ಯೂಟರಗೆ ಅಳವಡಿಕೆಯಾಗಿದ್ದ ಆ್ಯಕ್ಷಸರೀಸನ್ನ ಕಳ್ಳತನಮಾಡಲಾಗಿದೆ. ನಿನ್ನೆ ಬೆಳಗಿನ ಜಾವ 4 ಗಂಟೆಯ ಸಂದರ್ಭದಲ್ಲಿ  ಇಬ್ಬರು ಖದೀಮರು ಈ ಕೃತ್ಯ ಎಸಗಿದ್ದಾರೆ.
ಈ ಸಂಭಂದ ಬಳ್ಳಾರಿ ಗ್ರಾಮೀಣ ಠಾಣೆಯ ಪೊಲೀಸ್ ಅಧಿಕಾರಿಗಳು ಬಿ.ಐ.ಟಿ.ಎಂ. ಕಾಲೇಜಿಗೆ ಬೇಟಿ ನೀಡಿ ಪರೀಶಿಲನೆ ನಡೆಸಿ ಪ್ರಕರಣ‌ದಾಖಲು ಮಾಡಿದ್ದಾರೆ. ಅದಲ್ಲದೆ ಕಾಲೇಜಿನಲ್ಲಿದ್ದ ಸಿ.ಸಿ.ಟಿ.ವಿ.ಕ್ಯಾಮರದಲ್ಲಿನ ದೃಷ್ಯಗಳನ್ನ ವಶಕ್ಕೆ ಪಡೆದು ತನಿಖೆಯ ಹಾದಿ ಹುಡುಕುತಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ‌ ಮಿರರ್ ವಿಜಯನಗರ.