You are currently viewing ಕಣದಲ್ಲಿ ಸಂಗ್ರಹಿಸಿದ್ದ ಮೆಕ್ಕೆಜೋಳ ಕದ್ದಿದ್ದ ಖದೀಮರ ಕೈಗೆ ಕೊಳ ತುಡಿಸಿದ ಹರಪನಹಳ್ಳಿ ಪೊಲೀಸರು.

ಕಣದಲ್ಲಿ ಸಂಗ್ರಹಿಸಿದ್ದ ಮೆಕ್ಕೆಜೋಳ ಕದ್ದಿದ್ದ ಖದೀಮರ ಕೈಗೆ ಕೊಳ ತುಡಿಸಿದ ಹರಪನಹಳ್ಳಿ ಪೊಲೀಸರು.

  • Post category:Uncategorized

ವಿಜಯನಗರ (ಹೊಸಪೇಟೆ)  ರೈತರ ಕಣದಲ್ಲಿ ಸಂಗ್ರಹಿಸಿದ್ದ 51 ಚೀಲ ಮೆಕ್ಕೆಜೋಳ ಕಳ್ಳತನ ಮಾಡಿದ ಖದೀಮರನ್ನ ಬಂಧಿಸುವಲ್ಲಿ ಹರಪನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.


1) ಅಂಮ್ರಯ್ಯದ ಗುಡದಯ್ಯ. ಹೂವಿನ ಹಡಗಲಿ ತಾಲೂಕು ತಿಪ್ಪಾಪುರ ಗ್ರಾಮ.


2) ಹೆದ್ದಾರಿ ನಿಂಗರಾಜು.ಹೂವಿನ ಹಡಗಲಿ ತಾಲೂಕು ತಿಪ್ಪಾಪುರ ಗ್ರಾಮ.


3) ಗೌಡ್ರ ಮಂಜುನಾಥ. ಹೂವಿನ ಹಡಗಲಿ ತಾಲೂಕು ತಿಪ್ಪಾಪುರ ಗ್ರಾಮ. ಬಂಧಿತ ಆರೋಪಿಗಳಾಗಿದ್ದಾರೆ.

ಬಂದಿದ್ದರಿಂದ 3 ಲಕ್ಷ ಬೆಲೆಬಾಳುವ ಒಂದು ಅಶೋಕ್ ಲೈ ಲ್ಯಾಂಡ್ ವಾಹನ. 40,360 ನಗದು. 60 ಕೆಜಿಯ 11 ಮೆಕ್ಕೆಜೋಳ ತುಂಬಿದ ಚೀಲಗಳನ್ನ ವಶಕ್ಕೆ ಪಡೆದಿದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದೇ ಡಿಸೆಂಬರ್ ತಿಂಗಳು ಮೂರನೇ ತಾರೀಕು ನಂದು ರಾತ್ರಿ ವೇಳೆಯಲ್ಲಿ ಹರಪನಹಳ್ಳಿ ತಾಲೂಕಿನ ಹುಲಿಕಟ್ಟಿ ಗ್ರಾಮದ ಬನ್ನಿಮಟ್ಟಿ ಹನುಮಂತಪ್ಪ ಎಂಬ ರೈತ ಮೆಕ್ಕೆಜೋಳವನ್ನು ಮಾರಾಟ ಮಾಡಲು ಚೀಲದಲ್ಲಿ ತುಂಬಿ ಕಣದಲ್ಲಿ ಸಂಗ್ರಹಿಸಿದ್ದ, ಇದನ್ನು ಗಮನಿಸಿದ ಈ ಕದೀಮರು ರಾತ್ರೋರಾತ್ರಿ ಐವತ್ತೊಂದು ಚೀಲ ಮೆಕ್ಕೆಜೋಳವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದ ಹನುಮಂತಪ್ಪ, ಕಳ್ಳತನ ವಾಗಿರುವ ಮೆಕ್ಕೆಜೋಳವನ್ನು ಪತ್ತೆ ಹಚ್ಚಿ ಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದ.

ಹರಪನಹಳ್ಳಿ ಡಿವೈಎಸ್ಪಿ ಹಾಲಮೂರ್ತಿ ರಾವ್,  ಹಾಗೂ ಸಿಪಿಐ ನಾಗರಾಜ್ ಎಂ ಕಮ್ಮಾರ್ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಪಿಎಸ್ಐ ಸಿ. ಪ್ರಕಾಶ್.  ಪಿಎಸ್ಐ ಶ್ರೀನಿವಾಸ್ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಬ್ಬಂದಿಗಳಾದ ಕೆ ನಾಗರಾಜ್,  ಆನಂದ್, ಇಮಾಮ್ ಸಾಹೇಬ್,ಬಿ ದೇವೇಂದ್ರಪ್ಪ  ಮಾಬು ಸಾಬ್, ತನಿಕಾ ತಂಡದಲ್ಲಿ ಭಾಗಿಯಾಗಿದ್ದರು. ತಮ್ಮ ಸಿಬ್ಬಂದಿಗಳ ಕಾರ್ಯಾಚರಣೆಗೆ ಮೆಚ್ಚಿದ ವಿಜಯನಗರ ಎಸ್ಪಿ ಶ್ರೀಹರಿ ಬಾಬು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವರದಿ. ಸುಬಾನಿ ಪಿಂಜಾರ. ಹಂಪಿ ಮಿರರ್ ವಿಜಯನಗರ.