You are currently viewing ಇನ್ನು ಮುಂದೆ ವಿಜಯನಗರ ಜಿಲ್ಲೆಯಲ್ಲಿ ತಂಗುವ ವಿದೇಶಕರಿಗೆ ಸಿ ಫಾರ್ಮ್ ಕಡ್ಡಾಯ

ಇನ್ನು ಮುಂದೆ ವಿಜಯನಗರ ಜಿಲ್ಲೆಯಲ್ಲಿ ತಂಗುವ ವಿದೇಶಕರಿಗೆ ಸಿ ಫಾರ್ಮ್ ಕಡ್ಡಾಯ

  • Post category:Uncategorized

ಇನ್ನು ಮುಂದೆ ವಿಜಯನಗರ ಜಿಲ್ಲೆಯಲ್ಲಿ ತಂಗುವ ವಿದೇಶಿಕರಿಗೆ ಸಿ ಫಾರ್ಮ್ ಕಡ್ಡಾಯ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿರುವ ಲಾಡ್ಜ್, ಹೋಟೆಲ್, ಗೆಸ್ಟ್ ಹೌಸ್, ಹೋಂ ಸ್ಟೇ, ಪ್ರತ್ಯೇಕ ಮನೆ, ಧರ್ಮಶಾಲ, ಯುನಿವರ್ಸಿಟಿ ವಿದ್ಯಾ ಸಂಸ್ಥೆ ಮಾಲೀಕರಿಗೆ ಈ ಸಂದೇಶವನ್ನು ಇಂದು ರವಾನಿಸಿದ್ದಾರೆ.

ವಿದೇಶಿಗರ ಕಾಯ್ದೆ 1946ರ ಪ್ರಕಾರ ಕಾಲಂ ಏಳರಂತೆ, ವಿದೇಶಿಗರು ವಾಸ್ತವ ಪಡೆದದು 24 ಗಂಟೆಗಳ ಒಳಗಾಗಿ, ಫಾರ್ಮ್ ಸಿ ಭರ್ತಿ ಮಾಡಿ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ತಲುಪಿಸುವಂತೆ ತಿಳಿಸಿದ್ದಾರೆ. ಒಂದು ವೇಳೆ ಈ ನಿಯಮವನ್ನ ಉಲ್ಲಂಘನೆ ಮಾಡಿದ್ದಲ್ಲಿ ಸಂಬಂಧಪಟ್ಟ ಮಾಲೀಕರು ವ್ಯವಸ್ಥಾಪಕರ ವಿರುದ್ಧ ವಿದೇಶೀಯರ ಕಾಯ್ದೆ 1946 ಕಾಲಂ 14 ರ ಪ್ರಕಾರ 5 ವರ್ಷ ಜೈಲು ಶಿಕ್ಷೆ ಮತ್ತು ದಂಡದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹಾಗಾಗಿ ವಿಜಯನಗರ ಜಿಲ್ಲೆಯಲ್ಲಿರುವ ಪ್ರತಿಯೊಂದು ಹೋಟೆಲ್ ಮಾಲೀಕರು ಮತ್ತು ಲಾಡ್ಜ್ ಮಾಲೀಕರು ಕಡ್ಡಾಯವಾಗಿ ಈ ನಿಯಮವನ್ನು ಪಾಲನೆ ಮಾಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.