ವಿಜಯನಗರ….ವಿಜಯನಗರ ಜಿಲ್ಲೆಯಲ್ಲಿ ದೇವದಾಸಿಯರ ಗೋಳು ಕೇಳಿದ ಸಚಿವೆ ಶಶಿಕಲಾ ಜೊಲ್ಲೆ. ದೇವದಾಸಿ ಪದ್ದತಿಯಿಂದ ವಿಮೋಚನೆಗೊಳಿಸುತ್ತೇವೆ ಎಂದು ಹೇಳಿದ್ದ ಸರ್ಕಾರ, ಈ ಹಿಂದೆ ಸಾಕಷ್ಟು ಯೋಜನೆಗಳನ್ನ ಜಾರಿಗೆ ತಂದು ನಮ್ಮ ಸಮುದಾಯದ ಸಬಲತೆಗೆ ಭರವಸೆ ನೀಡಿತ್ತು. ಆದರೆ ಸರ್ಕಾರ ಘೋಷಣೆಮಾಡಿರುವ ಯಾವೆಲ್ಲಾ ಯೋಜನೆಗಳು ಅರ್ಹ ಪಲಾನುಭವಿಗಳಿಗೆ ತಲುಪುತ್ತಿವೆ ಎಂದು ಮಾತ್ರ ನೋಡಿಲ್ಲ. ನಮಗೆ ಸಿಗಬೇಕಾದ ಯೋಜನೆಗಳನ್ನ ನಮಗೆ ನೀಡಿ ನಮ್ಮ ಪಾಪವನ್ನ ಪರಿಹಾರ ಮಾಡಿ ಎಂದು ಹೊಸಪೇಟೆಯಲ್ಲಿ ದೇವದಾಸಿ ಮಹಿಳೆಯರು, ಸಚಿವೆ ಶಶಿಕಲಾ ಜೊಲ್ಲೆಯವರ ಮುಂದೆ ಗೋಳಾಡಿದ್ದಾರೆ, ಅಂದಹಾಗೆ ಇಂದು ವಿಜಯನಗರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಚಿವೆ ಶಶಿಕಲಾ ಜೊಲ್ಲೆ ಹೊಸಪೇಟೆ ನಗರದ ಒಳ ಕ್ರೀಡಾಂಗಣದಲ್ಲಿ ಸಭೆ ನಡೆಸಿದ್ದರು, ವಿಷಯ ತಿಳಿದ ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳು ಸಚಿವರನ್ನ ಬೇಟಿಮಾಡಿ ತಮ್ಮ ಗೋಳನ್ನ ಹೇಳಿಕೊಳ್ಳಲು ಮುಂದಾಗಿದ್ದರು.
ಆದರೆ ಬೆಳಗ್ಗೆ 10:30ರ ಸುಮಾರಿಗೆ ಹೊಸಪೇಟೆ ನಗರದ ಒಳ ಕ್ರೀಡಾಂಗಣದ ಮುಂಬಾಗದಲ್ಲಿ ಕಾದು ಕುಳಿತಿದ್ದ ದೇವದಾಸಿಯರನ್ನ ಬೇಟಿಮಾಡದೆ ಒಳ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಬಾಗಿಯಾದರು. ಹೊಸಪೇಟೆ ತಾಲೂಕಿನ ಐವತ್ತಕ್ಕು ಹೆಚ್ಚು ದೇವದಾಶಿ ಮಹಿಳೆಯರು ಮತ್ತು ಅವರ ಮಕ್ಕಳು, ಸುಮಾರು ನಾಲ್ಕು ಗಂಟೆಗಳ ಕಾಲ ಒಳ ಕ್ರೀಡಾಂಗಣ ಬಾಗಿಲಲ್ಲಿ ಕಾದು ಕುಳಿತಿದ್ದರು, ನಂತರ ಸಭೆ ಮುಗಿಸಿ ಮರಳಿ ಬಂದ ಶಶಿಕಲಾ ಜೊಲ್ಲೆ ಅವರು ನೇರವಾಗಿ ದೇವದಾಸಿ ಮಹಿಳೆಯರ ಬಳಿ ಬಂದು ಅಹವಾಲು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ತಮ್ಮ ಅಳಲನ್ನ ಹೇಳಿಕೊಂಡ ದೇವದಾಸಿಯರು, ಕಳೆದ ಒಂದು ವರ್ಷದಿಂದ ನಮಗೆ ಕೊಡಬೇಕಾಗಿರುವ ಮಾಶಾಸನದ ಹಣ ಕೈ ಸೇರುತ್ತಿಲ್ಲ. ಅದರ ಜೊತೆಗೆ ದೇವದಾಸಿಯರಿಗೆ ಆಶ್ರಯ ಯೋಜನೆ ಅಡಿಯಲ್ಲಿ ಕೊಡುವ ಮನೆಗಳು ಕೂಡ ಮಂಜೂರಾಗಿಲ್ಲ ಎಂದು ಗೋಳು ತೋಡಿಕೊಂಡರ ಅವರು ಇನ್ನೂ ಕೆಲವು ಬೇಡಿಕೆಗಳನ್ನ ಸಚಿವರ ಮುಂದೆ ಇಟ್ಟರು.
ದೇವದಾಸಿ ಪದ್ದತಿಯನ್ನ ಸರ್ಕಾರ ನಿರ್ಮೂಲನೆ ಮಾಡುತ್ತೆ ಎಂದು ಹೇಳುತ್ತೆ, ಆದರೆ ವಾಸ್ತವಕ್ಕೆ ದೇವದಾಶಿ ಪದ್ದತಿ ಇನ್ನೂ ನಿರ್ಮೂಲನೆ ಆಗಿಲ್ಲ, ಕಳೆದ ಒಂದು ತಿಂಗಳ ಹಿಂದೆ ನಮ್ಮಲ್ಲಿ ದೇವದಾಸಿ ಪದ್ದತಿ ಜೀವಂತವಾಗಿರುವ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಇದಕ್ಕೆಲ್ಲ ಕಾರಣ ದೇವದಾಸಿಯರ ಮಕ್ಕಳು ಶಿಕ್ಷಣದಿಂದ ವಂಚಿತವಾಗಿರುವುದು, ಹಾಗಾಗಿ ನಮ್ಮ ಮಕ್ಕಳಿಗೆ ಸರ್ಕಾರ ಪ್ರಾಥಮಿಕ ಶಿಕ್ಷಣವನ್ನ ಮತ್ತು ಉನ್ನತ ಶಿಕ್ಷಣವನ್ನ ಉಚಿತವಾಗಿ ನೀಡಬೇಕೆಂದು ಒತ್ತಾಯಿಸಿದರು. ಈ ಎಲ್ಲ ಬೇಡಿಕೆಗಳನ್ನ ದೇವದಾಸಿಯರ ಮನವಿ ಪಡೆದ ಸಚಿವೆ ಅಧಿಕಾರಿಗಳಿಗೆ ಸೂಚನೆ ನೀಡಿ ಆದಷ್ಟುಬೇಗ ಇವರ ಎಲ್ಲಾ ಬೇಡಿಕಗೆಳನ್ನ ಪೂರೈಸಿ ಎಂದು ಹೇಳಿ ಅಲ್ಲಿಂದ ತೆರಳಿದರು.ಒಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ವಿಜಯನಗರ ಜಿಲ್ಲೆಯಲ್ಲಿರುವ ದೇವದಾಸಿಯರ ಸ್ಥಿತಿಗತಿಗಳು ಅದೋಗತಿಗೆ ತಲುಪಿದ್ದು ಇನ್ನು ಮುಂದಾದರು ಇವರ ಕಷ್ಟಗಳು ದೂರಾಗುತ್ತಾ ಕಾದುನೋಡಬೇಕಿದೆ.
ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.
ವರದಿ.ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.