ವಿಜಯನಗರ.(ಹೊಸಪೇಟೆ). ಖಾಸಗಿ ವೈಧ್ಯರೊಬ್ಬರು ಕ್ಷಯ ರೋಗಿಯನ್ನ ದತ್ತು ಪಡೆದು ವೈಧ್ಯ ಕ್ಷೇತ್ರಕ್ಕೆ ಮಾದರಿಯಾಗಿದ್ದಾರೆ. ಹೌದು ಹೊಸಪೇಟೆ ನಗರದ ಆಝಾದ್ ಆಸ್ಪತ್ರೆಯ ವೈದ್ಯ ಸಿಕಂದರ್ ಭಾಷ ಎನ್ನುವ ವೈಧ್ಯರು, ನಗರದ ಕ್ಷಯ ರೋಗಿಯನ್ನ ಆರು ತಿಂಗಳ ಕಾಲ ರೋಗಿಯನ್ನ ದತ್ತು ಪಡೆದು ಉಚಿತವಾಗಿ ಪೌಷ್ಠಿಕ ಆಹಾರವನ್ನ ಕೊಡುವ ಮೂಲಕ ಕ್ಷಯ ರೋಗವನ್ನ ಗುಣಪಡಿಸುವ ಭರವಸೆಯನ್ನ ರೋಗಿಗೆ ನೀಡಿದ್ದಾರೆ.
ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕ್ಷಯರೋಗ ನಿರ್ಮೂಲನ ಕೇಂದ್ರ ಹಾಗೂ ತಾಲೂಕು ಅರೋಗ್ಯಧಿಕಾರಿಗಳ ಕಚೇರಿ ಹೊಸಪೇಟೆ ಇವರ ಸಮ್ಮುಖದಲ್ಲಿ ರಾಷ್ಟ್ರೀಯ ಕ್ಷಯಮುಕ್ತ ಕಾರ್ಯಕ್ರಮದ ನಿಕ್ಷಯ ಮಿತ್ರ ಅಡಿಯಲ್ಲಿ ಇಂದು ಅಝದ್ ಆಸ್ಪತ್ರೆಯ ವೈದ್ಯ ಡಾ. ಸಿಕಂದರ್ ಭಾಷ ರವರು ಒಂದು ಕ್ಷಯರೋಗಿಯನ್ನು ಆರು ತಿಂಗಳ ವರಿಗೆ ದತ್ತು ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಷಯ ರೋಗ ನಿಯಂತ್ರಣ ಮೇಲ್ವಿಚಾರಕ ಕಾಸಿಂಸಾಬ್, ರೋಗಿಗೆ ಬೇಕಾಗುವ ಔಷದ ಚಿಕಿತ್ಸೆಯನ್ನ ಸರ್ಕಾರ ಕೊಡಲಿದೆ, ಆದರೆ ಚಿಕಿತ್ಸೆಯ ಜೊತೆಗೆ ರೋಗಿಗೆ ಪೌಷ್ಠಿಕ ಆಹಾರ ಕೂಡ ಅವಶ್ಯಕವಾಗಿ ಬೇಕಾಗುತ್ತದೆ, ಈ ಹಿನ್ನೆಲೆಯಲ್ಲಿ ಸಿಕಂದರ್ ಭಾಷ ಅವರು ರೋಗಿಗೆ ಆರು ತಿಂಗಳು ಕಾಲ ರೋಗಿಗೆ ಬೇಕಾಗುವ ಪೌಷ್ಠಿಕ ಆಹಾರ ಕೊಡಲು ಮುಂದಾಗಿ ಕ್ಷಯ ರೋಗ ನಿರ್ಮೂಲನೆಗೆ ಕೈ ಜೋಡಿಸಿದ್ದಾರೆ.
ಇನ್ನಿತರ ಸಮುದಾಯ, ಹಾಗೂ ಸಂಘ ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳು, ಖಾಸಗಿ ಗಣಿ ಕಂಪನಿಯ ಮಾಲೀಕರು, ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಈ ರೀತಿಯ ನೆರವನ್ನ ಕ್ಷಯ ರೋಗಿಗಳಿಗೆ ನೀಡಬೇಕಾಗಿದೆ. ಈ ಮೂಲಕ 2025ಕ್ಕೆ ಕ್ಷಯ ಮುಕ್ತ ಕರ್ನಾಟಕ ಮಾಡಲು ಖಾಸಿಂಸಾಬ್ ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಕ್ಷಯ ರೋಗ ಮೇಲ್ವಿಚಾರಕ ಕಾಸಿಂ ಸಾಬ್, ಡಾ. ಸಿಕಂದರ್ ಭಾಷಾ, ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.