ವಿಜಯನಗರ..ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯ ಬಳಿಕ ಸ್ವತಹಾ ಸಚಿವ ಆನಂದ್ ಸಿಂಗ್ ಅವರೇ ಕೊರೋನ ನಿಯಮ ಉಲ್ಲಂಘನೆಮಾಡಿದ್ದರೆ, ಸಾಮಾಜಿಕ ಅಂತರ ಪಾಲನೆ ಮಾಡದೇ ಬಿಜೆಪಿ ಕಾರ್ಯಕರ್ತರು ಅದ್ದೂರಿ ಮೆರವಣಿಗೆ ನಡೆಸಲಾಯಿತು. ನಗರಸಭೆ ಕಛೇರಿಯಿಂದ ಆರಂಭಗೊಂಡ ಮೆರವಣಿಗೆಗೆ ಸಚಿವ ಆನಂದ್ ಸಿಂಗ್, ಸಂಸದ ದೇವೇಂದ್ರಪ್ಪ ಖುದ್ದು ಚಾಲನೆ ನೀಡಿದರು. ಭರ್ಜರಿ ಮೆರವಣಿಗೆಮಾಡುವ ಮೂಲಕ ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿದರು. ಇನ್ನು ಘಟನೆಗೆ ಸಂಭಂದಿಸಿದಂತೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ, ಅಧ್ಯಕ್ಷ ಉಪಾಧ್ಯಕ್ಷರು ಸೇರಿದಂತೆ 60 ರಿಂದ 70 ಜನರ ವಿರುದ್ದ ರಾಷ್ಷ್ರೀಯ ವಿಪತ್ತು ನಿರ್ವಹಣಾ ಕಾಯ್ದ ಅಡಿಯಲ್ಲಿ ಎಪ್.ಐ.ಆರ್. ದಾಖಲಾಗಿದೆ.
ಅಂದಹಾಗೆ ಇಂದು ನಡೆದ ಚುನಾವಣೆಯಲ್ಲಿ ಹೊಸಪೇಟೆ ನಗರಸಭೆಯ ಅಧ್ಯಕ್ಷರಾಗಿ ಸುಂಕಮ್ಮ ಅವಿರೋಧವಾಗಿ ಆಯ್ಕೆಯಾದ್ರೆ, ಉಪಾಧ್ಯಕ್ಷರಾಗಿ ಎಲ್.ಎಸ್. ಆನಂದ್ ಗೆಲುವು ಸಾಧಿಸಿದ್ದಾರೆ.ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ 4ನೇ ವಾರ್ಡ್ನ ಸದಸ್ಯೆ ಸುಂಕಮ್ಮ ನಾಮಪತ್ರ ಸಲ್ಲಿಸಿದರು. ನಿಗದಿತ ಸಮಯದೊಳಗೆ ಕಾಂಗ್ರೆಸ್ನ ಅಭ್ಯರ್ಥಿ ಕನಕಮ್ಮ ಬಾರದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಸಿದ್ದರಾಮೇಶ್ವರ ಅವರು ಅವಿರೋಧ ಆಯ್ಕೆ ಪ್ರಕಟಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದ 15ನೇ ವಾರ್ಡಿನ ಸದಸ್ಯ ಎಲ್.ಎಸ್. ಆನಂದ್, ಕಾಂಗ್ರೆಸ್ನಿಂದ 3ನೇ ವಾರ್ಡ್ನ ಸದಸ್ಯ ಬಿ. ನಾರಾಯಣಪ್ಪ ನಾಮಪತ್ರ ಸಲ್ಲಿಸಿದ್ದರು.
ಈ ಇಬ್ಬರು ಚುನಾವಣ ಕಣದಲ್ಲಿ ಉಳಿದಿದ್ದು ಇಬ್ಬರ ಮದ್ಯೆ ಚುನಾವಣೆ ನಡೆಯಿತು. ನಗರಸಭೆಯ 35 ಸದಸ್ಯರು ಹಾಗೂ ಪ್ರವಾಸೋದ್ಯಮ ಸಚಿವ ಹಾಗೂ ಶಾಸಕ ಆನಂದ್ ಸಿಂಗ್ ಮತ್ತು ಸಂಸದ ದೇವೇಂದ್ರಪ್ಪರ ಮತ ಸೇರಿ ಒಟ್ಟು 37 ಮತಗಳಲ್ಲಿ 7ನೇ ವಾರ್ಡ್ನ ಸದಸ್ಯೆ ಕನಕಮ್ಮ ಗೈರು ಹಾಜರಾಗಿದ್ದು, ಅದಲ್ಲದೆ 6ನೇ ವಾರ್ಡಿನ ಅಬ್ದುಲ್ ಖದೀರ್ ತಟಸ್ಥರಾಗಿ ಉಳಿದರು.
ಬಿಜೆಪಿ ಅಭ್ಯರ್ಥಿ ಆನಂದ್ 22 ಮತಗಳನ್ನು ಪಡೆದು ಗೆಲುವು ಸಾಧಿಸಿದರು, ಕಾಂಗ್ರೆಸ್ನ ನಾರಾಯಣಪ್ಪ 13 ಮತಗಳನ್ನ ಪಡೆದು ಪರಾಜಿತರಾದರು. ಈ ಮೂಲಕ ವಿಜಯನಗರ ಮೊದಲ ಜಿಲ್ಲಾ ಕೇಂದ್ರವಾಗಿರುವ ಹೊಸಪೇಟೆ ನಗರಸಭೆಯಲ್ಲಿ ಬಿಜೆಪಿ ಬಾವುಟ ಹಾರಿತು.
ಚುನಾವಣ ಪ್ರಕೃಯೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆನಂದ್ ಸಿಂಗ್ ಅವರು, ಈ ಮೊದಲೇ ನಾವು ಹೇಳಿದಂತೇ ಬಿಜೆಪಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ವಿಜಯನಗರದಲ್ಲಿ ಅಭಿವೃದ್ಧಿ ಪರ್ವ ಆರಂಭಗೊಂಡಿದೆ ಎಂದರು. ಹೊಸಪೇಟೆ ನಗರ ಜಿಲ್ಲಾಕೇಂದ್ರ ಆದ ನಂತರ ಮೊದಲು ಅಧಿಕಾರ ಪಡೆದದ್ದು ಕೂಡ ಬಿಜೆಪಿ ಪಕ್ಷವೇ ಎಂದು ಇತಿಹಾಸದ ಪುಠದಲ್ಲಿ ಉಳಿದಿದೆ ಎಂದು ಸಂಭ್ರಮ ವ್ಯಕ್ತಪಡಿಸಿದರು. ಒಟ್ಟು 35 ಸ್ಥಾನಗಳಲ್ಲಿ ಬಿಜೆಪಿ ಪಕ್ಷ 10 ಸ್ಥಾನಗಳನ್ನ ಗೆಲ್ಲುವ ಮೂಲಕ ಮೂರನೆ ಸ್ಥಾನಕ್ಕೆ ಉಳಿದಿದ್ದರು, ಹಿಂಬಾಗಿಲ ರಾಜಕಾರಣದಿಂದ ಬಿಜೆಪಿ ಪಕ್ಷ ನಗರಸಭೆಯನ್ನ ತನ್ನ ತೆಕ್ಕೆ ತೆಗೆದುಕೊಂಡಿದೆ. 12 ಸ್ಥಾನಗಳನ್ನ ಪಡೆದು ಎರಡನೆ ಸ್ಥಾನದಲ್ಲಿದ್ದ ಕಾಂಗ್ರೆಸ್ ಅಧಿಕಾರ ಹಿಡಿಯುಲು ಆನಂದ್ ಸಿಂಗ್ ಬಿಡಲಿಲ್ಲ, ಆಪ್ ಪಕ್ಷದ ಒಬ್ಬ ಅಭ್ಯರ್ಥಿ ಹಾಗೂ 12 ಜನ ಪಕ್ಷೇತರರನ್ನ ತಮ್ಮತ್ತ ಸೆಳೆಯುವ ಕಸರತ್ತನ್ನ ಕಳೆದ ಎರಡು ವಾರಗಳಿಂದ ಆನಂದ್ ಸಿಂಗ್ ಮಾಡಿದ್ದರು. ಅದರ ಫಲವಾಗಿ ಹೊಸಪೇಟೆ ನಗರಸಭೆಯಲ್ಲಿ ಬಿಜೆಪಿಯ ಅಧ್ಯಕ್ಷ ಉದ್ಯಕ್ಷರು ಗದ್ದಿಗೆ ಏರುವಂತಾಯಿತು.
ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.
ವರದಿ..ಸುಬಾನಿ ಪಿಂಜಾರ ವಿಜಯನಗರ.