You are currently viewing ಭೂ ಮಾಫಿಯಾಕ್ಕೆ ಬಲಿಯಾದನ ರೈತ…?

ಭೂ ಮಾಫಿಯಾಕ್ಕೆ ಬಲಿಯಾದನ ರೈತ…?

ವಿಜಯನಗರ….ನಿನ್ನೆ ಸಂಜೆ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಹಸಿಲ್ದಾರ್ ಕಛೇರಿಯ ಹಿಂಬಾಗದಲ್ಲಿ ರೈತನ ಶವವೊಂದು ಪತ್ತೆಯಾಗಿದೆ. ಬಣಕಾರ ಮಲ್ಲಪ್ಪ ಎನ್ನುವ ಅಂದಾಜು 49ವರ್ಷದ ರೈತ, ಕಳೆದ ನಾಲ್ಕೈದು ದಿನಗಳ ಹಿಂದೆ ವಿಷ ಸೇವಿಸಿ ಸಾವನ್ನಪ್ಪಿದ್ದಾನೆ ಎಂದು ಶೆಂಕಿಸಲಾಗಿದೆ‌. ದೇಹದ ಕೆಲವು ಬಾಗಗಳನ್ನ ಪ್ರಾಣಿಗಳು ತಿಂದು ಹಾಕಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಮೃತ ದೇಹದ ಪಕ್ಕದಲ್ಲಿ ವಿಷದ ಬಾಟಲಿ ಪತ್ತೆಯಾಗಿದೆ. ಇನ್ನು ಕಳೆದ ವಾರ ರೈತ ಮಲ್ಲಪ್ಪನ ಕಣೆಯಾಗಿರುವ ಕುರಿತು ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಆತನ ಹೆಂಡತಿ ಸರಸ್ವತಿ ದೂರು ದಾಖಲು ಮಾಡಿದ್ದರು. ಆದರೆ ನಿನ್ನೆ ಮಲ್ಲಪ್ಪ ಶವವಾಗಿರುವುದನ್ನ ಕಂಡ ಸಂಭಂದಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನು ಪ್ರಕರಣಕ್ಕೆ ಸಂಭಂದಿಸಿದಂತೆ ಮಲ್ಲಪ್ಪನ ಕುಟುಂಭಸ್ಥರು‌ ಮತ್ತು ಸ್ಥಳೀಯರು ಹೂವಿನ ಹಡಗಲಿ ತಹಸಿಲ್ದಾರರ ಕಛೇರಿಯ ಮುಂದೆ ಮಲ್ಲಪ್ಪನ ಮೃತ ದೇಹ ಇಟ್ಟು ಪ್ರತಿಭಟನೆ ನಡೆಸಿ ಮಲ್ಲಪ್ಪನ ಸಾವಿಗೆ ಕಾರಣರಾದವರ ವಿರುದ್ದ ಕಠಿಣ ಕ್ರಮ ಜರುಗಿಸುವುದರ ಜೊತೆಗೆ ಸಾವಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ.

ಹಿನ್ನೆಲೆ…

ತನ್ನ 2-22 ಎಕ್ಕರೆ ಜಮೀನಿನ ಪೈಕಿ ಹೂವಿನ ಹಡಗಲಿಯಲ್ಲಿ ಮಿನಿ ವಿಧಾನಸೌದ ನಿರ್ಮಾಣಕ್ಕೆ 2006 ರಲ್ಲಿ 2 ಎಕ್ಕರೆ ಜಮೀನನ್ನ ನೀಡಿದ್ದ ಮಲ್ಲಪ್ಪ, ಆದರೆ ಭೂ ಸ್ವಾದೀನ ಪ್ರಕೃಯೆಗೆ 2-22ಜಮೀನು ಸಂಪೂರ್ಣ ಒಳಪಟ್ಟಿತ್ತು, ಇದರ ವಿರುದ್ದ ಹೈಕೋರ್ಟಗೆ ಹೋಗಿ ತನ್ನ ಇನ್ನುಳಿದ 22 ಸೆಂಟ್ಸ್ ಭೂಮಿಯನ್ನ ಸರ್ವೇಮಾಡಿ ವಾಪಸ್ ಪಡೆಯಲು ಮುಂದಾಗಿದ್ದ, ಕಳೆದ ಕೆಲವು ದಿನಗಳ ಹಿಂದೆ ಉಳಿದ 22 ಸೆಂಟ್ಸ್ ಭೂಮಿಯ ಸರ್ವೇ ಮಾಡಿಸಲು ಮುಂದಾಗಿದ್ದರಿಂದ ಇಲ್ಲಿನ .

ಇಲ್ಲಿನ ಕೆಲವು ಭೂ ಮಾಫಿಯಾಗಳು ಮಲ್ಲಪ್ಪನಿಗೆ ಬೆದರಿಕೆ ನೀಡಿವೆ ಎನ್ನಲಾಗಿದೆ. ಅದಲ್ಲದೆ ಇಲ್ಲಿ ನಿರ್ಮಾಣವಾಗಿರುವ ಅಕ್ರಮ ಲೇಔಟ್ ನಲ್ಲಿ ಮಲ್ಲಪ್ಪನ 22 ಭೂಮಿ ಅಡಗಿರುವ ಕುರಿತು ಜಿಲ್ಲಾಧಿಕಾರಿ ಸೇರಿದಂತೆ ಸಂಭಂದ ಪಟ್ಟ ಎಲ್ಲಾ ಅಧಿಕಾರಿಗಳ ಗಮನಕ್ಕೆ ತಂದು, ಅಕ್ರಮ ಲೇಔಟ್ ತಡೆಯುವಂತೆ ಹೋರಾಟ ಸಹ ನಡೆಸಿದ್ದ ಮಲ್ಲಪ್ಪ ಎನ್ನಲಾಗಿದೆ. ಈ ಎಲ್ಲಾ ಕಾರಣದಿಂದ ಮಲ್ಲಪ್ಪ ಭೂ ಮಾಫಿಯಾದ ಕಿರುಕುಳಕ್ಕೆ ಒಳಗಾಗಿ ಸಾವನ್ನಪ್ಪಿ ವಿಷ ಸೇವಿಸಿ ಸಾವನ್ನಪ್ಪಿದ್ದಾನ ಅಥವಾ ತನಿಗೆ ನ್ಯಾಯ ಸಿಗುವುದು ಕಷ್ಟ ಎಂದು ತಿಳಿದು ಮನನೊಂದೊ ಸಾವನ್ನಪ್ಪಿದ್ದಾನೆ ಎಂದು ಮೃತನ ಹೆಂಡತಿ ಸರಸ್ವತಿ ಹೂವಿನ ಹಡಗಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ಹೂವಿನ ಹಡಗಲಿಯ ಕೆಲವು ಅಧಿಕಾರಿಗಳು ಸೇರಿದಂತೆ ಇನ್ನೂ ಕೆಲವು ರಾಜಕೀಯ ನಾಯಕರ ಹೆಸರು ಕೂಡ ಸೇರ್ಪಡೆಮಾಡಿ ದೂರು ನೀಡಿದ್ದಾರೆ ಎನ್ನಲಾಗಿದೆ. ದೂರು ಪಡೆದಿರುವ ಹೂವಿನ ಹಡಗಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಭಂದಿಸಿದಂತೆ ತನಿಖಾ ತಂಡ ರಚಿಸಿರುವ ವಿಜಯನಗರ ಎಸ್ಪಿ. ಡಾಕ್ಟರ್ ಅರುಣ್ ಕೆ. ತನಿಖೆಯಲ್ಲಿ ಆರೋಪಿತರ ತಪ್ಪು ಕಂಡು ಬಂದರೆ ಅವರು ಎಷ್ಟೇ ಪ್ರಭಾವಿಗಳು ಆದರೂ ಸರಿ ಅವರನ್ನ ಬಿಉವ ಮಾತಿಲ್ಲ ಎಂದಿದ್ದಾರೆ. ಇನ್ನು ಅದೇ ರೀತಿ ವಿಜಯನಗರ ಡಿ.ಸಿ. ಅನಿರುದ್ದ ಶ್ರವಣ್ ಕೂಡ ರೈತನ ಸಾವಿನ ಹಿನ್ನೆಲೆ ಮತ್ತು ಆತನ ದೂರಿನ ಎಲ್ಲಾ ವಶಕ್ ಪಡೆದು ತನಿಖೆ ನಡೆಸಲು ಎ.ಡಿ.ಸಿ.ಮತ್ತು ಹರಪನಹಳ್ಳಿ ಎ.ಸಿ.ಗೆ ಆದೇಶಿಸಿದ್ದಾರೆ. ಸದ್ಯಕ್ಕೆ ರೈತ ಮಲ್ಲಪ್ಪ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿದ್ದು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಯಾವ ರೀತಿ ತನಿಖೆ ನಡೆಸಿ ಮೃತ ರೈತನ ಕುಟುಂಭಕ್ಕೆ ನ್ಯಾಯ ಕೊಡಿಸುತ್ತೆ ಕಾದು ನೋಡಬೇಕಿದೆ.

ವೀಡಿಯೊ ನೋಡಲು ಈ ಕೆಳಗಿನ ಲಿಂಕ ಒತ್ತಿರಿ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.