ವಿಜಯನಗರ…ರಥವನ್ನ ಎಳೆಯುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಆಯ ತಪ್ಪಿ ರಥದ ಗಾಲಿಗೆ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ. ಸುರೇಶ ತಂದೆ ಬಸವನಗೌಡ 45ವರ್ಷ ಸಾವಿಗೀಡಾದ ವ್ಯಕ್ತಿಯಾಗಿದ್ದು, ದಾವಣಗೇರಿ ನಿವಾಸಿಯಾಗಿದ್ದಾನೆ.
ಚಿಗಟೇರಿ ಗ್ರಾಮದಲ್ಲಿ ಇಂದು ಸಂಜೆ 5 ಗಂಟೆ ಸುಮಾರಿಗೆ ಶ್ರೀ ನಾರದಮುನಿ ಸ್ವಾಮಿ ರಥೋತ್ಸವ ನಿಮಿತ್ತ ರಥೋತ್ಸವದಲ್ಲಿ ಸಾವಿರಾರು ಭಕ್ತ ಸಮೂಹ ಸೇರಿತ್ತು, ಈ ಸಂದರ್ಭದಲ್ಲಿ ರಥ ಎಳೆಯಲು ನೂರಾರು ಜನ ಭಕ್ತರು ಮುಂದಾದ ಪರಿಣಾಮ ನೂಕು ನುಗ್ಗಲು ಉಂಟಾಗಿದೆ.ರಥ ಎಳೆಯಲು ಮುಂದಾದ ವ್ಯಕ್ತಿಯೊಬ್ಬ ಕಾಲು ಜಾರಿ ರಥದ ಗಾಲಿಗೆ ಬಿದ್ದಿದ್ದಾನೆ. ಅಷ್ಟೊತ್ತಿಗೆ ವ್ಯಕ್ತಿಯ ಮೇಲೆ ರಥದ ಗಾಲಿ ಉರುಳಿದೆ, ಸ್ಥಳದಲ್ಲೇ ಇದ್ದ ಜನರು ಆತನನ್ನ ಹೊರತೆಗೆದರಾದರು ಬದುಕುಳಿಯಲಿಲ್ಲ.
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹರಪನಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು ಚಿಗಟೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಕೊವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಜಾತ್ರೆ ನಡೆದಿರಲಿಲ್ಲ, ಹಾಗಾಗಿ ಈ ವರ್ಷ ಹೆಚ್ಚಿನ ಸಂಖೆಯಲ್ಲಿ ಭಕ್ತರು ಸೇರಿದ್ದರು,ಇನ್ನು ಈ ಹಿಂದೆ ಕೊಟ್ಟೂರೇಶ್ವರ ರಥೋತ್ಸವದ ಗಾಲಿಯ ಅಚ್ಚು ಮುರಿದ ಸಂದರ್ಭದಲ್ಲಿ ರಥೋತ್ಸವ ನಡೆಸಲು ಹಲವು ನಿಯಮಗಳನ್ನ ಅನುಸರಿಸಬೇಕೆಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿತ್ತು, ಆದರೆ ಅದರ ಬೆನ್ನಲ್ಲೆ ಮತ್ತೆ ಅವಘಡ ಸಂಭವಿಸಿದೆ ಸರ್ಕಾರ ಈ ಸಂಭಂದ ಯಾವೆಲ್ಲ ಸುರಕ್ಷತ ಕ್ರಮಗಳನ್ನ ತೆಗೆದುಕೊಳ್ಳುತ್ತೆ ಕಾದು ನೋಡಬೇಕಿದೆ.
ಬರ ಸಿಡಿಲಿಗೆ ರೈತ ಬಲಿ.
ಅದೇರೀತಿಯಾಗಿ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಸಿಡಿಲು ಬಡಿತಕ್ಕೆ ಸಿಕ್ಕ ರೈತನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ರೈತ ತನ್ನ ಜಮೀನಿನ ಕೊಳವೆ ಬಾವಿಗೆ ಮೋಟರ್ ಇಳಿಸಲು ಹೊಲಕ್ಕೆ ಹೋದ ಸಂದರ್ಭದಲ್ಲಿ ಏಕಾ ಏಕಿ ಸಿಡಿಲು ಬಡಿದಿದೆ. ರೈತ ಇಸ್ಮಾಯಿಲ್ ಸಾಬು ( 50)ಸಾವಿಗೀಡಾಗಿದ್ದಾನೆ.
ಮಳೆ ಗಾಳಿಗೆ ಉರುಳಿದ ಮರ ಕಾರುಗಳು ಜಖಂ
ಮತ್ತೊಂದೆಡೆ ಬಳ್ಳಾರಿ ಜಿಲ್ಲೆಯಲ್ಲಿ ಮಳೆಗಾಳಿ ದೊಡ್ಡ ಅವಾಂತರವನ್ನೇ ಸೃಷ್ಠಿಮಾಡಿದೆ. ಸಂಡೂರ ತಾಲೂಕಿನ ಜಿಂದಾಲ್ ಕಂಪನಿಯ ಫಸ್ಟ್ ಗೇಟ್ ಬಳಿಯಲ್ಲಿ ನಿಲ್ಲಿಸಿದ್ದ ಕಾರುಗಳ ಮೇಲೆ ಮರ ಉರುಳಿದ ಘಟನೆ ಕೂಡ ನಡೆದಿದೆ. ಘಟನೆಯಿಂದ ಬೆಲೆಬಾಳುವ ನಾಲ್ಕಾರು ಕಾರುಗಳು ಜಕಂಗೊಂಡಿದ್ದು, ಜೆ.ಎಸ್.ಡಬ್ಲ್ಯು ಅಗ್ನಿಶಾಮಕ ಸಿಬ್ಬಂದಿಗಳು ಮತ್ತು ಸ್ಥಳೀಯ ಪೊಲೀಸರು ಕಾರ್ಯಾಚರಣೆ ನಡೆಸುವ ಮೂಲಕ ಮರದಡಿ ಸಿಲುಕಿರುವ ಕಾರುಗಳನ್ನ ಹೊರ ತೆಗೆಯುವ ಕೆಲಸ ಪ್ರಾರಂಬಿಸಿದ್ದಾರೆ.
ವರದಿ…ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.