ವಿಜಯನಗರ..ಮಹಾತ್ಮಾ ಗಾಂಧೀಜಿಯವರ ಹುತಾತ್ಮ ದಿನಾಚರಣೆಯ ಹಿನ್ನೆಲೆಯಲ್ಲಿಂದು ಹೊಸಪೇಟೆಯ ಆರೋಗ್ಯ ಇಲಾಖೆ ಮುಕ್ತಿ ಧಾಮದಲ್ಲಿರುವ ಹನ್ನೊಂದು ಕುಟುಂಬಗಳಿಗೆ ತಲಾ ಐದು ಕೇಜಿ ಅಕ್ಕಿ ವಿತರಣೆಮಾಡಿತು.
ಅಕ್ಕಿ ವಿತರಣೆಮಾಡಿದ ನಂತರ ಮಾತನಾಡಿದ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ. ಕುಷ್ಠರೋಗ ಶಾಪವಲ್ಲ ಇದು ಲೆಪ್ರಾ ಬ್ಯಾಕ್ಟೀರಿಯದಿಂದ ಬರುವ ಕಾಯಿಲೆಯಾಗಿದೆ, ಸರಿಯಾದ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖವಾಗುತ್ತದೆ ಎಂದು ಮುಕ್ತಿಧಾಮದ ನಿವಾಸಿಗಳಿಗೆ ಆತ್ಮ ವಿಶ್ವಾಸ ಹೆಚ್ವಿಸುವ ನುಡಿಗಳನ್ನಾಡಿದರು.
ಅಲ್ಲದೆ ದೇಹದ ಚರ್ಮದ ಮೇಲೆ ಮಚ್ಚೆಗಳು ಕಂಡ ತಕ್ಷಣ ಸಮೀಪದ ಸರಕಾರಿ ಅಸ್ಪತೆಗೆ ಬಂದು ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಲು ಕೂಡ ಸಲಹೆ ನೀಡಿದರು, ಕುಷ್ಠರೋಗದಲ್ಲಿ ಎರಡು ಬಗೆಯಲ್ಲಿ ಕಾಣಿಸಿಕೊಳ್ಳುತ್ತದೆ, ಇದರಲ್ಲಿ ಪಿ.ಬಿ.ಗೆ ಆರು ತಿಂಗಳು ಮತ್ತು ಎಂ.ಬಿ.ಗೆ ಹನ್ನೆರಡು ತಿಂಗಳ ಚಿಕಿತ್ಸೆ ಇರಲಿದ್ದು ಲಕ್ಷಣಗಳು ಕಂಡ ತಕ್ಷಣ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕೆಂದು ಜಾಗೃತಿ ಮೂಡಿಸಿದರು. ಇದೇ ಸಂದರ್ಭದಲ್ಲಿ ಕುಷ್ಠರೋಗ ಅರೋಗ್ಯ ನಿರೀಕ್ಷಣಾಧಿಕಾರಿ. ಎಂ.ಧರ್ಮನಗೌಡ ಪ್ರತಿಘ್ನಾ ವಿಧಿ ಭೋದಿಸಿ, ಕುಷ್ಠರೋಗಿಗಳನ್ನು ಸಮಾಜದಲ್ಲಿ ಕಳಂಕಿತರಾನ್ನಾಗಿ ಕಾಣಬಾರದು ಮತ್ತು ಸಮಾಜಿಕ ಅನಿಷ್ಟ ಪದ್ದತಿ ಬಿಟ್ಟು ಜನ ಸಾಮಾನ್ಯ ರಂತೆ ಕಾಣಬೇಕು ಅಗ ಮಾತ್ರ ದೇಶದಲ್ಲಿ ಮಹ್ಮಾತ ಗಾಂಧಿಜೀಯವರ ಕನಸು ನನಸಾಗುತ್ತದೆ ಎಂದು ಮಾತನಾಡಿದರು.