ವಿಜಯನಗರ..ವಿಶ್ವವಿಖ್ಯಾತ ಹಂಪಿ ಸರಿ ಸುಮಾರು 25 ಚದುರು ಕಿಲೋಮಿಟರ್ ವ್ಯಾಪ್ತಿಯಲ್ಲಿ ವ್ಯಾಪಿಸಿದೆ,ಇಲ್ಲಿರುವ ಸಾವಿರಾರು ಸ್ಮಾರಕಗಳು ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತವೆ,ಇನ್ನು ಹಂಪಿಗೆ ಬೇಟಿ ಕೊಟ್ಟ ಪ್ರತಿಯೊಬ್ಬ ಪ್ರವಾಸಿಗರು ತಮ್ಮದೇ ಅಭಿರುಚಿಗೆ ತಕ್ಕಂತೆ ಪ್ರವಾಸಮಾಡುವುದಕ್ಕೆ ಇಲ್ಲಿ ಸಾಕಷ್ಟು ಅವಕಾಶಗಳಿವೆ,ಕೆಲವರು ಕಾಲ್ನಡಿಗೆಯಲ್ಲಿ ಹಂಪಿಯ ವೀಕ್ಷಣೆಮಾಡಿದ್ರೆ ಇನ್ನೂ ಕೆಲವರಿಗೆ ನದಿಯಲ್ಲಿ ತೇಲುವ ಮುಖಾಂತ್ರ ಹಂಪಿಯ ಸ್ಮಾರಕಗಳ ವೀಕ್ಷಣೆಮಾಬಹುದು.
ಹೌದು ಹೀಗೆ ಸಣ್ಣದೊಂದು ತೆಪ್ಪದಲ್ಲಿ ಕುಳಿತು ಹಂಪಿಯ ಋಷಿಮುಖ ಪರ್ವತ ಮತ್ತು ಗಂಧಮಾದವ ಪರ್ವತ ಮದ್ಯೆ ಹರಿಯುವ ಈ ತುಂಗಭದ್ರ ನದಿಯಲ್ಲಿ ತೇಲುತ್ತಾ ಹೊದ್ರೆ ಸಾಕಷ್ಟು ಸ್ಮಾರಕಗಳನ್ನ ನೀವು ನೋಡುವುದಕ್ಕೆ ಸಾದ್ಯ, ಪ್ರಮುಖವಾಗಿ ಕೋಟಿಲಿಂಗ ಮತ್ತು ಎರಡು ನಂದಿ ವಿಗ್ರಹಗಳು, ಹಾಗೆ ಲಕ್ಷ್ಮಿ ದೇವಸ್ಥಾನ, ಪಕ್ಕದಲ್ಲೇ ಇರುವ ಈ ಚಿಕ್ಕ ಗುಹೆ, ಬಲರಾಮ ದೇವಸ್ಥಾನ ಸೇರಿದಂತೆ ಇನ್ನು ಹಲವು ಚಿಕ್ಕ ಪುಟ್ಟ ಸ್ಮಾರಗಳು ತೆಪ್ಪದಲ್ಲಿ ತೇಲುತ್ತ ಹೋದ್ರೆ ನೋಡುವುದಕ್ಕೆ ಸಾದ್ಯ,ಇನ್ನು ಹಂಪಿಯಲ್ಲಿನ ಕೆಲವು ಸ್ಮಾರಕಗಳು ಕಾಲ್ನಡಿಗೆ ನಡೆದುಕೊಂಡು ಬಂದ್ರೆ ವೀಕ್ಷಣೆಮಾಡುವುದಕ್ಕೆ ಸಾದ್ಯವಿಲ್ಲ, ಯಾಕೆಂದ್ರೆ ಇಲ್ಲಿ ತುಂಗಭದ್ರ ನದಿ ಹರಿದಿದೆ, ನದಿಯ ಅಕ್ಕಪಕ್ಕದಲ್ಲಿ ಇಉವ ಸ್ಮಾರಕಗಳಿಗೆ ಹೋಗಬೇಕಾದರೆ ಹೀಗೆ ತೆಪ್ಪದಲ್ಲಿ ಸಂಚಾರ ನಡೆಸಿದ ಕಡಿಮೆ ಸಮಯ ಮತ್ತು ಸರಳವಾಗಿ ಸ್ಮಾರಕ ವೀಕ್ಷಣೆಮಾಡಬಹುದು.
ಇನ್ನು ಸಹಜವಾಗಿ ಇಡೀ ಹಂಪಿಯನ್ನ ಕಾಲ್ನಡಿಗೆಯಲ್ಲಿ ನೋಡುವ ಪ್ರವಾಸಿಗರು ಶ್ರೀ ಕೋದಂಡ ರಾಮಸ್ವಾಮಿ ದೇವಸ್ಥಾನದ ಬಳಿಗೆ ಬರುತಿದ್ದಂತೆ ಈ ರೀತಿ ನದಿಯ ತೆಪ್ಪದಲ್ಲಿ ತೇಲುತ್ತಾ ಅಕ್ಕಪಕ್ಕದ ಬೆಟ್ಟ ಗುಡ್ಡಗಳಲ್ಲಿನ ಸ್ಮಾರಕ ವೀಕ್ಷಣೆಮಾಡಲು ಮುಂದಾಗುತ್ತಾರೆ.
ಈ ರೀತಿ ತೆಪ್ಪದಲ್ಲಿ ತೇಲುತ್ತ ಸ್ಮಾರಕ ನೋಡುವ ಖುಷಿಯೇ ಬೇರೆ ಎನ್ನುತ್ತಾರೆ ಪ್ರವಾಸಿಗರು, ಹಾಗಾಗಿ ಇತ್ತೀಚೆಗೆ ಹಂಪಿಗೆ ಬರುವ ಪ್ರವಾಸಿಗರು ರಾಮ ಲಕ್ಷ್ಮಣ ದೇವಸ್ಥಾನದ ಮುಂಬಾಗದಲ್ಲಿರುವ ಈ ನದಿಯ ಕಡೆ ಪ್ರಯಾಣ ಬೆಳಸುವುದು ಹೆಚ್ಚಾಗಿ ಕಂಡು ಬರುತ್ತಿದೆ, ಅದರಲ್ಲೂ ವಿದೇಶಿ ಪ್ರವಾಸಿಗರು ಈ ತೆಪ್ಪಗಳಲ್ಲಿ ಕುಳಿತು ನದಿಯಲ್ಲಿ ಸಂಚರಿಸುವುದು ಸರ್ವೇ ಸಾಮಾನ್ಯೆವಾಗಿದೆ,ವೇಳೆ ನೀವೇನಾದ್ರು ಹಂಪಿಯ ಪ್ರವಾಸ ಕೈಗೊಂಡ್ರು ಈ ಸ್ಥಳಕ್ಕೆ ಬಂದು ಈ ತೆಪ್ಪಗಳಲ್ಲಿ ತೇಲುತ್ತಾ ಹಂಪಿಯ ಸ್ಮಾರಕ ವೀಕ್ಷಣೆಮಾದುವುದನ್ನ ಮಾತ್ರ ಮರೆಯಬೇಡಿ, ಒಂದು ವೇಳೆ ಮರೆತದ್ದೇ ಆದ್ರೆ ನಿಮ್ಮ ಹಂಪಿ ಪ್ರವಾಸ ಪರಿಪೂರ್ಣವಾಗಲು ಸಾದ್ಯೆವೇ ಇಲ್ಲ,
ವರದಿ..ಸುಬಾನಿ ಪಿಂಜಾರ. ವಿಜಯನಗರ.