ಕೊವಿಡ್ ಕಂಟಕ ಕೊಪ್ಪಳ ಜಾತ್ರೆ ಸ್ಥಗಿತ.

  • Post category:Top news

ಕೊಪ್ಪಳ..ಐತಿಹಾಸಿಕ  ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಈ ಬಾರಿ ಕೊರೊನ ಮಹಾಮಾರಿ ಅಡ್ಡಿಯುಂಟುಮಾಡಿದೆ. ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ದಿ‌ ಪಡೆದ ಗವಿಮಠದ ಜಾತ್ರೆ ನಡೆಸುವ ಸಂಭಂದ ಸಕಲ‌ ಸಿದ್ಧತೆಯನ್ನಮಾಡಿಕೊಂಡಿತ್ತು ಆಡಳಿತ ಮಂಡಳಿ.

ಆದರೆ ಕೊವಿಡ್ ಹೆಚ್ಚಾದ ಹಿನ್ನೆಲೆಯಲ್ಲಿ ಮಠದ ಆಡಳಿತ ಮಂಡಳಿ ಜಾತ್ರೆಯನ್ನ ಸ್ಥಗಿತಮಾಡಿರುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ.ಶತಮಾನಗಳಿಂದ ಲಕ್ಷಾಂತರ ಭಕ್ತರು ಸೇರುವ ಶ್ರೀ ಗವಿಸಿದ್ದೇಶ್ವರ ಜಾತ್ರೆ ಇದಾಗಿದ್ದು.ಓಮಿಕ್ರಾನ್ ಹಿನ್ನೆಲೆಯಲ್ಲಿ ಜಾತ್ರಮಹೋತ್ಸವ ರದ್ದು ನಿರ್ಧಾರಕ್ಕೆ  ಆಡಳಿತ ಮಂಡಳಿ ಮುಂದಾಗಿದೆ.

ಸಂಪ್ರದಾಯ ಸರಳವಾಗಿ ಕೇವಲ ಶ್ರೀಮಠದ ಆವರಣದಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ಮಾತ್ರ ಆಚರಣೆಮಾಡಿ ಕೃರ್ತು ಗದ್ದುಗೆಯ ದರ್ಶನಕ್ಕೆ ಅವಕಾಶ ಕಲ್ಪಿಸಿ ಉಳಿದ ಎಲ್ಲಾ ಕಾರ್ಯಕ್ರಮಗಳನ್ನ ಸ್ಥಗಿತಗೊಳಿಸಲಾಗಿದೆ.

ವರದಿ..ಸುಬಾನಿ ಪಿಂಜಾರ.