![](https://hampimirror.com/media/2022/01/IMG_20220114_172201-473x1024.jpg)
ಹಾವೇರಿ. ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿ ಬಿಡುಗಡೆಗೊಂಡಿದ್ದ ಯುವಕ ವಿಷ ಸೇವಿಸಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನ ಬನ್ನಿಹಟ್ಟಿ ತಾಂಡ ಗ್ರಾಮದಲ್ಲಿ ನಡೆದಿದೆ.
ಸಾವಿಗೀಡಾದ ಪ್ರಸನ್ನ ಎನ್ನುವ ಇಪ್ಪತ್ತು ವರ್ಷದ ಯುವಕ, ನನ್ನ ಸಾವಿಗೆ ಇವರೆ ಕಾರಣ ಎಂದು ಯುವತಿ ಮತ್ತು ಸಂಭಂದಿಗಳ ಹೆಸರನ್ನ ಬರೆದು ಮೊಬೈಲ್ ಸ್ಟೇಟಸ್ ನಲ್ಲಿ ಹಾಕಿ ಮನೆಯಲ್ಲಿ ವಿಷ ಸೇವಿಸಿ ಸಾವಿಗೆ ಶೆರಣಾಗಿದ್ದಾನೆ.
ಪೋಕ್ಸೋ ಪ್ರಕರಣದಲ್ಲಿ ದೂರು ನೀಡಿದ್ದ ಯುವತಿ ಹಾಗೂ ಪೋಷಕರ ಕಿರುಕುಳದಿಂದ ಮನನೊಂದ ಯುವಕ ವಿಷ ಸೇವಿಸಿ ಸಾವನ್ನಪ್ಪಿರುವುದಾಗಿ ಬರೆದುಕೊಂಡಿದ್ದಾನೆ. .
![](https://hampimirror.com/media/2022/01/IMG_20220114_172201-1-473x1024.jpg)
ಈ ಹಿಂದೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಸನ್ನ ವಿರುದ್ದ ಪೊಕ್ಸೊ ಕಾಯ್ದೆ ಅಡಿ ದೂರು ದಾಖಲಾಗಿತ್ತು ದೂರು ದಾಖಲಾದ ಬಳಿಕ ಜೈಲು ಸೇರಿ ಬಿಡುಗಡೆಯಾಗಿದ್ದ ಪ್ರಸನ್ನ. ಇತ್ತೀಚೆಗೆ ಯುವತಿಯ ಮನೆಯವರ ಕಿರುಕುಳ ತಳಲಾರದೆ ಮನನೊಂದ ಪ್ರಸನ್ನ ಸಾವಿಗೆ ಶರಣಾಗಿದ್ದಾನೆ ಎಂದು ಯುವಕನ ಪೋಷಕರ ಆರೋಪಿಸಿದ್ದಾರೆ.