You are currently viewing ಹೊಸಪೇಟೆಯಲ್ಲಿ ಕೋತಿಗೆ ಹುಚ್ಚಾಟ. ಜನರಿಗೆ ಪ್ರಾಣ ಸಂಕಟ.

ಹೊಸಪೇಟೆಯಲ್ಲಿ ಕೋತಿಗೆ ಹುಚ್ಚಾಟ. ಜನರಿಗೆ ಪ್ರಾಣ ಸಂಕಟ.

  • Post category:Uncategorized

ವಿಜಯನಗರ…ಹೊಸಪೇಟೆ ನಗರದಲ್ಲಿ ಹುಚ್ಚು ಕೋತಿಯ ಹಾವಳಿಗೆ ಜನ ಹತ್ತುತ್ತರಿಸಿ ಹೋಗಿದ್ದಾರೆ. ಕಳೆದ ಒಂದು ವಾರದಿಂದ  ಹತ್ತಕ್ಕೂ ಹೆಚ್ಚು ಜನಗಳ ಮೇಲೆ ದಾಳಿ ನಡೆಸಿರುವ ಹುಚ್ಚು ಕೋತಿ, ಜನಸಾಮಾನ್ಯರಲಿ ಆತಂಕ ಹೆಚ್ಚಿಸಿದೆ.

ರಾತ್ರಿ ಹೊತ್ತು ಜನಗಳ ಮೇಲೆ ದಾಳಿ ನಡೆಸುವ ಈ ಹುಚ್ಚು ಕೋತಿ, ಮನೆಯಿಂದ ಆಚೆ ಮಲಗಿದವರನ್ನು ಹೆಚ್ಚು ಟಾರ್ಗೆಟ್ ಮಾಡುತ್ತಿದೆ.  ಹೊಸಪೇಟೆಯ ಈಶ್ವರ ನಗರ, ಕಂಚಗಾರ ಪೇಟೆ, ಆಕಾಶವಾಣಿ ಪ್ರದೇಶದಲ್ಲಿ ಸಂಚರಿಸುವ ಈ ಕೋತಿ, ಕಂಡ ಕಂಡವರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿದೆ.

ಗಾಯಾಳುಗಳು ಹೊಸಪೇಟೆ ನಗರದ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ಮರಳುತ್ತಿದ್ದಾರೆ. ಕೋತಿಯ ಹಾವಳಿಗೆ ಬೆಚ್ಚಿ ಬಿದ್ದಿರುವ ಈ ಪ್ರದೇಶದ ಜನಸಾಮಾನ್ಯರು,ಕೋತಿಯನ್ನು ಆದಷ್ಟು ಬೇಗ ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ.

ಇತ್ತ ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ಹೊಸಪೇಟೆ ನಗರದ ಸರ್ಕಾರಿ 100 ಹಾಸಿಗೆ ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ ಎಂದು ಕೂಡ ಜನಸಾಮಾನ್ಯರು ಆರೋಪಿಸಿದ್ದಾರೆ.. ಕೋತಿ ಕಡಿತಕ್ಕೆ ಕೊಡಲಾಗುವ ಚುಚ್ಚುಮದ್ದು ಅಂದಾಜು 2,000ಕ್ಕೂ ಹೆಚ್ಚು ಬೆಲೆಯ ಔಷಧಿಯಾಗಿದ್ದು, ಹೊಸಪೇಟೆಯ ಈ ಸರ್ಕಾರಿ ಆಸ್ಪತ್ರೆಯಲ್ಲಿ ಈ ಔಷಧೀಯ ಕೊರತೆ ಎದ್ದು ಕಾಣುತ್ತಿದೆ ಎಂದು ಹೇಳಲಾಗಿದೆ,

ಹಾಗಾಗಿ ಈ ಇಲ್ಲಿನ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಈ ಕೋತಿಯನ್ನು ಸೆರೆ ಹಿಡಿಯುವುದರ ಜೊತೆಗೆ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಔಷಧಿಯನ್ನು ಒದಗಿಸಬೇಕೆಂದು ಸಾಮಾಜಿಕ ಹೋರಾಟಗಾರ ಸಂತೋಷ್ ಕಲ್ಮಠ ಒತ್ತಾಯಿಸಿದ್ದಾರೆ.

ವರದಿ:ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ..